ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨] ಸುಮತಿ ಮದನ ಕುಮಾರರ ಚರಿತ್ರೆ ರ ೨೬೬ ತಾವೇ ಯೋಚಿಸಬೇಕು. ತಮ್ಮ ಮನೆಗೆ ನಾನು ಆರಂಭದಲ್ಲಿ ವಿದ್ಯ ಭ್ಯಾಸಕ್ಕಾಗಿ ಬಂದಾಗ, ನಾನು ದೊರೆಮಗನೆಂತಲೂ, ಯಲ್ಲರಿಗಿಂತಲೂ ದೊಡ್ಡವನೆಂತಲೂ ಉಳಿದವರೆಲ್ಲಾ ಅಲ್ಪರೆಂತಲೂ, ತಿಳಿದಿದ್ದೆ. ಜೋಯಿಸ- ಈ ಎರಡು ಅವಿವೇಕಗಳೂ ಮೊದಲಿನಿಂದಲೂ ನಿನ್ನಲ್ಲಿ ಇದ್ದೇ ಇತ್ತು, ಇದು ನಿಜ. ಮದನ- ತಮ್ಮಲ್ಲಿ ಯಾವ ಗುಣವಿಲ್ಲದಿದ್ದರೂ ತಾವು ಇತರರಿ ಗಿಂತಲೂ ದೊಡ್ಡವರೆಂದು ಜನರು ತಿಳಿದುಕೊಂಡಿರತಕ್ಕದ್ದು ಶುದ್ಧ ಅವಿವೇಕವೆಂದು ನೀವು ಹೇಳಿ ಬುದ್ದಿ ಕಲಿಸಿದ್ದಿರಿ. ಅಲ್ಪರೆಂದು ನಾನು ತಿರಸ್ಕಾರ ಮಾಡುತಿದ್ದ ಜನರೆಲ್ಲರೂ ನನಗಿಂತಲೂ ಎಷ್ಟೋ ಉಪಯುಕ್ತವಾದ ಕೆಲಸಗಳನ್ನು ಮಾಡುತಿದ್ದರು, ನಾನೇ ದೊಡ್ಡ ವ ನೆಂದು ತಿಳಿದಿದ್ದ ನಾನು ನನ್ನ ಅವಿವೇಕವನ್ನು ತಿಳಿದು ನಾಚಿಕೊಂಡು ಇರುತಿದ್ದೆನಷ್ಟೆ, ಅರಮನೆಗೆ ಪ್ರಸ್ತಕ್ಕಾಗಿ ಬಂದಾಗಿನಿಂದ ಅಹಂಕಾರ ದಲ್ಲಿ ಮೆರೆಯುತಿದ್ದ ಅರಸುನಕ್ಕಳುಗಳಲ್ಲಿಯೂ ಅರಸಿಯವರಲ್ಲಿಯೂ ನಾನು ಓಡಿಯಾಡುತ್ತಲೇ ಇದ್ದೆ. ನಾನು ತಮ್ಮಿಂದ ಕಲಿ ತಿದ್ದ ವಿವೇಕ ವನ್ನೆಲ್ಲಾ ಮರೆತುಬಿಡುವ ಹಾಗೆ ಈ ಜನರು ಮಾಡಿಬಿಟ್ಟ ರು. ಜೋಯಿಸ – ಅದನ್ನು ಹೇಗೆ ಹೇಳುವುದು ? ಒಳ್ಳೆ ಕೆಲಸ ಗಳನ್ನು ಮಾಡುವುದೇ ಲೋಕದಲ್ಲಿ ಉತ್ತಮೋತ್ತಮವಾದ ಗುಣವೆಂದು ನಿನಗೆ ನಾನು ತಿಳಿಯದೇ ಹೇಳಿಕೊಟ್ಟೆ ನೋ ಏನೋ, ಆ ರಾಜಕುಮಾ ರರೂ ಅರಸಿ ಯರೂ ನನಗಿ೦ತಲೂ ಬುದ್ದಿವಂತರಾಗಿರಬಹುದು. ಅವರು ಒಳ್ಳೆ ಮಾತನ್ನೆ ಹೇಳಿಕೊಟ್ಟಿರಬಹುದು. ಮದನ -ಗುರುಗಳೆ, ಹಾಗಲ್ಲ. ಅವರು ಬುದ್ದಿವಂತರೂ ಅಲ್ಲ. ಒಳ್ಳೆಯವರೂ ಅಲ್ಲ, ಅವರಿಗೆ ಇದು ಯಾವುದೂ ಬಾರದು, ಆದರೆ ಬೇಕಾದ ಒಡವೆಯನ್ನಿಟ್ಟು ಕೊಳ್ಳುವುದು, ಬೇಕಾದ ಬಟ್ಟೆ ಯ ಧರಿಸಿ ಕೊಳ್ಳುವುದು, ಹೆಂಗಸು ಗಂಡಸು ಎಂಬ ಭೇದವಿಲ್ಲದೆ ಕ್ಷೌರದ ಕತ್ತಿ ಯನ್ನು ಹಿಡಿದು ಮುಖಕ್ಷೌರವನ್ನು ಮಾಡಿಕೊಳ್ಳುವುದು, ಹುಬ್ಬನ್ನೂ ಪನ್ನೆ ಯನ್ನೂ ತಿದ್ದಿಕೊಳ್ಳುವುದು, ಕೆಲಸಕ್ಕೆ ಬಾರದ ಹರಟೆಯನ್ನು ಹರಟುವುದು, ಜೂಜು ಮೊದಲಾದ ದುಷ್ಕಾರ್ಯಗಳಲ್ಲಿ ಕಾಲವನು