ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-೨೩) ಸುಮತಿ ಮದನಕುಮಾರರ ಚರಿತ್ರೆ ೨೭೩ ೨೩ನೆ ಅಧ್ಯಾಯ ತರುವಾಯ, ಸೂರಭಟ್ಟ ನು ತನ್ನ ತುಡಿಕೇಮನೆಯಲ್ಲಿ ಇದಾ ನೆಂದು ಕೇಳಿ, ರಾಮ ಜೋಯಿಸನು ಅಲ್ಲಿಗೆ ಕಾಲನಡಗೆಯಲ್ಲಿಯೇ ಹೊರಟನು. ಆ ಮನೆಯು ಒಂದು ಬೆಟ್ಟದ ಕಿಬ್ಬಿಯಲ್ಲಿತ್ತು. ಸಮಿಾ ಪದಲ್ಲಿಯೇ ಒಂದು ಚಿಕ್ಕ ನದಿ ಹರಿಯುತಿತ್ತು. ಜೋಯಿಸನು ಅಲ್ಲಿಗೆ ಹೋಗಿ ತಲಪಿದಾಗ,ಸೂರ ಭಟ್ಟ ನು ತೋಟದಲ್ಲಿ ಅಗತೆ ಮೊದಲಾದ್ದನ್ನು ಮಾಡುತಿದ್ದನು. ತಂದೆಯು ಕೆಲಸಮಾಡುತ್ತಾ ಮಗನಿಗೆ ವೇದವನ್ನು ಸಂಥೆ ಹೇಳುತಾ ಕೆಲವು ಸೂಕ್ತಗಳನ್ನೂ ಸ್ತೋತ್ರಗಳನ್ನೂ ಹೇಳಿ ಕೊಡುತಾ ಇದ್ದನು, ಸುಮತಿಯು ರಾಮಜೋಯಿಸನನ್ನು ದೂರ ದಲ್ಲಿಯೇ ಕಂಡ ಕೂಡಲೆ ಬೇಗ ಆತನ ಸಮೀಪಕ್ಕೆ ಓಡಿಹೋಗಿ ಆತನಿಗೆ ನಮಸ್ಕಾರವನ್ನು ಮಾಡಿ ಅವರ ಕುಶಲವನ್ನು ವಿಚಾರಿಸಿದನು. ತರು ವಾಯ ಸುಮತಿ-ಗುರುಗಳೆ, ತಾವು ಬರುವ ದಾರಿಯನ್ನು ನೋಡಿದರೆ, ತಾವು ದೊರೆಯ ಅರಮನೆಯಿಂದ ಬರುವ ಹಾಗೆ ಕಾಣುತ್ತೆ. ಜೋಯಿಸ-ಹವುದು. ಆದರೆ ನೀನೂ ಮದನನೂ ಪೂರ್ವ ದಂತೆ ಸ್ನೇಹಿತರಾಗಿಲ್ಲವೆಂದು ತೋರುತ್ತೆ. ಸುಮತಿ-ನನಗೂ ಅದೇ ಚಿಂತೆಯಾಗಿದೆ. ಮದನನು ತನ್ನ ನಡತೆಯನ್ನು ಬದಲಾಯಿಸಿಕೊಂಡು ನನ್ನ ಸಂಗವನ್ನು ಬಿಡುವುದಕ್ಕೆ. ಕಾರಣ ನನ್ನಿ೦ದ ಉ೦ಟಾಗಲಿಲ್ಲ, ಹೇಗಾದರೂ ಆಗಲಿ, ಅವನು ಕ್ಷೇಮವಾಗಿದ್ದರೆ ಸಾಕು, ಅದೇ ನನಗೆ ಬೇಕಾದ್ದು. - ಜೋಯಿಸ-ನೀನು ಅರಮನೆಯಲ್ಲಿಯೇ ಇದ್ದರೆ ಅವನ ಕ್ಷೇಮ ಗೊತ್ತಾಗುತ್ತಿತ್ತು, ಯಾರಿಗೂ ತಿಳಿಸದೆ ನಿನ್ನಲ್ಲಿ, ಎಷ್ಟೋ ಪ್ರೀತಿಯ ನ್ನಿಟ್ಟು ಕೊಂಡಿರುವ ಧೋರೆಗೂ ಹೋಗಿ ಬರುತ್ತೇನೆಂದು ಹೇಳದೆ ನೀನು ಬಂದುಬಿಟ್ಟೆ ಯಲ್ಲ. ಸುಮತಿ-ಅ ಪ್ಪಣೆಯಾದರೆ ನಡೆದ ಸಂಗತಿಯನ್ನು ನಡೆದ ಹಾಗೆಯೇ ಅರಿಕೆಮಾಡುತ್ತೇನೆ, ಮದನನಮೇಲೆ ದೋಷಾರೋಪಣೆ