ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭೬ ೨೩] ಸುಮತಿ ಮದನಕುಮಾರರ ಚರಿತ್ರೆ ನಮ್ಮ ಜಹಗೀರಿನಲ್ಲಿ ನಿನಗೆ ಭೂಮಿಯ ಕೊಡಿಸುತ್ತೇನೆ, ಅದನ್ನು ವ್ಯವಸಾಯ ಮಾಡಿಕೊಂಡು ಸುಖವಾಗಿರು, ಎಂದನು. ಆಗ ಅನಂಗ ರಾಜನು ಆ ಬಡವನಿಗೆ ಒಂದು ಮನೆಯನ್ನೂ, ಎರಡು ಜೋಡಿ ಎತ್ತನ್ನೂ, ಮತ್ತು ಬೇಕಾದ ಇತರ ಸಾಮಾನುಗಳನ್ನೂ ತೆಗೆದುಕೊಡು ವುದಾಗಿ ಹೇಳಿದನು. ಈ ಸಮಯಕ್ಕೆ ಸರಿಯಾಗಿ ಸೂರ ಭಟ್ಟನ ಮನೆ ಯಿಂದ ಅರಮನೆಗೆ ಬಂದ ರಾಮಜೋಯಿಸನು-ತಾವುಗಳೆಲ್ಲಾ ದೊಡ್ಡವರು, ದೊಡ್ಡವನಿಗೆ ಸಹಾಯ ಮಾಡುತ್ತೀರಿ, ನಾನು ಬಡವ ನಾದ್ದರಿಂದ ಆ ಬಡ ಎಳೇ ಮಕ್ಕಳಿಗೆ ಹಾಲಾಗುವಂತೆ ಎರಡು ಹಸು ವನ್ನೂ ಐದು ಮೇಕೆಯನ್ನೂ ಕೊಡುತ್ತೇನೆ, ಎಂದು ನುಡಿದನು. ಈ ಪ್ರಕಾರ ಲಕ್ಷ್ಮಿ ಕಟಾಕ್ಷ ಒದಗಿದ್ದನ್ನು ಕಂಡು ಕ ಪನಿನಾಯಕನು ಆನಂದದಿಂದ ಎಲ್ಲರಿಗೂ ನಮಸ್ಕಾರವನ್ನು ಮಾಡಿದನು. ಲಲಿತೆಯು ಅರ್ಧಾಂತಕವಾಗಿ ಓದಿ ನಿಲ್ಲಿಸಿದ್ದ ಹೊಲ್ಲಮಲ್ಲರ ಕಥೆಯು ಕೆಟ್ಟು ಹೋಗಿದ್ದ ತನ್ನ ಮಗನ ಬುದ್ಧಿಯನ್ನು ಸರಿಮಾಡಿತಾದ ಕಾರಣ, ಅದನ್ನು ಮದನನು ಪೂರ್ತಿಯಾಗಿ ಕೇಳಲೆಂದು ದೊರೆಯು ಯೋಚಿಸಿ, ಆದಿನ ರಾತ್ರಿ ಭೋಜನವಾಗಿ ಎಲ್ಲರೂ ಎಲೆ ಅಡಕೆಯನ್ನು ಹಾಕಿಕೊಳ್ಳು ತ್ತಾ ಕೂತುಕೊಂಡಾಗ, ರಾಮಜೋಯಿಸನನ್ನೂ ಕರೆ ಯಿಸಿ ಕೂರಿಸಿಕೊಂಡು ಲಲಿತೆಯ ಕೈಲಿ ಆ ಕಥೆಯನ್ನು ಪೂರ್ತಿಯಾಗಿ ಓದಿಸಿದನು. ೨೪ನೆ ಅಧ್ಯಾಯ ಹೊಲ್ಲಮಲ್ಲರಕಥೆ ಮುಂದಕ್ಕೆ ಸಾಗಿದ್ದುಹೊಲ್ಲಮಲ್ಲರ ಕಥೆಯಲ್ಲಿ ಬರುವ ಚಾರುದತ್ತನ ಚರಿತ್ರೆಯನ್ನು ಲಲಿತೆಯು ಮುಂದಕ್ಕೆ ಓದಿ ಸಾಗಿಸಿದ್ದು ಏನೆಂದರೆ:- ಚಾರುದತ್ತ ಹೇಳುತ್ತಾನೆ. ಅನೇಕ ತಿಂಗಳವರೆಗೂ ನಾನು ಅರಬ್ಬರದೇಶದಲ್ಲಿಯೇ ಇದ್ದೆ. ಡಂಭವಿಲ್ಲದೆ ಸಜ್ಜನರಾಗಿದ್ದ ಆ ಮಂದಿಯ ಸಹವಾಸದಲ್ಲಿಯೇ ನಾನು