ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[eܦ ಸುಮತಿ ಮದನಕುಮಾರರ ಚರಿತ್ರೆ ೨೮೩ ಕೈಗೆ ಸಿಕ್ಕಲಿಲ್ಲ. ನಷ್ಟವೆಲ್ಲಾ ನಮಗಾಗಿದೆಯೊ ಅವರಿಗಾಗಿದೆಯೆ ? ಇದೇ ನಮಗೆ ಸೋಲೆಂದು ತಿಳಿಯಬೇಕು ; ಸೋಲಿಗೆ ಇದಲ್ಲದೆ ಬೇರೆ ಎರಡು ಕೊಂಬು ಇದೆಯೆ ? ಇಲಿಯಂತೆ ನೆಲವನ್ನು ಕೊರೆದುಕೊಂಡು ಹೋಗಬೇಕು ; ಅಥವಾ ಮಿಾನಿನ ಹಾಗೆ ನೀರಿನಲ್ಲಿ ಮುಳುಗಿ ಹೋಗ ಬೇಕು ; ಹೀಗೆ ಯಾವದಾದರೂ ಒಂದು ಮಾರ್ಗವಾಗಿ ನಾವು ತಪ್ಪಿಸಿ ಕೊಂಡು ಹೋದರೆ ಸರಿ, ಇಲ್ಲದಿದ್ದರೆ ನಾವು ಶಕರ ಅ೦ಬಿನಿಂದ ಸಾಯ ಬೇಕು. ಇದೇ ಶತ್ರುಗಳ ಉಪಹಾರಕ್ಕೆ ಅರ್ಥ ಎಂದು ಅರಿಕೆ ಮಾಡಿದನು. ಇದನ್ನು ಕೇಳಿ ದೊರೆಯ ಮನಸ್ಸು ಜೋಲುಬಿತ್ತು. ದರವೇಶನು ಅರ್ಥ ಮಾಡುವುದರಲ್ಲಿ ತಾನು ದುಡುಕಿದೆನೆಂದು ಒಪ್ಪಿ. ಕೊಂಡು ತನ್ನ ದೇಶಕ್ಕೆ ಹಿಂತಿರುಗಿ ಹೊರಟು ಹೋದನು. ಅವನ ದಂಡೆಲ್ಲಾ ನಾಶವಾಯಿತು. ಶತ್ರುಗಳು ಒಬ್ಬನಾದರೂ ಇವರಿಂದ ಹತನಾಗಲಿಲ್ಲ, ಇನ್ನೊಂದು ಕಾಲದಲ್ಲಿ ಲೋಲಾಕ್ಷನೆಂಬ ಮತ್ತೊಬ್ಬ ದೊರೆಯು ಶಕರನ್ನು ಜೈಸಬೇಕೆಂದು ಯತ್ನಿ ಸಲು ಅವರು ಇವನನ್ನು ಸೋಲಿಸಿ ಕೈಸೆರೆ ಹಿಡಿದರು. ಮಾರನೇ ದಿನ ಊಟದ ಹೊತ್ತು ಬಂತು. ಆಗ ಶಕರಾಜನು ಲೋಲಾಕ್ಷನನ್ನು ಒಳಗಿನಿಂದ ಕರೆದು ತಂದು, ಉತ್ತಮ ವಾದ ಪೀಠದಲ್ಲಿ ಕುಳ್ಳಿರಿಸಿ, ಆತನಿಗೆ ಭಕ್ಷ್ಯಭೋಜ್ಯಾದಿ ಶ್ರೇಷ್ಠ ವಾದ ಆಹಾರಗಳನ್ನು ಲೋಲಾಕ್ಷನಿಗೆ ಬಡಿಸಿಸಿ, ತಾನು ಮಾತ್ರ ದೂರವಾಗಿ ಕುಳಿತು ಎಂದಿನಂತೆ ತಮ್ಮ ಜನರ ಕಾಡು ತಿಂಡಿಯನ್ನು ತಿನ್ನುತ್ತಾ ಹೇಳಿದ್ದೇನೆಂದರೆ :- ಶಕರಾಜ-ಸ್ವಾಮಿ, ತಮಗೆ ನಮ್ಮ ಕಾಡ ತಿ೦ಡಿಯ ಮೇಲೆ ಇಷ್ಟವೆ ? ಅಥವಾ ತಮಗೆ ಬಡಿಸಿರುವ ಆಹಾರದ ಮೇಲೆ ಇಷ್ಟ ವೆ ? ಲೋಲಾಕ-( ಶಕರು ತನಗೆ ಮಾಡಿದ ಮರ್ಯಾದೆಗೆ ಸಂತೋಷ ದಿಂದಲೂ ಆಶ್ಚರ್ಯದಿಂದಲೂ ಒಡಗೂಡಿ) ನೀವು ಹೇಳಿದಂತೆ ತಮ್ಮ ತಿಂಡಿ ಕಾಡುತಿಂಡಿಯೇ ಸರಿ. ನನಗೆ ತಾವು ಅತ್ಯಂತ ಪ್ರೀತಿಯಿಂದ ತಂದು ಬಡಿಸಿರತಕ್ಕ ಷಡ್ರಸೋಪೇತವಾದ ಆಹಾರವು ನಮ್ಮ ಸೀಮೆಯ ತಿಂಡಿಯಾಗಿದೆ. ಇದಕ್ಕೆ ಸಮಾನ ಉಂಟೆ ?