ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫೮ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ ಈ ರೀತಿಯಲ್ಲಿ ಸ್ನೇಹ ಬೆಳೆಯಿತಲ್ಲಾ ಎಂಬ ಸಂತೋಷವನ್ನು ತೋರ್ಪಡಿಸುವುದಕ್ಕಾಗಿ ಆ ಕಾಡುಜನರ ಮುಖಂಡರಾದ ಪ್ರಭುಗಳೆ' ಲ್ಲರೂ ಕಾತರರಾಗಿದ್ದರು. ಅವರಲ್ಲಿ ಒಬ್ಬ ಆಯಗಾರನು ಹೊರಕ್ಕೆ ಬಂದು ನಿಂತು ಇತರರನ್ನು ಕುರಿತು--ಎಲ ಅ ಪ್ಪಾ, ಅಣ್ಣಂದಿರಾ,. ಬನ್ನಿ, ನಮ್ಮ ಮನಸ್ಸಿಗೆ ಈ ಸಮಯದಲ್ಲಿ ಉಂಟಾದ ಹರ್ಷವನ್ನು ನಮ್ಮವರಲ್ಲಿ ರೂಢಿಯಾಗಿರುವ ಕುಣಿದಾಟದಿಂದ ತೋರಿಸೋಣ, ಎಂದು ತನ್ನ ಕತ್ತಿಯನ್ನು ಝಳಪಿಸುತಾ ಕೂಗಿದನು. ಆಗ ಆ ಕಾಡುಜನರೆಲ್ಲಾ ತಮ್ಮ ಆಯುಧಗಳನ್ನು ಹಿಡಿದುಕೊಂಡು ಹುಚ್ಚು ಹುಚ್ಚಾಗಿ ಅರಚಿಕೊಳ್ಳು ತಾ ಕಾಡ ಕುಣಿತವನ್ನು ಕುಣಿದರು, ತರು ವಾಯ ಅವರ ಪದ್ದತೀ ಪ್ರಕಾರ ನಮ್ಮಗಳಿಗೆ ಉಪಚಾರವನ್ನು ಮಾಡಿ ನಮ್ಮನ್ನು ಕಳುಹಿಸಿಕೊಟ್ಟರು. ಇದುವರೆಗೆ ಎಲ್ಲಾ ಹುದ್ವಿನ ಸರ ವನ್ನು ಎತ್ತಿದಹಾಗೆ ಸುಲಲಿತವಾಗಿಯೇ ಸಾಗಿತು. ದಂಡಿನವರು ಮಾಡುವ ಕಾರ್ಯನಿರ್ವಾಹವೆಲ್ಲವೂ ಕಷ್ಟವಿಲ್ಲದೆ ನಡೆಯತಕ್ಕದ್ದೆಂದು ನನಗೆ ತೋರಿತು, ಆದರೆ ಒಂದೆರಡು ದಿನಗಳಲ್ಲಿಯೇ ನನಗೆ ಅನುಭವ ಸಾಲದೆಂದು ಗೊತ್ತಾಯಿತು. ಆ ಜನರಲ್ಲಿ ಸ್ನೇಹವನ್ನು ಮಾಡಿಕೊಂಡು ಅವರು ನಮ್ಮ ದೊರೆಗೆ ಕಪ್ಪ ಮೊದಲಾದ್ದನ್ನು ಕೊಡತಕ್ಕದ್ದೆಂಬ ನಿಷ್ಕರ್ಷೆಯಿಂದ ಭೀಮ ರಾಜರು ಆ ಸೇನೆಯೊಡನೆ ಆ ಊರನ್ನು ಬಿಟ್ಟು ಹೊರಟರು. ನಾನೂ ಅವರ ಸಂಗಡಲೇ ಇದ್ದೆ. ಒಂದು ದಿನ ಮಧ್ಯಾಹ್ನದ ಪೈಣ ಆದ ತರುವಾಯ ನನಗೆ ದಾರಿತಪ್ಪಿ ಹೋಯಿತು ಎಲ್ಲಿ ನೋಡಿದರೂ ಗಟ್ಟ ಬೆಟ್ಟ ಗಳು, ದಾರಿ ಕಟ್ಟಿ ಕೊಂಡು ತುಂಬಿ ಹರಿಯುವ ಕಳ್ಳ ತೊರೆ ಗಳು, ಕೊಲ್ಲಿಗಳು, ಒಂದು ಕಡೆ ನೋಡಿದರೆ ಆಕಾಶಕ್ಕೆ ಊರೇ ಕೊಟ್ಟಂತೆ ಕಾಣಿಸುವ ಬಹು ಎತ್ತರವಾದ ಮರಗಳು, ಇನ್ನೊಂದು ಕಡೆ ಎಷ್ಟು ದೂರ ನೋಡಿದಾಗ್ಯೂ ಹೆಜ್ಜೆ ಯನ್ನು ಇಡುವದಕ್ಕೆ ಸಹಿತವಾಗಿ ಸ್ಥಳವಿಲ್ಲದೆ ಇರುವ ಹಾಗೆ ದಟ್ಟವಾಗಿ ಬೆಳೆದು ಹಣಿದುಕೊಂಡಿರುವ ಮುಳ್ಳು ಪೊದೆಗಳು, ಇವುಗಳೆಲ್ಲಾ ಸಿಕ್ಕಿದವು. ಕೈಲಿದ್ದ ಆಯುಧ ಗಳಿ೦ದ ಕೈಲಾದಮಟ್ಟಿ ಗೂ ಮರಮುಂಡಿಗೆಯನ್ನು ಕಡಿದುಕೊಂಡು