ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೪ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ ದಾಗ್ಯೂ, ಉಕ್ಕಿ ಉಕ್ಕಿ ಬರುವ ಕಣ್ಣೀರನ್ನು ಸೆರಗಿನಿಂದ ಒರಸಿ. ಕೊಳ್ಳು ತಾ, ವ್ಯಸನವನ್ನು ತಡೆದುಕೊಂಡು ಏನೈ, ನಿನ್ನ ಹೆಸರು ಕಪನಿನಾಯಕನೆಂತಲೆ ? ಎಂದು ಕೇಳಿದಳು. ಆ ಮಾತಿಗೆ ಆ ಗಟ್ಟದ ಕೆಳಗಿನವನು ಬೆರಗಾಗಿ-ಹವುದು ತಾಯೆ, ಎಂದನು. ಲಲಿತೆಯು ಹಾಗಾದರೆ ನಿನಗೆ ಯಾರೂ ದಿಕ್ಕಿಲ್ಲವೆಂದು ತಿಳಿಯಬೇಡ, ಭೀಮ ರಾಜರಿಗೆ ಸಮಾನರಾದ ಮತ್ತೊಬ್ಬರು ಇದಾರೆ. ಅವರ ಪರಿಚಯ ನಿನಗೆ ಇಲ್ಲದಿದ್ದರೂ ಅವರು ನಿನಗೆ ಉಪಕಾರ ಮಾಡದೇ ಇರರು. ನೀನು ಹೇಳುವ ಭೀಮರಾಜರು ನಮ್ಮ ತಂದೆಗೆ ಅಣ್ಣ, ಆದ್ದರಿಂದ ನನಗೆ ದೊಡ್ಡ ಪ್ರನಾಗಬೇಕು, ಸತ್ಯವಂತರಾದ ಭೀಮರಾಜರು ಹೋದ ಕ್ರಾಗಿ ಈ ಸೀಮೆಗೆ ಸೀಮೆಯೆ ಅಳುತಿದೆ, ಅವರಿಗೆ ಸಂಭವಿಸಿದ ಅಕಾಲಮರಣವು ನಮ್ಮ ಮನೆಗೇ ಮೃತ್ಯು ಬಡಿದ ಹಾಗಾಯಿತು, ಎಂದು ಆಗಾಗ್ಗೆ ಹಲುಬು ತಿರುವದಲ್ಲದೆ ತಮ್ಮ ಚಿಕ್ಕಪ್ಪನವರು ತಮ್ಮ ಅಣ್ಣನಾದ ಭೀಮರಾಜರಿಂದ ಬಂದ ಕಾಗದಗಳನ್ನು ಕಣ್ಣೀರಸುರಿಸುತಾ ಒಮ್ಮಿಂದೊಮ್ಮೆ ಓದಿಯೋದಿ ಸಂಕಟಪಡುವರು, ಆ ಕಾಗದಗಳನ್ನು ನಾನು ಓದಿದೇನೆ. ಒಂದೊಂದರಲ್ಲಿ ಯೂ-ನನ್ನ ಸಂಗಡ ಬಂದಿರುವ ಕಪನಿನಾಯಕನೆಂಬ ಗಟ್ಟದ ಕೆಳಗಿನ ಹುಡುಗನು ಬಹಳ ನಂಬಿಕೆ ಯುಳ್ಳವನು. ಅವನಿಂದ ನಾನು ಬಹುವಾಗಿ ಉಪಕೃತಿಯನ್ನು ಹೊಂದಿದೇನೆ. ಅವನಿಗೆ ಯಾವ ಪ್ರತ್ಯುಪಕಾರವನ್ನು ಮಾಡಲಿ ಎನ್ನು ವುದನ್ನೆ ಸದಾ ಯೋಚಿಸುತಿದೇನೆ. ಈ ಅರ್ಥಕ್ಕೆ ಬರೆದಿದೆ : ಹೀಗೆಂಬ ದಾಗಿ ಲಲಿತೆಯು ನುಡಿದಳು, ಇದು ಕಿವಿಗೆ ಬಿದ್ದ ಕೂಡಲೆ ಗಟ್ಟದ ಕೆಳಗಿನವನು ಅತ್ಯಾನಂದ ದಿಂದ ತಟ್ಟನೆ ಎದ್ದು ಮೈಮರೆತು, ಲಲಿತೆಯನ್ನು ಕಂಕುಳಿಗೆ ಎತ್ತಿ ಕೊಂಡು ಅವಳ ತಲೆಯನ್ನು ತಡವರಿಸುತ್ತಾ, ಅಮ್ಮಾ, ಇಂದಿಗೆ ನಾನು ಧನ್ಯನಾದೆ ; ನಿಮ್ಮ ದರುಶನವಾದ ಈ ದಿನವೇ ಸುದಿನ. ಆ ಪುಣ್ಯಾತ್ಮರಾದ ನನ್ನೊ ಡೆಯ ಭೀಮರಾಜರ ವಂಶದಲ್ಲಿ ಒಂದು ಕೊನೆ ಯನ್ನು ನೋಡಿದೆನಲ್ಲಾ ! ಇದು ನನ್ನ ಭಾಗ್ಯವೇ ಸರಿ, ನನ್ನ ಬಡತನ ದಿಂದ ನಾನು ಈ ಕಡೆಗೆ ಬಂದು ತಮ್ಮ ಭೇಟಿಮಾಡಿದೆನಾದ್ದರಿಂದ