ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨] ಸುಮತಿ ಮದನಕುಮಾರರ ಚರಿತ್ರೆ ೨೯ ವಾಗಿರಲಾರದು, ಇದಕ್ಕಾಗಿ ನಾನು ಏನಬೇಕಾದರೂ ಮಾಡುತ್ತೇನೆ. ಜೋಯಿಸ-ಹಾಗಾದರೆ ದೊಡ್ಡ ಅರಸುಮಕ್ಕಳ ಸಂಗವೆಲ್ಲಾ ನಿನಗೆ ತಪ್ಪಿ ಹೋಗುವದಲ್ಲಾ. ಮದನ-ಅದನ್ನೆಲ್ಲಾ ನಾನು ಲಕ್ಷ್ಯಮಾಡುವುದಿಲ್ಲ. (ಈ ರೀತಿ ಯಲ್ಲಿ ಮದನನು ಹೇಳಿ ತಾನು ಸುಮತಿಯನ್ನು ಹೊಡೆದದ್ದೆ ಮೊದ ಲಾಗಿ ಎಲ್ಲಾ ಸಂಗತಿಯನ್ನೂ ವಿಸ್ತಾರವಾಗಿ ಗುರುವಿಗೆ ಅರಿಕೆ ಮಾಡಿದನು.) ಜೋಯಿಸ-ನಿನ್ನ ಆ ಪರಾಧವೇನೋ ಅಲ್ಪವಾದ್ದಲ್ಲ. ಈ ಅಭಿಪ್ರಾಯವನ್ನು ನಿನಗೆ ಹೇಳದೆ ನಾನು ಮರೆಮಾಚಲಾರೆ, ಆದರೂ ಸುಮತಿಯು ಬಹು ದಯಾಳುವಾದ್ದರಿಂದ ನಿನ್ನ ದುರ್ನಡತೆಯನ್ನು ಅವನು ಕ್ಷಮಿಸುವನೆಂಬ ಭಾಗದಲ್ಲಿ ನನಗೇನೂ ಸಂದೇಹ ತೋರುವುದೇ ಇಲ್ಲ. ಮದನ- ಹಾಗಾದರೆ ಸುಮತಿಯನ್ನು ತಾವು ಇಲ್ಲಿಗೆ ಕರೆದು ತರುತೀರ ? ಜೋಯಿಸ-ಸುಮತಿ ಇಲ್ಲಿಗೆ ಯಾಕೆ ಬರಬೇಕು ? ಅವನಿಗೆ ನೀನು ಅವಮಾನ ಮಾಡಲಿಲ್ಲವೆ ? ಬೈಲಿಲ್ಲವೆ ? ಕೊನೆಗೆ ಹೊಡೆಯಲೂ ಇಲ್ಲವೆ ? ಇಷ್ಟೂ ಯಾತಕ್ಕೋಸ್ಕರ ? ನಿನಗೆ ವಿವೇಕವಾದ ಮಾತನ್ನು ಹೇಳಿಕೊಟ್ಟು ನಿನಗೆ ಆಗುತಿದ್ದ ಅಪಾಯವನ್ನು ತಪ್ಪಿಸಬೇಕೆಂದು ಯತ್ನ ಮಾಡಿದ್ದಕ್ಕೋಸ್ಕರ. ಹೀಗಿರುವಾಗ್ಗೆ ಯಾರಾದರೂ ನಿನ್ನ ಸವಿಾಪಕ್ಕೆ ಬಂದಾರೆಂದು ತಿಳಿದು ಇದ್ದೀಯ ? ಮದನ-ಹಾಗಾದರೆ ನಾನು ಏನಮಾಡಲಿ ? ಜೋಯಿಸ--ನಿನಗೆ ಮತ್ತೆ ಸುಮತಿಯ ಸಂಗ ಬೇಕಾದರೆ ಅವರ ಮನೆಗೆ ಹೋಗಿ ಅವನಿಗೆ ಉಪಚಾರವನ್ನು ಹೇಳಿ ಕ್ಷಮಾಪಣೆಯನ್ನು ಬೇಡಿಕೊಳ್ಳಬೇಕು. ಮದನ-ಏನು, ಆ ಬಡ ಹಾರವರ ಮನೆಗೆ ಹೋಗಿ ಅವರಿ ಮನೇ ಜನದ ಎದುರಿಗೆಲ್ಲಾ ನನ್ನ ಸಂಗತಿಯನ್ನು ಹರನೆಮಾಡಿ ಕೊಳ್ಳಲೆ ?