ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭c ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ ಜೋಯಿಸ-ಇದಕ್ಕಾಗಿ ನಾನು ಏನಬೇಕಾದರೂ ಮಾಡುತೇನೆ ಎಂದು ಈಗತಾನೆ ನೀನು ಎಂದೆಯಲ್ಲಾ ? ಈಗ ನಿನ್ನ ಸ್ನೇಹಿತನ ಮನೆಗೆ ಹೋಗಿ ಅವನನ್ನು ನೋಡುವುದಕ್ಕೆ ನನ್ನ ಕೈಲಾಗದು ಎನ್ನು ತೀಯೆ. ಒಬ್ಬ ಮನುಷ್ಯ ಕೆಟ್ಟ ಕೆಲಸ ಮಾಡಿದಾಗ್ಯೂ ಅದು ಅವಮಾನ ವಲ್ಲವೊ ? ಅದರಿಂದ ಹರಸೆಯಾಗಲಿಲ್ಲವೋ ? ಅದನ್ನು ತಾನು ಮಾಡಿದೆ ನೆಂದು ಒಪ್ಪಿಕೊಂಡು ತಪ್ಪನ್ನು ಸರಿಮಾಡಿಕೊಂಡಮಾತ್ರಕ್ಕೆ ಅದು. ಹರಸೆಯಾಯಿತೊ ? ಮದನ ದೊರೆಮಗನಾದ ನನ್ನಂಥವನು ಆ ಬಡ ಹಾರವರ ಮನೆಗೆ ಹೋಗಿ ನನ್ನಿಂದ ತಪ್ಪಾಯಿತು, ಎಂದು ಆ ಹಾರವ ಹುಡು ಗನ ಮುಂದೆ ನಿಂತು ಒಪ್ಪಿಕೊಂಡರೆ, ಜನರು ಏನೆಂದಾರು ? ಜೋಯಿಸ ಏನೆನ್ನು ತಾರೆಯೆ ? ನೀನು ಬುದ್ದಿವಂತ, ಒಳ್ಳೆಯ ವನು, ಕೃತಜ್ಞ ಎನ್ನು ತಾರೆ. ಯಾವುದು ಹೇಗಾದರೂ ಇರಲಿ ; ನಿನ್ನ ಮನಸ್ಸು ಬಂದಹಾಗೆ ಮಾಡು ; ನಾನು ಏನನ್ನೂ ಹೇಳುವುದಿಲ್ಲ, ಸುಮತಿ ನಿನಗೆ ಸಂಗಾತಿಯಾಗುವುದಕ್ಕೆ ಅಯೋಗ್ಯ ಎಂದು ಇನ್ನೂ ತಿಳಿದುಕೊಂಡಿದ್ದೀಯೆ, ಹಾಗೆಯೇ ಆಗಲಿ, ನಿನ್ನ ಹೊಸ ಸಂಗಾತಿ ಗಳಾದ ಅರಸುಮಕ್ಕಳ ಸ್ನೇಹವನ್ನೇ ಮಾಡಿಕೊಂಡಿರು. ಮದನ-(ಅಳುತ್ತ) ತಾವು ನಿಂತುಕೊಳ್ಳದೆ ಹೊರಟು ಹೋಗು ತೀರಲ್ಲಾ ! ಜೋಯಿಸ-ನನಗೆ ತೋರಿದ ಮಾತನ್ನು ನಾನು ಹೇಳಿದೆ. ನನ್ನ ಮಾತನ್ನು ಕೇಳದೇ ಇದ್ದರೆ ನಿನ್ನ ಮನಸ್ಸು ಬಂದ ಹಾಗೆ ಮಾಡು. ನಾವು ಆಡುತಿದ್ದ ಮಾತು ಇಲ್ಲಿಗೆ ಮುಗಿಯಿತು, ಇನ್ನು ನಾನು ಹೊರಡುತೇನೆ. ಮದನ- ತಾವು ಹೋಗಬೇಡಿ, ಸುಮತಿಗೆ ನಾನು ಹಾಗೆಲ್ಲಾ ಮಾಡಿದ್ದಕ್ಕಾಗಿ ನಮ್ಮ ಅಪ್ಪಾಜಿ ಮೊದಲೇ ಕೋಪವಾಗಿದಾರೆ. ತಾವೂ ನನ್ನ ಬಿಟ್ಟು ಹೊರಟು ಹೋದರೆ, ನನಗೆ ಇತ್ತ ಬಾ ಎನ್ನು ವ ವರೇ ಇಲ್ಲದ ಹಾಗಾಗುವುದು. ಜೋಯಿಸ-- ಅದು ನಿನ್ನ ತಪ್ಪೇ ಮಾಡಿದ ತಪ್ಪನ್ನು ಒಪ್ಪಿ