ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ಸುಮತಿ ಮದನ ಕುಮಾರರ ಚರಿತ್ರೆ ೧8 ಆಗ ಅನಂಗರಾಜನು-ಈ ಹುಡುಗನ ಪ್ರಜ್ಞೆ ಅತ್ಯದ್ಭುತವಾದ್ದು; ಇವನು ಮಹಾಪಂಡಿತನಾಗಿ ತೋರುತ್ತಾನೆ. ಇವನನ್ನು ಇಷ್ಟರ ಮಟ್ಟಿಗೆ ತಯಾರು ಮಾಡಿಟ್ಟ ರಾಮಜೋಯಿಸರು ಸಾಕ್ಷಾತ್ ವೇದ ಮೂರ್ತಿಯೇ ಸರಿ ; ಅವರು ನಮ್ಮ ಪುಟ್ಟ ಸಾಮಿಯನ್ನೂ ಹೀಗೇ। ನೋಡಿಕೊಂಡು ವಿದ್ಯಾ ಬುದ್ದಿ ಯನ್ನು ಕಲಿಸಿದರೆ ಅವರಿಗೆ ನಾನು ಎಷ್ಟೋ ಕೃತಜ್ಞನಾಗಿದ್ದೇನು, ನಮ್ಮ ಮಗುವೇನು ಸಾಧಾರಣನಲ್ಲ, ತುಂಬಾ ಪ್ರಬಲಕ್ಕೆ ಬರತಕ್ಕವನು, ಅಕ್ಷರಾಭ್ಯಾಸ ಮಾಡುವುದಕ್ಕೆ ಸಕಾಲವಾಗಿದೆ ಎಂದುಕೊಂಡು, ತನ್ನ ಮಗ ಮದನ ಕುಮಾರನನ್ನು ಕುರಿತು-ಅಯ್ಯ ಮದನು, ನೀನೂ ಶಾಸ್ತ್ರಜ್ಞನಾಗಬೇಕೋ ? ಎಂದನು. ಅಪ್ಪಾಜಿ, ಶಾಸ್ತ್ರಜ್ಞ ಎಂದರೇನೋ ನಾನರಿಯೆ, ಆದರೆ ನಾನು ದೊರೆಯಾಗಿರಬೇಕು ; ಯಾಕೆಂದರೆ ದೊರೆಯು ಇತರರಿಗಿಂತಲೂ ನೋಡುವುದಕ್ಕೆ ಸೊಗಸಾಗಿಯೂ ಐಶ್ವರ್ಯವಂತನಾಗಿಯೂ ಇರು ತಾನೆ ; ಇದಲ್ಲದೆ ಅವನಿಗೆ ಕೆಲಸವೇನೂ ಇರುವುದಿಲ್ಲ ; ಮತ್ತೆ ಎಲ್ಲರೂ ಅವನನ್ನು ಕಂಡರೆ ಕೈ ಕಟ್ಟಿ ಕೊಂಡು ಅತಿ ವಿನಯದಿಂದಲೂ ಮರಾದೆ ಯಿಂದಲೂ ನಿಂತುಕೊಳ್ಳು ವರು, ಎಲ್ಲರೂ ಅವನಿಗೆ ಭಯಪಡುವರು. ಈ ಮಾತನ್ನು ಕೇಳಿದ ಕೂಡಲೆ ಅರಸಿಯು ಮೇಲಕ್ಕೆ ಎದ್ದು ಸಂತೋಷದಿಂದೊಡಗೂಡಿ, ಮಗು, ಒಳ್ಳೆ ಮಾತನಾಡಿದೆ, ಇಂಥಾ ಯೋಗ್ಯತೆ ನಿನ್ನಲ್ಲಿರುವುದರಿಂದ ನೀನು ರಾಜ ಪದವಿಗೆ ತಕ್ಕವನೇ ಸರಿ; ಇಂಥಾ ಮುದ್ದು ಗಾರ ಮಾತನಾಡಿದ್ದ ಕ್ಕೋಸ್ಕರ, ಈ ಹಣ್ಣನ್ನು ಹಿಡಿ, ಈ ಉಂಗುರವನ್ನು ಇಟ್ಟು ಕೊ, ಎಂದು ಮಗನನ್ನು ಎತ್ತಿಕೊಂಡು ಮುದ್ದಾ ಡುತ್ತಾ, ಸುಮತಿಯನ್ನು ನೋಡಿ- ಏನೈ, ಮಗು, ನೀನು ದೊರೆಯಾಗ ಬೇಕೆಂದು ನಿನ್ನ ಮನಸ್ಸಿನಲ್ಲಿದೆಯೋ ಇಲ್ಲವೋ ? ಸುಮತಿ-ತಾಯಿ ಹಾಗೆಂದರೇನೋ ನಾನರಿಯೆ, ನನಗೆ ಈಗ ವಯಸ್ಸು ಬಂದು ನಾನು ದೊಡ್ಡವನಾದರೆ ಸಾಕು; ಯಾವುದಾದರೂ ಒಂದು ಉದ್ಯೋಗವನ್ನು ಕಲಿತುಕೊಂಡು ಜೀವನಮಾಡಿಕೊಳ್ಳುತೇನೆ. ನನಗೋಸ್ಕರ ಯಾವ ಆಳೂ ಬೇಡ, ಯಾರೂ ಸೊಂಟಾ ಸುತ್ತಿಕೊಂಡು ಇರಬೇಕಾದ್ದೂ ಇಲ್ಲ.