ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪] - ಸುಮತಿ ಮದನಕುಮಾರರ ಚರಿತ್ರೆ ೨೮೧ ಕಾಯುವುದೆ, ಇವರ ಮುಖ್ಯವೃತ್ತಿ, ಈ ಜಂತುಗಳ ಹಾಲಿನಲ್ಲಿ ಆದ ಹುಳಿಮೊಸರು, ಬೇಟೆಯಾಡಿ ತಂದ ಕಾಡುಮೃಗಗಳ ಮಾಂಸ, ಇವು ಗಳೇ ಇವರ ಆಹಾರ, ಎರಡು ಕಂಬವನ್ನು ನಿಲ್ಲಿಸಿ ಅದಕ್ಕೆ ಒಂದು ಅಡ್ಡ ಕಡ್ಡಿಯನ್ನು ಕಟ್ಟಿ ಅದರ ಮೇಲಿನಿಂದ ದಪ್ಪವಾದ ಬಟ್ಟೆಯನ್ನು ಎರಡು ಕಡೆಗೂ ಇಳಿಜಾರಾಗಿ ಕಟ್ಟುವರು. ಇದೇ ಇವರ ಮನೆ. ಕುದುರೆ ಸವಾರಿಯಲ್ಲಿ ಈ ಜನರು ಅರಬ್ಬರ ಹಾಗೇ ಬಹು ಸಮರ್ಥರು. ಲಗಾಮು ಇಲ್ಲದೆ ಒಂದು ಹಗ್ಗವೂ ಇಲ್ಲದೆ ಇವರು ಎಷ್ಟು ದೂರ ವಾದರೂ ಬೆತ್ತಲ ಕುದುರೆಯ ಮೇಲೆ ಹೋಗಬಲ್ಲರು, ಧೈರ್ಯ ದಲ್ಲಿಯೂ ಇವರು ಅರಬ್ಬರಿಗೆ ಸಮಾನರು. ಈಟ, ಅ೦ಬು, ಬಿಲ್ಲುಗಳೇ ಇವರ ಆಯುಧ, ಕುಮರೇ ಮೇಲೆ ಎಷ್ಟು ದಿನವಾದರೂ ಹಗಲು ರಾತ್ರಿ ಎನ್ನದೆ ಇರಬಲ್ಲರು, ಪ್ರಪಂಚದ ದೇಶಗಳನ್ನೆಲ್ಲಾ ಜೈಸು ವುದಕ್ಕೆ ಈ ಜನರ ವಿನಾ ಮತ್ತೆ ಯಾರೂ ತಕ್ಕವರಲ್ಲ, ಇವರನ್ನು ಜೈಸಿ ಅಡಗಿಸಬೇಕೆಂದು ಯಾರು ಪ್ರಯತ್ನ ಮಾಡಿದರೂ ಸಾಗಲಿಲ್ಲ. ಪಾರಸೀಕ ಪತಿಗಳಲ್ಲಿ ದರವೇಶಗುನ್ಯಾಸ್ಸನೆಂಬುವನೇ ಬಹು ಖ್ಯಾತಿವಂತನು. ಈ ಶಕರನ್ನು ಅಡಗಮೆಟ್ಟಿ ಅಡಿಯಾಳಾಗಿ ಮಾಡಿ ಕೊಳ್ಳ ಬೇಕೆಂದು ಇವನಿಗೆ ತೋರಿತು. ಅದಕ್ಕಾಗಿ ದರವೇಶನು ಬಹು ದೊಡ್ಡ ದಂಡಿನೊಡನೆ ಶಕರ ರಾಜ್ಯದ ಮೇಲೆ ತೆರಳಿದನು. ಶಕಾಧಿ ರಾಜನು ತನ್ನ ಜನರನ್ನು ಸಜ್ಜು ಮಾಡಿಕೊಂಡು ಹೊರಟನು, ಶಕರು ಕುದುರೆಗಳನ್ನೇರಿ ಶತ್ರುಗಳು ಬರುವುದನ್ನು ಕಂಡು ಅವರಿಗೆ ಹೆದರಿ ಓಡಿ ಹೋದವರಂತೆ ಕಾಡಿನೊಳಕ್ಕೆ ಓಡಿ ಹೋದರು, ಪಾರಸೀ ಕರೂ ಇವರ ಬೆನ್ನ ಹತ್ತಿ ಅನೇಕ ಗಾವುದಗಳು ಹೋದರು, ಕೊನೆಗೆ ಪಾರಸಿಕರ ಕಣ್ಣಿಗೆ ಶಕರಲ್ಲೊಬ್ಬನಾಗಲಿ ಕಾಣಿಸಲಿಲ್ಲ. ಎತ್ತ ನೋಡಿ ದರೂ ಮರಳಕಾಡು, ಒಂದು ಗಿಡವಿಲ್ಲ, ಒಂದು ಸೆರೆ ನೀರಿಗೂ ಗತಿ ಇಲ್ಲ, ಪಾರಸಿ ಸೇನೆ ಬಹು ಆಯಾಸಪಟ್ಟು ನಷ್ಟ ವಾಯಿತು. ದರವೇಶ ನಿಗೆ ದಿಕ್ಕೇ ತೋಚದೇ ಹೋಯಿತು. ಹಗೆಗಳನ್ನು ಹೀಗೆ ಕಾಡಿನ ಮಧ್ಯೆ ತಂದು ಬಿಟ್ಟು ಇನ್ನು ಯಾವ ವಿಧದಲ್ಲಿಯೂ ತಮ್ಮ ಮೇಲೆ ಅವರ ಕೈನಡೆಯಲಾರದೆಂದು ತಿಳಿದು, ಶಕರು ಧೈರ್ಯಮಾಡಿಕೊಂಡರು. 18