ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧) ಸುಮತಿ ಮದನಕುಮಾರರ ಚರಿತ್ರೆ ೨ರ್ಜಿ ದಾರಿಯನ್ನು ಮಾಡಿಕೊಂಡು ಹೊರಟೆವು. ನಾವು ಮಾಡಿದ ಅ ಪ. ರಾಧಕ್ಕೆ ಈ ಕಷ್ಟ ಸಾಲದೆಂದು ದೇವರ ಮನಸ್ಸಿಗೆ ತೋರಿತೋ ಏನೋ ! ಸ್ವಲ್ಪ ದೂರ ಇ೦ಥಾ ಘೋರಾರಣ್ಯದಲ್ಲಿ ನಾವು ಹೊರಡಲು, ನಾಲ್ಕು ಕಡೆಯಿಂದಲೂ ಕವಣೇಕಲ್ಲು ಬಂದು ಬೀಳುವುದಕ್ಕೆ ಮೊದ ಲಾಯಿತು. ಕೂಡಲೆ ಸರಳುಗಳೂ ಬಂದು ಬೀಳುವುದಕ್ಕೆ ಮೊದಲಾ ದವು. ಎಲ್ಲಾ ದಿಕ್ಕಿನಿಂದಲೂ ಇಂಥಾ ಮೃತ್ಯುವಿನ ಮಳೆ ಸುರಿಯುತ್ತಾ ಬಂತು, ನಮ್ಮ ಸೇನೆಯಲ್ಲಿ ಅನೇಕರು ಪೆಟ್ಟು ತಗಲಿ ಸತ್ತು ಹೋದರು. ಯಾರು ಎಲ್ಲಿ ಅವಿತುಕೊಂಡರೆ ಅವರು ಅಲ್ಲಿಯೇ ಪೆಟ್ಟು ತಗಲಿ ಒರಗು ತಿದ್ದರು, ನಮ್ಮ ಸೇನೆಯವರೂ ದಿಕ್ಕು ದಿಕ್ಕಿಗೆ ಕೋವಿಯನ್ನು ಹಾರಿಸಿದರು, ಆದರೆ ಪ್ರಯೋಜನವೇನು ? ನಮ್ಮ ಏಟು ಯಾರಿಗೂ ತಗಲಲಿಲ್ಲ, ಆದ್ದರಿಂದ ಯಾರೂ ಸಾಯಲಿಲ್ಲ, ದಿಕ್ಕುಗಳೂ ಆಕಾಶವೂ ನಮ್ಮ ಮೇಲೆ ಮುನಿದಂತೆ ತೋರಿತು, ಕಣ್ಣಿಗೆ ಕಾಣದ ಕೈಗಳಿಂದ ಬರುವ ಸೆಟ್ಟ ನ್ನು ತಪ್ಪಿಸಿಕೊಳ್ಳುವದು ಹೇಗೆ ? ನಮ್ಮ ಮಂದಿಯೆಲ್ಲಾ ಛಿನ್ನ ಭಿನ್ನ ವಾಗಿ ಹೋಯಿತು, ಕೊನೆಗೆ ನಮಗೆ ಬಂದ ದುರ್ದಶೆ ಯನ್ನು ಏನೆಂದು ಹೇಳಲಿ ! ಭೀಮರಾಜರ ಕಾಲಿಗೆ ಒ೦ದು ಅ೦ಬು ತಗಲಿತು, ಅವರ ಕುದುರೆಯು ಏಟು ಬಿದ್ದು ಸತ್ತು ಹೋಯಿತು. ಅಡಿಕೆ ಕಡಿಯುವಷ್ಟು ಹೊತ್ತಿನಲ್ಲಿ ಯೇ ಅವರ ಪಕ್ಕೆಗೆ ಒಂದು ಬಾಣ ತಗಲಿತು. ನಾನೂ ಅವರೂ ಮುಂದೆ ಓಡುವದಕ್ಕೆ ಮೊದಲು ಮಾಡಿ ದೆವು. ಆದರೆ ಅವರಿಗೆ ರಕ್ತ ಬಹಳವಾಗಿ ಸುರಿದು ಹೋಗಿತ್ತು. ನಿತ್ರಾಣವಾಗಿ ಅವರು ನೆಲಕ್ಕೆ ಬಿದ್ದು ಬಿಟ್ಟರು. ಆ ಸಮಯದಲ್ಲಿ ಅಲ್ಲಿನ ಕಾಡು ಜನರಲ್ಲಿ ಒಬ್ಬಿಬ್ಬರು ಮರದ ಪೊಟ್ಟ ರೆಗಳಿಂದಲೂ ಹೊದರುಗಳಿಂದಲೂ ತಲೆಯನ್ನು ಈಚೆಗೆ ಹಾಕಿ ದರು. ಅವರ ಮುಖವನ್ನು ಕಂಡ ಕೂಡಲೆ ನನಗೆ ಅತ್ಯಾಗ್ರಹವುಂ ಟಾಯಿತು. ಕೈಲಿದ್ದ ಕತ್ತಿಯನ್ನು ಝಳಪಿಸುತ್ತಾ ಹೊರಟೆ. ಆ ಹೇಡಿಗಳು ಓಡುವದಕ್ಕೆ ಆರಂಭಿಸಿದರು. ನಾನು ಅವರ ಬೆನ್ನ ಹತ್ತಿ ೪-೫ ಜನರನ್ನು ತುಕ್ಕಡತುಕ್ಕಡ ಮಾಡಿದೆ. ಕೂಡಲೆ ಅಲ್ಲಿದ್ದ ಒಂದೊಂದು ಹೊದರಿನಿಂದಲೂ ಹತ್ತು ಹತ್ತು ಕತ್ತೆ ಕಿರಿಚಿದ ಹಾಗೆ