೨೮೦ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ. ಕಾಪಾಡಬೇಕು. ಶಕಾಧಿ ಪತಿ-ಯುದ್ದಾದಿಗಳೆಲ್ಲಾ ನಿಂತು ಹೋಯಿತಾದ್ದರಿಂದ ಮೊದಲನೇದನ್ನೇನೋ ನಾನು ಕೊಟ್ಟೆ ಇದೇನೆ : ದೇಹಶ್ರಮ ಪಡದೆ ಜಡತ್ವದಲ್ಲಿಯೂ ನೀತಿಮಾರ್ಗವಿಲ್ಲದೆ ದುರ್ಮಾರ್ಗದಲ್ಲಿಯೂ ಪರಾ ಕ್ರಮವಿಲ್ಲದೆ ಹೇಡಿತನದಲ್ಲಿಯೂ ಇಳಿಯಮುಳುಗಿರುವ ನಿಮ್ಮ ದೇಶದ ಜನರಿಗೆ ಎರಡನೇದು (ಸ್ವಾತಂತ್ರ್ಯ ದೊರೆಯುವುದು ಅಸಾಧ್ಯ, ನಮ್ಮ ಸೇನೆಯೊಡನೆ ನಾನು ನಮ್ಮ ದೇಶಕ್ಕೆ ಹೊರಟು ಹೋದಾಗೂ ಮತ್ತೆ ಯಾರಾದರೂ ಬಂದು ನಿಮ್ಮ ದೇಶವನ್ನು ಜೈಸಲೇ ಜೈಸುತ್ತಾರೆ. ಈ ವಿಷಯವನ್ನು ಬಿಡು. ನಿನ್ನ ಮಟ್ಟಿಗೆ ನಿನಗೇನು ಬೇಕೋ ಕೇಳಿ ಕೊಳ್ಳುವನಾಗು. ಚಾರುದತ್ತ-(ನಗುತ್ತಾ) ನನಗೆ ಬೇಕಾದ್ದೆಲ್ಲಾ ಇದ್ದೇ ಇದೆ. ಆದರೆ ನಾನು ಈ ತೋಟದಲ್ಲಿ ಹೊಸದಾಗಿ ಅಗತೆಮಾಡಿ ಗಿಡವನ್ನು ಹಾಕಿರುವ ಪ್ರದೇಶವನ್ನು ನಿನ್ನ ವರು ತುಳಿಯದಂತೆ ನೀನು ಆಜ್ಞೆ ಮಾಡಿದರೆ ಅದೇ ನಿನ್ನಿಂದ ನನಗೆ ಆಗಬೇಕಾದ ದೊಡ್ಡ ಉಪಕಾರ. ಶಕಾಧಿಪತಿ(ತನ್ನ ಪರಿವಾರದವರ ಕಡೆಗೆ ತಿರುಗಿ) ಅ8 ! ಎಂಥಾ ಮಾತು ! ಈತನ ಮನೋನಿಶ್ಚಯದಲ್ಲಿಯೂ ಆಶಾರಾಹಿತ್ಯ ದಲ್ಲಿಯೂ ದೇವಾಂಶವಿದೆ ಎಂದು ತಿಳಿಯಿರಿ. ಈತನು ಸಾಧಾರಣ ನಲ್ಲ, ನಾನು ಈ ಚಾರುದತ್ತನಾಗಿ ಹುಟ್ಟಿದ್ದರಾಗಿತ್ತು, (ತರುವಾಯ ಚಾರುದತ್ತನ ಕಡೆಗೆ ತಿರುಗಿ) ಅಯ್ಯಾ, ನಾಳೆ ಮಧ್ಯಾಹ್ನ ನೀನು ನನ್ನ ನ್ನು ಬಂಮ ಕಾಣು. ಹೀಗೆ ಹೇಳಿ ತನ್ನ ವೀರಭಟರು ಯಾರೂ ನನ್ನ ಗೋಜಿಗೆ ಬರ ಕೂಡದೆಂದು ಆಜ್ಞಾಪಿಸಿ, ಶಕಾಧಿಪನು ಹೊರಟು ಹೋದನು, ಅದೇ ಪ್ರಕಾರ ಆತನು ಹೇಳಿದ್ದ ಹೊತ್ತಿಗೆ ಸರಿಯಾಗಿ ನಾನು ಶಕಸೇನೆಯ ಪಾಳಯಕ್ಕೆ ಹೋದೆ, ಈ ಜನರು ಉತ್ತರ ಪ್ರಾಂತ್ಯದಿಂದ ಬಂದ ವರು, ಇವರ ದೇಶವು ಶುದ್ದವಾಗಿ ಕಾಡು ರಾಜ್ಯ, ಅಲ್ಲಿ ಹುಲ್ಲು ಹೊರತು ಮತ್ತೆಯೇನೂ ಬೆಳೆಯುವುದಿಲ್ಲ. ಇವರು ವ್ಯವಸಾಯ ಮಾಡುವುದನ್ನು ಅರಿಯರು, ದನ, ಕುದುರೆ, ಒಂಟಿ, ಇವುಗಳನ್ನು
ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೯೫
ಗೋಚರ