ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫ ಟ ಸುಮತಿ ಮದನ ಕುಮಾರರ ಚರಿತ್ರೆ [ಅಧ್ಯಾಯ ಈ ಮಾತು ಕಿವಿಗೆ ಬೀಳಲು, ದೊರೇ ಹೆಂಡತಿಯು ಗಂಡನನ್ನು ಕುರಿತು, ಸುಮತಿಯನ್ನು ಅತಿ ನಿಕೃಷ್ಟವಾಗಿ ನೋಡುತ್ತಾ,- ದೊಡ್ಡ ವರ ಮಕ್ಕಳಿಗೂ ಬಡವರ ಮಕ್ಕಳಿಗೂ ಎಷ್ಟು ತಾರತಮ್ಯವಿದೆ ? ಎಂದಳು. ಅನಂಗ-ಈ ಮಾತಿನಮಟ್ಟಿಗೆ ನಮ್ಮ ಮಗು ಶಾನೆ ಬುದ್ಧಿಶಾಲಿ ಎಂದು ನಾನು ಹೇಳಲಾರೆ. (ಸುಮತಿಯನ್ನು ಕುರಿತು) ನಿನಗೆ ಐಶ್ವರ್ಯ ಬರಬೇಕೆಂದು ಇಷ್ಟವಿಲ್ಲವೆ, ಮಗು ? ಸುಮತಿ-ಇಲ್ಲ, ಸ್ವಾಮಿ. ಅರಸಿ- ಚೆನ್ನಾ ಗಿದೆ ! ಪುಣ್ಯ ವಿದ್ದರೆ ಇಷ್ಟ ವಿರುತ್ತೆ, ನಿನಗೆ ಐಶ್ವರ್ಯ ಬೇಡವೆ ? ಸುಮತಿ-ಬೇಡ. ಯಾಕೆ ಎಂದರೆ, ತಾಯಿ, ನಾನು ಒಬ್ಬನೇ ಒಬ್ಬ ಐಶ್ವರವಂತನನ್ನು ನೋಡಿದೇನೆ, ಆತನೇ ಆ ಚೇಬೀದಿಯಲ್ಲಿ ರುವ ದೊಡ್ಡ ಮನೆ ಯಜಮಾನರು; ಅವರ ಹೆಸರು ಪ್ರಧಾನಿ ಮಂಜೈ ಯ ಹೆಗ್ಗಡೆ, ಇವರು ಬೆಳೆದು ನಿಂತಿರುವ ಹೊಲದ ಮಧ್ಯೆ ಕುದುರೆಯನ್ನು ಓಡಿಸಿಕೊಂಡು ಹೋಗುವುದು, ಬಡರೈತರ ಬೇಲಿಗಳ « ಲ್ಲಾ ಕಡಿಯುವುದು, ಒಕ್ಕಲಮಕ್ಕಳ ಕೋಳಿಗಳನ್ನು ಕೊಲ್ಲುವುದು, ಕುರಿಯನ್ನು ಹೊತ್ತು ಕೊಂಡು ಹೋಗುವುದು, ಅವರ ದನಕರುಗಳನ್ನು ತನ್ನ ಮನೆಗೆ ತೆಗೆದುಕೊಂಡು ಹೋಗಿ ಕಟ್ಟಿ ಕೊಳ್ಳುವುದು, ಅವರ ನಾಯಿ ಗಳನ್ನು ಕೊಲ್ಲಿಸುವುದು, ಅವರ ಎತ್ತು ಕುದುರೆಗಳ ಕಾಲು ಮುರಿಯು ವುದು, ಅವರ ಭೂಮಿಯಲ್ಲಿ ಬೆಳೆದು ಒಕ್ಕಣೆಯಾಗಿರುವ ದವಸವನ್ನು ತಾನು ಹಾರುಹುಯಿಸಿಕೊಂಡು ಹೋಗುವುದು, ಸಿಕ್ಕಿದವರನ್ನೆಲ್ಲಾ ಬೈಯುವುದು, ತಲೆ ಎತ್ತಿ ತಿರುಗಿದವರನ್ನು ಹಿಡಿಸಿ ಹೊಡಿಸುವುದು, ಎದುರಿಸಿದವರನ್ನು ಕೊಲ್ಲಿಸುವುದು; ಹೀಗೆಲ್ಲಾ ಮಾಡುತ್ತಾನೆ. ಇದ ಕೈಲ್ಲಾ ಅವನ ಐಶ್ವಯ್ಯಮದವೇ ಕಾರಣವೆಂದು ಹೇಳುತ್ತಾರೆ, ಯಾರಿಗೂ ಇವನನ್ನು ಕಂಡರೆ ಆಗದು; ಆದರೆ ಈ ಮಾತನ್ನು ಅವನ ಎದುರಿಗೆ ಆಡಲು ಯಾರಿಗೂ ಧೈದ್ಯವಿಲ್ಲ. ನನಗೆ ಏನು ಕೊಟ್ಟ ರೂ ಹೀಗೆ ಜನರ ದ್ವೇಷವನ್ನು ಕಟ್ಟಿಕೊಳ್ಳಲಾರೆ. ಅವನ ಸ್ಥಿತಿ ನನಗೆ ಬೇಡ.