ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-೨೨] ಸುಮತಿ ಮದನ ಕುಮಾರರ ಚರಿತ್ರೆ ೨೬4 'ಒಂದೊಂದು ಲೋಹಗಳು, ಎಂದು ತಿಳಿದಿದ್ದರು, ಆದರೆ ಚಿನ್ನ ಬೆಳ್ಳಿ ಗಳನ್ನು ಕಂಡಾಗಲೆಲ್ಲಾ ಹೆಚ್ಚಾದ ಆಸ್ಥೆ ಯನ್ನೂ ಆಶೆಯನ್ನೂ ನಾನು ತೋರ್ಪಡಿಸಿದ್ದರಿಂದ, ನನ್ನ ನ್ನು ನೋಡುವದಕ್ಕೆ ಬಂದವರೆಲ್ಲಾ ಒಂದು ಚಿನ್ನದ ಮುರುಕನ್ನಾ ಗಲಿ ಬೆಳ್ಳಿ ಮುರುಕನ್ನಾ ಗಲಿ ನನಗೆ ಉಪಹಾರ ವಾಗಿ ತಂದು ಕೊಡುತಿದ್ದರು. ಇದೆಲ್ಲವನ್ನೂ ಕೂಡಿದಮಟ್ಟಿಗೂ ಸಂಪಾದಿಸಿಕೊಂಡು ನಾನು ಊರಿಗೆ ಬಂದು ಸೇರಿದೆ. ಹಣ್ಣು ಹಣ್ಣು ಮುದುಕರಾಗಿದ್ದ ನನ್ನ ತಂದೆತಾಯಿಗಳಿಬ್ಬರೂ ಬದುಕಿದ್ದರು. ನನ್ನ ನ್ನು ಕಂಡ ಕೂಡಲೆ ಅವರಿಗೆ ವಿಪರೀತವಾಗಿ ಆನಂದ ಉಂಟಾ ಯಿತು. ಸ್ವಲ್ಪ ದಿವಸದ ಮೇಲೆ ಮದುವೆಯಾದೆ, ಭಾಗ್ಯಹೀನರಾದ ಈ ಮಕ್ಕಳು ಹುಟ್ಟಿದರು. ಸ್ವಲ್ಪ ಭೂಮಿಕಾಣಿಗಳನ್ನು ಮಾಡಿಕೊಂಡು ಆರಂಬವನ್ನು ಮಾಡುತ್ತಾ, ಇದ್ದದರಲ್ಲಿ ನೆಮ್ಮದಿ ಕುಳವೆನ್ನಿ ಸಿಕೊಂಡೆ. ಹೀಗೆ ಎರಡು ವರ್ಷ ಸುಖವಾಗಿದ್ದೆ, ದೊಡ್ಡ ರೋಗದಿಂದ ನನ್ನ ದನಗಳೆಲ್ಲಾ ಸತ್ತು ಹೋದವು. ನನ್ನ ಬದುಕೆಲ್ಲಾ ಹಾಳಾಯಿತು. ಸರ್ಕಾರದ ಕಂದಾಯ ಕಾಣಿಕೆಗಾಗಿ ನನ್ನ ಸ್ವತ್ತೆಲ್ಲಾ ಹೋಯಿತು. ಹೆಚ್ಚಿನ ಬಡತನ ಬಂತು, ವೃದ್ದರಾದ ನಮ್ಮ ತಂದೆತಾಯಿಗಳು ಹೊಟ್ಟೆಗೆ ಗತಿ ಇಲ್ಲದೆ ಮೂರು ದಿನ ಉಪವಾಸವಾಗಿ ನರಳಿ ಪ್ರಾಣ ಬಿಟ್ಟರು. ಈ ಕಷ್ಟದಿಂದಲೇ ನನ್ನ ಹೆಂಡತಿಯೂ ಸತ್ತಳು. ಇಂದಿಗೆ ನಾಲ್ಕು ದಿನವಾಯಿತು. ನಾನು ಮಾಡಿದ ಪಾಪ ಹರಿಯಲಿಲ್ಲ. ಈ ತಬ್ಬಲಿ ಮಕ್ಕಳನ್ನು ಕಟ್ಟಿ ಕೊಂಡು ಈ ಹಾಳ ಜನ್ಮವನ್ನು ಕಳೆಯ ಬೇಕಾಗಿದೆ. ದೇಶಾಂತರಕ್ಕಾದರೂ ಹೋಗೋಣವೆಂದು ಮಕ್ಕಳನ್ನೂ ಕರೆದುಕೊಂಡು ಹೊರಟೆ. ೨೨ ನೆ ಅಧ್ಯಾಯ - ಈ ಕಥೆಯನ್ನು ಕೇಳಿ ಅಲ್ಲಿದ್ದವರ ಮನಸ್ಸೆಲ್ಲಾ ಕರಗಿತು. ಎಲ್ಲರ ಕಣ್ಣಿನಲ್ಲಿಯೂ ನೀರು ಬಂತು, ತಾವುಗಳು ಅವನಿಗೆ ಸಹಾಯ ಮಾಡುವದಾಗಿ ಅಲ್ಲಿದ್ದವರೆಲ್ಲರೂ ಧೈರ್ಯ ಹೇಳಿದರು, ಆಗ ಅಲ್ಲಿದ್ದ ಲಲಿತೆಯು ಇತರರಿಗಿಂತಲೂ ಅಧಿಕವಾದ ದುಃಖದಿಂದ ಪೀಡಿತಳಾ