ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭೮ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ ಇದ್ದರೆ ಆಗಿತ್ತು, ಹಾಗಾಗಿದ್ದರೆ, ನಮ್ಮ ದೇಶವೂ ನಮ್ಮ ಜನರೂ ಹಾಳಾದ ದುಃಖವನ್ನು ಈ ಪಾಪಿ ಕಣ್ಣಿನಲ್ಲಿ ನಾನು ನೋಡದೆ ಸೌಖ್ಯ ವಾಗಿರುತಿದ್ದೆ, ಆದರೆ ನಾನು ಸಡೆದು ತಂದದ್ದಕ್ಕೆ ಹೊಣೆಯಾರು ? ಕೊನೆಗೆ ನಾನು ಆ ದೇಶವನ್ನು ಬಿಟ್ಟು ಹೊರಟೆ, ಆ ಜನರೆಲ್ಲಾ ನನ್ನ ನ್ನು ಎಷ್ಟೋ ಆದರದಿಂದ ಕಂಡರು; ಅವರ ಸೀಮೆಯ ಉತ್ತಮ ವಾದ ತೇಜಿಯೊಂದನ್ನು ಇತರ ಉಪಹಾರಗಳ ಸಂಗಡ ನನಗೆ ಕೊಟ್ಟ ರು; ಬಹಳದೂರ ಬಂದು ನನಗೆ ದಾರಿ ತೋರಿಸಿ ಸಾಗಕಳುಹಿಸಿ ದರು. ನಾನು ನಮ್ಮ ಊರಿಗೆ ಬಂದು ತಲಪಿದೆ. ನಿರ್ಮಾನುಷ್ಯವಾದ ಸ್ಥಳದಲ್ಲಿದ್ದು ಕೊಂಡು ದೇವರಧ್ಯಾನದಲ್ಲಿ ನಿಂತ ಆಯುಸ್ಸನ್ನೆಲ್ಲಾ ಕಳೆಯ ಬೇಕೆಂದು ದೃಢಮಾಡಿಕೊಂಡೆ, ನಾನು ನೋಡಿದ್ದರಲ್ಲಿ ನನಗೆ ತೋರು ವುದೇನೆಂದರೆ, ಯಾವ ಮನುಷ್ಯನು ಯಾವ ತಂಟೆಗೂ ಹೋಗದೆ ಲೋಕದ ಚರಗಳನ್ನೆಲ್ಲಾ ನೋಡುತ್ತಾ, ದೇವರಧ್ಯಾನದಲ್ಲಿ ಕಾಲವನ್ನು ಕಳೆಯುತ್ತಾನೆಯೋ ಅವನೇ ಧನ್ಯ. ಅನೇಕ ದೊರೆಗಳು ಎಷ್ಟು ಐಶ್ವಶ್ಯವಿದ್ದರೂ ಸಮಾಧಾನವಿಲ್ಲದೆ ತಮ್ಮ ಬಾಳಿಗಿಂತಲೂ ಒಬ್ಬ ಬಡ ಜೋಗಿಯ ಬಾಳು ಉತ್ತಮವಾದದ್ದು ಎಂದು ವ್ಯಸನ ಪಡುತ್ತಿದ್ದದ್ದನ್ನು ನಾನು ನೋಡಿದೇನೆ. ಜನಬಾಹುಳ್ಯವಿದ್ದಷ್ಟೂ ಲೋಕದಲ್ಲಿ ಶ್ರಮವೂ ದುಃಖವೂ ಹೆಚ್ಚು, ಆದ್ದರಿಂದ ಒಂದು ನದೀತೀರದಲ್ಲಿ ನಿರ್ಮಾನುಷ್ಯ ಪ್ರದೇಶವನ್ನು ಹುಡುಕಿ ಅಲ್ಲಿ ಒಂದು ಗುಡಿಸಲನ್ನು ಕಟ್ಟಿ ಕೊಂಡು, ಸ್ವಲ್ಪ ತೋಟವನ್ನು ಮಾಡಿಕೊಂಡು ವಾಸವಾಗಿದ್ದೆ. ಯೋಗ್ಯಳಾದ ಒಬ್ಬ ಹೆಂಗಸನ್ನು ಮದುವೆಯಾದೆ, ಏಳುವರುಷ ಆಕೆಯೊಡನೆ ಸಂಸಾರಮಾಡಿಕೊಂಡಿದ್ದೆ. ಈ ಹುಡುಗಿ ಹುಟ್ಟಿದಳು. ತರುವಾಯ ನನ್ನ ಹೆಂಡತಿ ಸತ್ತಳು, ನನ್ನ ಮಗಳನ್ನು ನೋಡಿ ಕೊಂಡು ಅವಳನ್ನು ಸಾಕುವುದರಲ್ಲಿ ಆ ದುಃಖವನ್ನು ಮರೆತೆ, ಇವಳು ಉಪಯುಕ್ತವಾದ ಮನೆಗೆಲಸಗಳನ್ನು ಮಾಡಿಕೊಂಡಿರುವುದರಲ್ಲಿಯೂ ಅಲ್ಪಸ್ವಲ್ಪ ಕಾಲ ಉಳಿದರೆ ಉತ್ತಮವಾದ ಗ್ರಂಥಗಳನ್ನು ಓದುವುದ ರಲ್ಲಿಯೂ ನಿರತಳಾಗಿದ್ದಳು. ಇಲ್ಲದ ಸಿಸ್ತನ್ನು ಮಾಡಿಕೊಳ್ಳು ವದರ ಲ್ಲಿಯೂ, ಇಲ್ಲದ ಒಡವೆಯನ್ನು ಹೇರಿಕೊಳ್ಳುವುದರಲ್ಲಿಯೂ, ಜಡತ್ವ