ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮ಳಿ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ ಶಕರಾಜ- ಹಾಗಾದರೆ, ದೊರೆಯೆ, ಇಂಥಾ ಗತಿ ಇಲ್ಲದೆ ಅಸಹ್ಯ ವಾದ ಆಹಾರವನ್ನು ತಿಂದು ಜೀವಿಸತಕ್ಕ ನಮ್ಮನ್ನು ಯಾವ ಆಶೆ ಯಿಂದ ಜೈಸುವುದಕ್ಕೆ ದಯಮಾಡಿದಿರಿ ? ನಮ್ಮ ತಿಂಡಿಯನ್ನು ತಿಂದು ನಮ್ಮ ಬಾಳನ್ನು ಬಾಳುವ ಕಷ್ಟ ಜೀವಿಗಳಾದ ನಮ್ಮ ಜನರನ್ನು ಪರಾ ಜಯ ಮಾಡುವುದು ಅಸಾಧ್ಯ. ಆದಕಾರಣ ಶಕರನ್ನು ಇನ್ನು ಮೇಲೆ ನಿಮ್ಮ ಸ್ನೇಹಿತರಲ್ಲಿ ಗಣನೆಮಾಡಿಕೊಳ್ಳಿ, ನಿಮ್ಮ ಸೀಮೆಯ ತಿ೦ಡಿಯ ಸ್ವಾರಸ್ಯವು ನಮ್ಮ ಶಕರಿಗೆ ತಿಳಿಯಲೇಬೇಡ, ಅವರು ಅದನ್ನು ತಿಳಿದರೆ ನಿಮ್ಮ ದೇಶದ ಮೇಲೆ ಅವರು ಬಂದು ಬಿದ್ದು ನಿಮ್ಮನ್ನು ಜೈಸಿಯಾರು. ಆದ್ದರಿಂದ ನಿಮ್ಮ ಆಹಾರದ ರುಚಿಯನ್ನು ಅವರು ಅರಿಯದೇ ಇರಲೆಂದು ನೀವು ದೇವರಿಗೆ ಪ್ರಾರ್ಥನೆಮಾಡಿ. ಶಕರಾಜನು ಈ ಪ್ರಕಾರ ಬುದ್ದಿಯನ್ನು ಹೇಳಿ ಲೋಲಾಕ್ಷ ನನ್ನು ಸೆರೆಯಿಂದ ಬಿಡುಗಡೆಮಾಡಿ, ಹತಶೇಷವಾಗಿರುವ ಆತನ ದಂಡನ್ನು ಕರೆದುಕೊಂಡು ತನ್ನ ರಾಜ್ಯಕ್ಕೆ ಹೋಗಬಹುದೆಂದು ಹೇಳಿದನು. ಈ ಶಕರ ಸ್ವಭಾವ ಇಂಥಾದ್ದು, ನಾನು (ಚಾರುದತ್ತ) ಅವರ ಪಾಳಯದಲ್ಲಿ ಹೋಗುತ್ತಿರುವಾಗ ಒಂದು ಕಡೆಯಲ್ಲಿ ಗಂಡಸರು ಗುಂಪು ಗುಂಪಾಗಿ ಸೇರಿಕೊಂಡು ಒಂದು ಗುಂಪಿನವರು ಇನ್ನೊಂದು ಗುಂಪಿನವರ ಮೇಲೆ ಕೃತಕ ಯುದ್ದ ಮಾಡುವುದು, ಎದುರಾಳಿಗಳು ಅವರನ್ನು ಎದು ರಿಸುವುದು ; ಮತ್ತೊಂದು ಕಡೆಯಲ್ಲಿ ಹುಡುಗರು ಅಂಬು ಹೊಡೆಯುವು ದನ್ನು ಅಭ್ಯಾಸ ಮಾಡುವುದು, ಇನ್ನೊಂದು ಎಡೆಯಲ್ಲಿ ಹೆಂಗಸರು ಒಂದು ಒಡವೆಯೂ ಇಲ್ಲದೆ ಇದ್ದಾಗ್ಯೂ, ಮನೆಗೆಲಸ ಮುಂತಾದ್ದನ್ನು ಯಾವಾಗಲೂ ಮಾಡುವುದು, ಸೌಂದರ್ಯವಿಲ್ಲದಿದ್ದಾಗ್ಯೂ ದೃಢಾಂಗ ರಾಗಿರುವುದು, ಹೀಗೆ ಇದ್ದರು. ಕೊನೆಗೆ ನಾನು ಅರಸನ ಗುಡಾರದ ಬಳಿಗೆ ಹೋದೆ. ಅದು ಇತರ ಗುಡಾರಗಳಂತೆ ಸಾಧಾರಣವಾಗಿಯೇ ಇತ್ತು, ಅಲ್ಲಿ ಭಟರು ನನ್ನನ್ನು ರಾಜ ಸಂಮುಖಕ್ಕೆ ಕರೆದುಕೊಂಡು ಹೋಗಿ ಬಿಟ್ಟರು. ಶಕಾಧಿ ಪತಿಯು ನನ್ನ ನ್ನು ಬಹುಮರ್ಯಾದೆಯಿಂದ ಕಂಡನು.