೨೭೬ ಸುಮತಿ ಮದನಕುಮಾರರ ಗಿರಲಿ, ನಾವು ಬಡವರು, ನಮ್ಮ ಪಾಡಿಗೆ ನಾವು ಇರುತ್ತೇವೆ. ನಾನು ಅವನ ಸಂಗ ಬಿಟ್ಟ ವನಲ್ಲ, ಅವನಾಗಿಯೇ ನನ್ನನ್ನು ಬಿಟ್ಟು ಬಿಟ್ಟ. ಜೋಯಿಸ- ಅವನು ತನ್ನಿಂದ ತಪ್ಪಾಯಿತೆಂದು ಒಪ್ಪಿಕೊಂಡರೆ? ಸುಮತಿ- ಹಾಗಾದರೆ ಏನಿದ್ದರೂ ನಾನು ಮರೆತುಬಿಡುತ್ತೇನೆ. ಮದನ ಸ್ವಲ್ಪ ಮುಂಗೋಪಿ, ಆದರೆ ಅವನ ಹೃದಯ ಒಳ್ಳೇದು. ತುಂಟಹುಡುಗರ ಸಹವಾಸದಿಂದ ಅವನು ಹಾಗೆ ಕೆಟ್ಟು ಹೋದ. ಜೋಯಿಸ-ಮದನನು ತನ್ನ ತಪ್ಪನ್ನೂ ಒಪ್ಪಿಕೊಳ್ಳುತ್ತಾನೆ. ನಿನ್ನನ್ನು ಕಾಣುವತನಕ ಅವನಿಗೆ ಮನಸ್ಸು ಸಮಾಧಾನವಿಲ್ಲ. ಸುಮತಿ-ಅವನು ಇನ್ನು ಎಷ್ಟು ಸಾರಿ ನನ್ನ ನ್ನು ಹೊಡೆದರೂ ಚಿಂತೆ ಇಲ್ಲ, ಮದನನನ್ನು ನೋಡುವುದಕ್ಕೆ ನಿಮ್ಮ ಸಂಗಡ ಬರಲೆ ? ಜೋಯಿಸ-ಅದೇನೂ ಅಗತ್ಯವಿಲ್ಲ. ತಪ್ಪು ಅವನದಾದ್ದರಿಂದ ಅವನೇ ಇಲ್ಲಿಗೆ ಬರುತಾನೆ, ಸುಮ್ಮನಿರು. ಇದು ಹಾಗಿರಲಿ, ನಿನ್ನ ಪ್ರಾಣವನ್ನು ಉಳಿಸಿದ ಹಬ್ಬ ಸಿಯವನು ಎಲ್ಲಿ ? ದೊರೆಯು ಅವನ ಸಂಗತಿ ಯನ್ನು ಕೇಳಿಕೊಂಡು ಬರ ಹೇಳಿದ. ಸುಮತಿ-ಅವನು ನಮ್ಮ ಮನೆಯಲ್ಲಿಯೇ ಇದಾನೆ, ಇಲ್ಲಿಯೇ ಊಟಮಾಡಿಕೊಂಡು ನಮ್ಮ ಕೊಟ್ಟಿಗೆಯಲ್ಲಿ ಮಲಗಿಕೊಳ್ಳುತ್ತಾನೆ. ಬಹಳ ಒಳ್ಳೆಯವನು. ಯಾವ ಕೆಲಸವನ್ನಾದರೂ ಮಾಡುತ್ತಾನೆ. ಅವನಿಗೆ ಪಾಲುಮಾರಿಕೆ ಸ್ವಲ್ಪವೂ ಇಲ್ಲ. ಈ ಪ್ರಕಾರ ಮಾತನಾಡಿಕೊಂಡು ಜೋಯಿಸನು ಧೋರೇಮನೆಯ ಕಡೆಗೆ ಹೊರಟನು. ಅತ್ತ ಅರಮನೆಯಲ್ಲಿ, ಲಲಿತೆಯ ಚಿಕ್ಕ ಪ್ರನು ಪ್ರಸ್ತಕ್ಕಾಗಿ ಬಂದಿದ್ದ ತನ್ನ ಹೆಣ್ಣು ಮಗಳನ್ನೂ (ಲಲಿತೆಯನ್ನು ) ಕರೆದುಕೊಂಡು ಹೋಗುವುದಕ್ಕಾಗಿ ಬಂದಿದ್ದನು. ಅಲ್ಲಿ ಗಟ್ಟ ದಕೆಳಗಿನವರ ಚರಿತ್ರೆ ಯನ್ನು ಕೇಳಿ ಆತನಿಗೂ ಬಹು ವ್ಯಸನ ಉಂಟಾಯಿತು. ಈ ಅರಸು ತಮ್ಮಂಣನಾದ ಭೀಮರಾಜನಿಂದ ಬಂದಿದ್ದ ಕಾಗದಗಳ ಒಕ್ಕಣೆಗಳನ್ನು ನೆನಿಸಿಕೊಂಡು ಸಂಕಟಪಡುತ್ತಾ, ದೀನನಾದ ಆ ಮನುಷ್ಯನಿಗೆ ಸಹಾ ಯಮಾಡಬೇಕೆಂದು ಅವನನ್ನು ಕುರಿತು-ಎಲೆ, ಕಪನಿನಾಯಕ
ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೯೧
ಗೋಚರ