ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ ಮದನ-ನಾನು ತಮ್ಮ ಕೋಪಕ್ಕೆ ಪಾತ್ರನಾಗುವುದಕ್ಕೆ ಮಾಡ ತಕ್ಕಂಥಾ ಕೆಟ್ಟ ಕೆಲಸವನ್ನು ಮಾಡಿದ್ದೇನೆ, ತಾವು ನನ್ನ ಮೇಲೆ ಆಗ್ರಹವನ್ನು ತೋರಿಸುವುದಕ್ಕೆ ಬದಲಾಗಿ ಒಳ್ಳೆ ಮಾತನ್ನೇ ಆಡುತಾ ಇದೀರಲ್ಲಾ ; ಇದರಿಂದ ನನಗೆ ಇನ್ನೂ ಹೆಚ್ಚಾಗಿ ದುಃಖಬರುವುದು. ಜೋಯಿಸ-ನೀನು ಏನಾದರೂ ಅಪರಾಧವನ್ನು ಮಾಡಿದ್ದರೆ, ಇನ್ನು ಮೇಲೆ ಅ೦ಥಾದ್ದನ್ನು ಮಾಡುವದಿಲ್ಲವೆಂದು ಮನಸ್ಸಿನಲ್ಲಿ ನಿಚ್ಛೆಸಿಕೊಳ್ಳು ವನಾಗು, ಏನಾದರೂ ಒಂದು ತಪ್ಪನ್ನು ಯಾರಾದರೂ ಯಾವಾಗಲಾದರೂ ಮಾಡಲೇ ಮಾಡುತ್ತಾರೆ, ಅದನ್ನು ತಿಳಿದು ಅ೦ಥಾ ಕಾರ್ಯವನ್ನು ಉತ್ತರೋತ್ತರ ಮಾಡುವದಿಲ್ಲವೆಂಬದಾಗಿ ಖಂಡಿತಮಾಡಿಕೊಳ್ಳ ಬೇಕು. ಮದನ-ಗುರುಗಳೆ, ತಾವು ನನಗೆ ಅ ಪ್ಪಣೆ ಕೊಡಿಸಿದ್ದು ಬುದ್ದಿ ವಾದವೇ ಸರಿ. ನನ್ನ ಮನಸ್ಸಿನಲ್ಲಿ ಸೇರಿಕೊಂಡು ಒಳಗೆ ಚುಚ್ಚು ತಾ ನನ್ನ ನ್ನು ತಳಮಳ ಗುಟ್ಟಿ ಸುತಿರುವ ಸಂಗತಿಯನ್ನು ತಮಗೆ ಅರಿಕೆ ಮಾಡುತೇನೆ, ತಾವು ನನ್ನನ್ನು ತಮ್ಮ ಮನೆಯಲ್ಲಿಟ್ಟು ಕೊಂಡು . ಪೋಷಣೆಮಾಡಿದಿರಿ, ವಿದ್ಯವನ್ನು ಕಲಿಸಿದಿರಿ, ಬುದ್ದಿ ಯನ್ನು ಹೇಳಿದಿರಿ, ನನ್ನ ನಡತೆಯನ್ನು ತಿದ್ದಿದಿರಿ, ಇಷ್ಟಾ ದಾಗ್ಯೂ ತಮ್ಮ ದೃಷ್ಟಿ ಸ್ವಲ್ಪ ಮರೆಯಾದ ಕೂಡಲೆ ನನಗೆ ಇಲ್ಲದ ಕೆಟ್ಟ ತನವೆಲ್ಲಾ ಬಂತು. ಜೋಯಿಸ- ನಿನ್ನ ವಿಷಯವಾಗಿ ಯಾಕೆ ಇಷ್ಟು ನೈಚ್ಯವನ್ನು ಹೇಳಿಕೊಳ್ಳು ತೀಯೆ ? ಬುದ್ದಿ ಕಡಮೆಯಾಗಿ ಸ್ವಲ್ಪ ಗರ್ವ ಉಂಟಾ ಗಿತ್ತೋ ಏನೋ, ಅದಕ್ಕಾಗಿ ಇಷ್ಟು ಪೇಚಾಟವೇಕೆ ? ಈ ದೋಷ ನಿನ್ನಲ್ಲಿ ಯಾವಾಗಲೂ ಇತ್ತೇ ಇತ್ತು. ಮದನ-ನನ್ನಲ್ಲಿ ಅರೆಗರ್ವದ ದೋಷವೂ ಬುದ್ದಿ ಲೋಪವೂ ಇರುವುದೇನೋ ನಿಜ, ಆದರೆ ಇದಕ್ಕಿಂತಲೂ ಹೆಚ್ಚಿನ ದೋಷ ನನ್ನಲ್ಲಿ ಹುಟ್ಟಿದೆ ; ಅದು ಯಾವುದೆಂದರೆ ಕೃತ { ತೆ. ಚೋಯಿಸ-ಇಂಥಾ ಅಪರಾಧ ನಿನ್ನಲ್ಲಿ ಹುಟ್ಟುವುದು ಸಾಧ್ಯವೆ? ಇದು ನಿಜವೆ ? ಮದನ-ನಡೆದುದನ್ನೆಲ್ಲಾ ತಮ್ಮಲ್ಲಿ ಅರಿಕೆಮಾಡುತೇನೆ.