ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧). ಸುಮತಿ ಮದನಕುಮಾರರ ಚರಿತ್ರೆ ೨೬೧ ಗಟ್ಟದ ಕೆಳಗಿನವನು ಆಗ ನನಗೆ ಬಿದ್ದಿದ್ದ ಪೆಟ್ಟಿನ ಯಾತನೆ ಸ್ವಲ್ಪ ತೋರಿತು. ಯಾವುದೋ ಒಂದು ಬಗೆಯ ಕಾಡುಸೊಪ್ಪನ್ನು ತರೆದು ಕಲ್ಲಮೇಲೆ ಅರೆದು ಅದನ್ನು ನನ್ನ ಗಾಯಕ್ಕೆ ಮೆತ್ತಿದೆ.~ ಅಲ್ಲಿದ್ದ ಕಾಡುಗೆಡ್ಡೆ ಯನ್ನೂ ಹಣ್ಣುಗಳನ್ನೂ ಕಿತ್ತು ತಿಂದೆ. ಕತ್ತಲೆ ಯಾಯಿತು. ಅತ್ಯಂತ ಆಯಾಸದಿಂದಲೂ ಬಹು ದಿನಗಳಿಂದ ನಿದ್ರೆ ಇಲ್ಲದ್ದರಿಂದಲೂ ಒಂದು ಮರದ ಕೆಳಗೆ ಮಲಗಿಕೊಂಡೆ, ಎಚ್ಚರವೇ ಇಲ್ಲದೆ ನಿದ್ರೆ ಬ೦ತು, ಬೆಳಗ್ಗೆ ಎದ್ದು ನೋಡುವಲ್ಲಿ ಗಾಯದ ಯಾತನೆ ಸ್ವಲ್ಪ ಕಡಮೆಯಾಗಿತ್ತು, ಹೀಗೆಯೇ ಕಾಡಿನಲ್ಲಿ ಹೋಗುತಿರುವಾಗ ಒ೦ದು ನದಿ ಕಾಣಿಸಿತು. ಅದರ ತೀರದಲ್ಲಿ ಕಾಡುಜನರ ಗುಡಿಸಲಿನ ಗುಂಪು ಕಾಣಿಸಿತು, ಅದನ್ನು ಕಂಡ ಕೂಡಲೆ ನನಗೆ ಭಯವುಂಟಾ ಯಿತು, ಶತ್ರುಗಳ ದೆಸೆಯಿಂದ ಭಯ ಪಟ್ಟು ಪಟ್ಟು, ಅವರ ಪೆಟ್ಟನ್ನು ಸಹಿಸಿ ಸಹಿಸಿ, ಸಾಕಾಗಿ, ಕಳೆದ ಮೂರು ದಿವಸದಿಂದ ಸ್ವಲ್ಪ ಭೀತಿ ತಪ್ಪಿತ್ತು. ಈಗ ಪುನಃ ಇವರ ಗುಂಪಿಗೆ ಹೋಗಿ ಅವರಿಗೆ ಪ್ರಾಣ ವನ್ನು ಒಪ್ಪಿಸಲೆ? ಅಥವಾ ಕಾಡಬಿದ್ದು ಹಿಂದಕ್ಕೆ ಹೊರಟು ಹೋಗಲೆ? ಈ ಯೋಚನೆ ಬಹಳವಾಗಿ ಮನಸಿಗೆ ಹತ್ತಿತು. ಆದರೆ ಏಕಾಕಿ ಯಾಗಿದ್ದು ಕಾಡಿನಲ್ಲಿ ಮೃ ಗಾದಿಗಳ ಭಯದಿಂದಲೂ ಆಹಾರಾದಿಗಳು ಇಲ್ಲದೆ ಉಂಟಾದ ಕಷ್ಟದಿಂದಲೂ ಪೇಚಾಡಿ ಸಾಕಾಗಿದ್ದ ಕಾರಣ, ಈ ಕಾಡುಜನಗಳ ಕೈಲಿ ನನ್ನ ಪ್ರಾಣ ಹೋದರೂ ಹೋಗಲಿ, ಜನರ ಗೋಷ್ಠಿ ಯಲ್ಲಿ ಇರಲೇ ಬೇಕೆಂಬ ಆಶೆಯು ಹುಟ್ಟಿ ತು. ಆದ್ದರಿಂದ ಆ ಗುಡಿಸಲುಗಳಿದ್ದ ಸ್ಥಳಕ್ಕೆ ಹೋಗಿ ಒಂದು ಗುಡಿಸಲಿನೊಳಕ್ಕೆ ನುಗ್ಗಿ ದೆನು. ಒಳಗಿನಿಂದ ಒಬ್ಬ ಮುದುಕನು ಈಚೆಗೆ ಬಂದು ನನ್ನ ನ್ನು ಕ೦ಡು ಒಳಕ್ಕೆ ಕರೆದುಕೊಂಡು ಹೋಗಿ ಕೂರಿಸಿಕೊಂಡು ಅವರ ಮಾತಿ ನಲ್ಲಿ ನನ್ನ ಪೂರೋತ್ತರವನ್ನು ವಿಚಾರಿಸಿದನು. ನನಗೆ ಆ ಭಾಷೆ ಸ್ವಲ್ಪ ಗೊತ್ತಿದ್ದ ಕಾರಣ, ಅಲ್ಲಿಯೊಂದು ಇಲ್ಲಿಯೊಂದು ಮಾತನಾಡಿ ಆ ಮುದುಕ ಕೇಳಿದ ಪ್ರಶ್ನೆಗಳಿಗೆ ಉತ್ತರವನ್ನು ಕೊಟ್ಟೆ ನು. ತರುವಾಯ ಇದ್ದದನ್ನು ನನಗೆ ಇಕ್ಕಿ ತಾವು ಉಪವಾಸವಾಗಿರುತ್ತಾ, ಸಾಯಂಕಾಲದ ಹೊತ್ತಿಗೆ ಕಾಡು ಮೃಗಗಳನ್ನೂ ಹಕ್ಕಿಗಳನ್ನೂ ಹೊಡೆದುಕೊಂಡು.