ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬೮ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ ಕಳೆಯುವುದು, ಇವುಗಳನ್ನು ಮಾತ್ರ ಬಲ್ಲರು, ಆದರೆ ನಡೆನುಡಿಗಳಲ್ಲಿ ಮರ್ಯಾದೆಯಾಗಿರಬೇಕೆಂದುಮಾತ್ರ ಹೇಳಿಕೊಟ್ಟ ರು. ನಾನು ಅವರ ಮಾತನ್ನು ನಂಬಿದೆ. ಜೋಯಿಸ-ಇದು ಒಳ್ಳೇ ಮಾತು, ಎಲ್ಲರೂ ಮರ್ಯಾದೆ ಯಾಗಿರಬೇಕು. ಇದನ್ನು ನಿನಗೆ ಅವರು ಹೇಳಿಕೊಟ್ಟಿದ್ದರಿಂದ ಉಪಕಾರಮಾಡಿದರೆಂದು ತಿಳಿ, ಇದು ಅಪಕಾರವಲ್ಲ. ಮದನ-ಹಾಗೆ ಹೇಳಲಾಗದು. ಮತ್ಯಾದೆಯುಳ್ಳವನಾಗಿಯೂ ಇರಬೇಕೆಂದು ಅವರು ನನಗೆ ಹೇಳಿ ಕೊಟ್ಟಿದ್ದರೆ ಸರಿಯಾಗಿತ್ತು, ಇವರು ಹೇಳಿದ ಬುದ್ದಿವಾದದಿಂದ ನನ್ನ ವರಟುತನ ಹೆಚ್ಚಿತು. ಜೋಯಿಸ-ಹಾಗಾದರೆ ತಮಗೆ ತಿಳಿಯದ ಅ೦ಶವನ್ನು ಈ ಅರಸುಮಕ್ಕಳೂ ಅರಸಿಯರೂ ನಿನಗೆ ಹೇಳಿಕೊಟ್ಟ ಹಾಗಾಯಿತು. ಮದನ-ಹಾಗೇಸರಿ, ನನ್ನ ಬುದ್ದಿ ಮೋಸಹೋಯಿತು. ಅವರು ಆಡಿದ ಹಾಗೆಲ್ಲಾ ನಾನು ಆಡುವುದಕ್ಕೆ ಮೊದಲು ಮಾಡಿದೆ. ನಮ್ಮ ಸುಮತಿಯನ್ನು ಅವರು ನೋಡಿ ಹಾಸ್ಯ ಮಾಡಿದರು. ನಾನೂ ಅವರ ಜೊತೆಗೆ ಸೇರಿಕೊಂಡೆ, ಸುಮತಿಯ ಸಂಗವನ್ನು ಬಿಟ್ಟು ಬಿಟ್ಟೆ. ಜೋಯಿಸ-ಅಯ್ಯೋ ಪಾಪ! ಸುಮತಿ ಯೇನೋ ನಿನ್ನಲ್ಲಿ ವಿಶೇಷ ವಾಗಿ ಪ್ರೀತಿಯನ್ನು ಇಟ್ಟು ಕೊಂಡಿದಾನೆ, ಆದರೂ ಚಿಂತೆಯಿಲ್ಲ. ಅವನಿಗೆ ಬೇರೆ ಕೆಲಸವಿದೆ. ನೀನು ಎಷ್ಟೇ ಬುದ್ಧಿಶಾಲಿ ಯಾಗಿದ್ದಾಗ್ಯೂ ನಿನ್ನ ಸಂಗಡ ಸೇರಿ ಹರಟೇ ಬಡಿದುಕೊಂಡು ಕೂತಿದ್ದರೆ ಅವನ ಹೊಟೆ. ಹೇಗೆ ತುಂಬಬೇಕು ? ಅವನ ಆರ೦ಬದ ಕೆಲಸವನ್ನು ಅವನೇ ನೋಡಿ ಕೊಂಡು ಅರಸುಮಕ್ಕಳ ಸಹಾಯಕ್ಕೆ ನಿನ್ನನ್ನು ಬಿಟ್ಟು ಬಿಡಬೇಕು. ಅವನ ಇಷ್ಟ ವೂ ಹಾಗೆಯೇ ಇದೆ. ನಿಮ್ಮ ಅಪ್ಪಾಜಿಯವರು ಬಲವಂತ ಮಾಡದಿದ್ದರೆ ಅವನು ನಿನ್ನ ಸಂಗಡ ಬರುತಿರಲಿಲ್ಲ. ನಿನಗೇನೋ ದೊರೆಮಕ್ಕಳ ಸಂಗ ಸಿಕ್ಕಿತು. ಇನ್ನು ಅವನಿಂದೇನು ? ಮದನ-ತಾವು ಹಾಗೆ ತಿಳಿಯ ಕೂಡದು, ಸುಮತಿಯು ನನ್ನ ಅಪರಾಧವನ್ನೆಲ್ಲಾ ಕ್ಷಮಿಸಿ, ಪೂರ್ವದಂತೆಯೇ ನನ್ನ ಸಂಗಡ ಸಲಿಗೆ ಯಾಗಿ ಮಾತನಾಡಿಕೊಂಡಿರುವತನಕ ನನ್ನ ಮನಸ್ಸು ಸಮಾಧಾನ