ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮೨ ಸುಮತಿ ಮದನಕುಮಾರರ ಚರಿತ್ರ. [ಅಧ್ಯಾಯ ಇಂಥಾ ಕಷ್ಟ ಬಂತಲ್ಲಾ ! ಏನು ಮಾಡಬೇಕೆಂದು ದರವೇಶನು ತನ್ನ ಮಂತ್ರಿಗಳೊಡನೆ ಆಲೋಚನೆ ಮಾಡುತ್ತಾ ಕೂತಿರುವಲ್ಲಿ, ಒಬ್ಬ ಭಟನು ಬಂದು ಮಹಾ ತೇಜಿಯನ್ನೇರಿ ಅತಿ ವೇಗವಾಗಿ ದರವೇಶನ ಪಾಳಯಕ್ಕೆ ನುಗ್ಗಿ, ಆ ದೊರೆಯ ಮುಂದೆ ಬಂದು ನಿಂತು ಒಂದು ಗಂಟನ್ನು ಆತನ ಮುಂದೆ ಇರಿಸಿ, ಕೂಡಲೆ ಅಶ್ವಾರೂಢನಾಗಿ ಕಣ್ಣ ಮುಚ್ಚಿ ಬಿಡುವುದರೊಳಗಾಗಿ ಹೊರಟು ಹೋದನು, ಪಾರಸೀಕರೆಲ್ಲ ರಿಗೂ ಗಾಬರಿಯಾಯಿತು. ದೊರೆಯು ಆಶ್ಚರ್ಯ ಪಡುತ್ತಾ ಆ ಗಂಟನ್ನು ಬಿಚ್ಚಿಸಿ ನೋಡುವಾಗ ಅದರಲ್ಲಿ ಒಂದು ಇಲಿ, ಒಂದು ಹಕ್ಕಿ, ಒಂದು ಮಿಾನು, ಒಂದು ಕಟ್ಟು ಅಂಬು, ಇಷ್ಟು ಇದ್ದವು. ಇದನ್ನು ಕಂಡ ಕೂಡಲೆ ಅಲ್ಲಿದ್ದವರಿಗೆಲ್ಲಾ ಆಶ್ಚರ್ಯದಿಂದ ವಾಕ್ಸ್ತಂಭ ವಾಯಿತು. ಆಗ ದೊರೆಯು-ಶಕನು ನಮಗೆ ಕಳುಹಿಸಿರುವ ಉಪ ಹಾರಕ್ಕೆ, ತಾವು ನಮಗೆ ವಿಧೇಯರಾಗುತೇನೆಂತ ಅರ್ಥ : ಹ್ಯಾಗಂ ದರೆ : ಇಲಿಯು ಭೂಮಿಯನ್ನು ಸೂಚಿಸುವುದು, ಯಾಕಂದರೆ ಅದು ನೆಲದಲ್ಲಿ ಬಿಲವನ್ನು ಮಾಡಿಕೊಂಡು ವಾಸಮಾಡುವುದು, ಮಿಾನು ನೀರನ್ನು ಸೂಚಿಸುವುದು, ಯಾಕೆಂದರೆ ಅದು ನೀರು ಅಥವಾ ಸಮುದ್ರ ದಲ್ಲಿ ವಾಸಮಾಡುವುದು, ಹಕ್ಕಿಯು ಆಕಾಶವನ್ನು ಸೂಚಿಸುವುದು, ಯಾಕೆಂದರೆ ಅದು ಅಂತರಿಕ್ಷದಲ್ಲಿ ಹಾರಾಡುವುದು, ಅಂಬುಗಳು ಶತ್ರುಗಳ ಆಯುಧ. ಅವರ ದೇಶದ ನೆಲ, ಜಲ, ಆಕಾಶ, ಇದೆಲ್ಲ ವನ್ನೂ ನಮಗೆ ಒಪ್ಪಿಸಿ, ತಾವೂ ನಮಗೆ ವಿಧೇಯರಾಗಿದ್ದೇವೆಂದು ತಿಳಿಯ ಪಡಿಸಿದಂತಾಯಿತು, ಈ ಪ್ರಕಾರ ದೊರೆಯು ಅದಕ್ಕೆ ಅರ್ಥ ಮಾಡಿದನು. ಆಗ ಸಮಿಾಪದಲ್ಲಿದ್ದ ಒಬ್ಬ ವೃದ್ದ ಮಂತ್ರಿಯು ಹೇಳಿದ್ದೆ ನೆಂದರೆ :-ಜೀಯ, ಪರಾಕು. ಇದಕ್ಕೆ ಸ್ವಾಮಿ ಮಾಡಿದ ಅರ್ಥ ವಲ್ಲದೆ ಬೇರೆ ಅರ್ಥ ಉಂಟು, ಅಭಯವಾದರೆ ಅರಿಕೆ ಮಾಡು ತೇನೆ. ಈ ಘೋರಾರಣ್ಯದ ಮಧ್ಯೆ ನಾವು ಬಂದು ನಿಲ್ಲುವುದಕ್ಕೆ ನೆರಳಿಲ್ಲದೆ ಕುಡಿಯುವುದಕ್ಕೆ ನೀರಿಲ್ಲದೆ ಸೇನೆಯೆಲ್ಲಾ ನಷ್ಟ ಹೊಂದಿ, ನಮಗೆ ದಿಕ್ಕೇ ತೋಚದೆ ಇದೆ, ಶತ್ರುಗಳಲ್ಲಿ ಒಬ್ಬನಾದರೂ ನಮ್ಮ