ಪುಟ:ಸಮತಿ ಮದನಕುಮಾರರ ಚರಿತ್ರ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭ ೨] ಸುಮತಿ ಮದನಕುಮಾರರ ಚರಿತ್ರೆ ಅರಸಿ-ತೊಟ್ಟು ಕೊಳ್ಳುವುದಕ್ಕೆ ರ್ಕಿಕಾಬಿನ ಅ೦ಗಿ, ತಿರುಗಾಡು ವುದಕ್ಕೆ ಗಾಡಿ, ಯಾವ ಕೆಲಸಕ್ಕೂ ಕಾದು ಬಿದ್ದಿರುವುದಕ್ಕೆ ಓಲೆಕಾರರು, ಇದೆಲ್ಲಾ ನಿನಗೆ ಬೇಡವೆ ? - ಸುಮತಿ – ಆ ಪಕ್ಷಕ್ಕೆ ಅಮ್ಮಯ್ಯಾ, ಯಾವ ಅ೦ಗಿಯಾದರೇನು? ಮೈಗೆ ಬೆಚ್ಚಗಿದ್ದರೆ ಸರಿ, ವಾಹನಗಳಿಂದೇನು ? ಅದೇನೂ ಇಲ್ಲದೇ ಇದ್ದರೆ ಮನಸ್ಸು ಬಂದಕಡೆ ನಾನು ತಿರುಗಾಡಬಹುದು, ಆಳುಗಳು ನೂರುಜನ ತಾನೇ ಇದ್ದರು ; ಫಲವೇನು ? ಅವರಿಗೆ ಕೆಲಸವೇನಿದೆ ? ಮಾನಾಂಬಕಿಯು ಸುಮತಿಯನ್ನು ಅತಿ ಕೀಳಾಗಿ ತಿಳಿದು, ಅವನ ಸಂಗಡ ಇನ್ನು ಯಾವ ಮಾತನ್ನೂ ಆಡದೆ, ಆ ಗಂಡನ್ನು ಬೆರಗಾಗಿ ನೋಡುತಿದ್ದಳು. ಸಾಯಂಕಾಲದ ಸಮಯಕ್ಕೆ ಸುಮತಿಯು ತಮ್ಮ ಮನೆಗೆ ಹೋದನು. ಅಲ್ಲಿ ಅವರ ತಂದೆಯಾದ ಸೂರ ಭಟ್ಟ ನು ಮಗನನ್ನು ಕುರಿತು-ಅನಂಗರಾಜರ ಅರಮನೆಗೆ ಹೋಗಿದ್ದೆ ಯಲ್ಲಾ, ಏನೇನು ನೋಡಿದೆ ? ಯಾವ ಯಾವುದು ಚೆನ್ನಾಗಿತ್ತು, ಎಂದು ಕೇಳಿದನು. ಆಗ ಸುಮತಿಯು-ಹವುದು, ಹೋಗಿದ್ದೆ ; ಅವರೆಲ್ಲಾ ನನ್ನನ್ನು ಬಹುವಾಗಿ ಲಾಲಿಸಿದರು. ನನಗೇನೊ ಅವನು ಉಪಕಾರವನ್ನೇ ಮಾಡಿದಹಾಗಾಯಿತು, ಆದರೆ ನಾನು ಅಲ್ಲಿಗೆ ಹೋಗದೆ ಮನೆಯ ಲ್ಲಿಯೇ ಇದ್ದ ರಾಗಿತ್ತು ಎನ್ನಿಸಿಹೋಯಿತು. ನಿಧಾನವಾಗಿ ಸ್ವಲ್ಪ ತಿಂಡಿ ತಿನ್ನ ಬೇಕು, ಎಂದರೆ ಮಾರ್ಗವಿಲ್ಲ; ನನ್ನ ಮನಸ್ಸಿಗೆ ಬಹು ಅಸಮಾಧಾನವಾಯಿತು. ಒಬ್ಬ ಬರುವುದು, ಹಣ್ಣಿನ ಮೇಲಿನ ಸಿಪ್ಪೆ ವರೆಯುವುದು ; ಇನ್ನೊ ಬ್ಬ ಬರುವುದು, ಅದನ್ನು ಕುಯ್ಯುವುದು ; ಇನ್ನೊ ಬ್ಬ ಬರುವುದು, ಅದರ ಪಚ್ಚಡಿಯನ್ನು ನನ್ನ ಬಾಯಿಗೆ ತಿನ್ನಿ ಸು ವುದು ; ಇನ್ನೊಬ್ಬ ಬರುವುದು, ನಾನು ಉಗುಳುವುದಕ್ಕೆ ಮುಂಚೆಯೇ ನನ್ನ ಬಾಯಿನಿಂದ ಸಿಪ್ಪೆಯನ್ನು ಕಿತ್ತುಕೊಂಡು ಹೋಗುವುದು ; ಇನ್ನೊಬ್ಬ ಹಾಲನ್ನು ತಂದಿರಿಸುವುದು ; ಮತ್ತೊಬ್ಬ ಹಾಲನ್ನು ಆರಿಸು ವುದು ; ಮತ್ತೊಬ್ಬ ಅದನ್ನು ಬಟ್ಟಲಿಗೆ ಹನಿಸುವುದು, ಮತ್ತೊಬ್ಬ ಆ ಬಟ್ಟಲನ್ನು ನನಗೆ ತಂದು ನೀಡುವುದು ; ಮತ್ತೊಬ್ಬ ನನ್ನ