ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[೨೩ ಸುಮತಿ ಮದನಕುಮಾರರ ಚರಿತ್ರೆ ೨28, ಕಾರಮಾಡಿ ಅವರನ್ನು ಕಾಪಾಡಬೇಕು ಎಂತಲೇ ಆಗಲಿ ಅವರ ಬಾಯಿ ನೊಳಗಾಗಿ ಬರುತಿರಲಿಲ್ಲ. ಜೋಯಿಸ-ನೀನು ಎಲ್ಲವನ್ನೂ ಸಹಿಸಿಕೊಂಡು ಸ್ವಲ್ಪ ಸುಮ್ಮ ನಿರಬೇಕಾಗಿತ್ತು, ನೀನು ಯಾಕೆ ಜಗಳಕ್ಕೆ ಹೋದೆ ? - ಸುಮತಿ-ನನಗೇನೋ ಸ್ವಲ್ಪ ಕೋಪ ಬಂತು, ಕ್ಷಮಿಸಬೇಕು. ಒಬ್ಬ ಬುದ್ಧಿಶಾಲಿ ನಿಯಾದ ಹುಡುಗಿ ಆ ಮಂಡಲಿಯಲ್ಲಿದ್ದಳು, ಅವಳು ನನಗೆ ಒಳ್ಳೆ ಮಾತನಾಡಿ ಉಪಚಾರಮಾಡಿದ್ದಕ್ಕಾಗಿ ಅವಳನ್ನು ಎಲ್ಲರೂ ಲೇವಡಿಹತ್ತಿಸುವುದಕ್ಕೆ ಪ್ರಾರಂಭಿಸಿದರು. ನಾನು ಅವಳ ಪರ ವಾಗಿ ಎರಡು ಮಾತನ್ನಾಡಬೇಕಾಯಿತು, ಇತರರು ನಮ್ಮನ್ನು ಕೆಣ ಕಿದರೆ ಆತ್ಮಸಂರಕ್ಷಣೆ ಮಾಡಿಕೊಳ್ಳ ಬಹುದೆಂದು ತಾವೇ ಹೇಳಿಕೊಟ್ಟಿ ದೀರಷ್ಟೇ ? ಜೋಯಿಸ ನಿನ್ನಿಂದ ಅಷ್ಟೊಂದು ತಪ್ಪಿತ ನಡೆಯಿತೆಂದು ನಾನು ಹೇಳ ಬರಲಿಲ್ಲ. ಅಂತು ನೀನು ದೊರೆಯನ್ನು ಕಂಡು ಆತನ ಅಪ್ಪಣೆ ಯನ್ನು ತೆಗೆದುಕೊಂಡು ಬರಬೇಕಾಗಿತ್ತು. ಸುಮತಿ-ನನಗೂ ಆ ಭಾಗದಲ್ಲಿ ಸ್ವಲ್ಪ ಚಿಂತೆಯಾಗಿಯೇ ಇದೆ. ಆದರೆ ಗೂಳಿಕಾಳಗಕ್ಕೆ ಹೋಗಬೇಡವೆಂದು ನಾನು ಹೇಳಿದಮಾತ್ರಕ್ಕೆ ಮದನನು ನನ್ನ ನ್ನು ಬೈದು ಹೊಡೆದದ್ದು ಸರಿಯಲ್ಲ. ಅವನ ಮೇಲೆ ನನಗಿದ್ದ ಪ್ರೀತಿಯಿಂದ ನಾನು ಅವನನ್ನು ಹಿಂತಿರುಗಿ ಹೊಡೆಯದೆ ಸುಮ್ಮನಾದೆ. ಜೋಯಿಸ -ದೊರೆಯೇನೋ ನಿನ್ನ ನಡತೆಯನ್ನು ಕೊಂಡಾಡಿ ದನು. ಅದು ಹಾಗಿರಲಿ, ಮದನನನ್ನು ಗೂಳಿ ಹಾಯುವುದಕ್ಕೆ ಬಂದಾಗ ನೀನು ಅವನ ಪ್ರಾಣವನ್ನು ಉಳಿಸಿದೆಯಂತಲ್ಲಾ? ಸುಮತಿ-ಅ೦ಥಾ ಸಂದರ್ಭದಲ್ಲಿ ಇನ್ನು ಯಾರಿಗಾದರೂ ನಾನು ಹಾಗೆಯೇ ಮಾಡುತಿದ್ದೆ. - ಜೋಯಿಸ-ನೀನು ಗುಣವಂತ, ಆದರೆ ಮದನನ ಸಂಗ ವನ್ನು ಬಿಟ್ಟೇ ಬಿಡುತ್ತೀಯ ? ಸುಮತಿ-ಅವರು ದೊಡ್ಡವರು, ದೊಡ್ಡವರ ಸಂಗವೇ ಅವನಿ.