ಪುಟ:ಸಮತಿ ಮದನಕುಮಾರರ ಚರಿತ್ರ.djvu/೩೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪] ಸುಮತಿ ಮದನಕುಮಾರರ ಚರಿತ್ರೆ ೨೮ ಅರ್ಧಾಸನದಲ್ಲಿ ಕುಳ್ಳಿರಿಸಿಕೊಂಡು ನಾನು ತಿರುಗಿದ ದೇಶ ದೇಶದ ವರ್ತಮಾನಗಳನ್ನೆಲ್ಲಾ ನನ್ನಿ೦ದ ಕೇಳುವುದಕ್ಕೆ ಮೊದಲು ಮಾಡಿ ದನು. ಅವನು ಸಂಸ್ಕಾರಿಯಲ್ಲದಿದ್ದಾಗ್ಯೂ ಅವನ ಬುದ್ದಿ ಶಕ್ತಿಯೂ ಗ್ರಾಹಕಶಕ್ತಿಯೂ ಅನ್ಯಾದೃಶವಾಗಿ ತೋರಿಬಂತು. ಸಂಸ್ಕಾರಿಗಳಲ್ಲಿ ಇರಬೇಕಾದ ಕೌಶಲ್ಯ ವೆಲ್ಲಾ ಆತನಲ್ಲಿ ಸ್ವಭಾವವಾಗಿಯೇ ಇತ್ತು. ಮತ್ತೊಂದು ವಿಶೇಷವೇನೆಂದರೆ, ಆತನಿಗೆ ನಮ್ಮ ರೀತಿಗಳೂ ಪದ್ಧತಿ ಗಳೂ ವಿಶೇಷವಾಗಿ ಗೊತ್ತಾಗಿದ್ದವು. ಶರೀರವನ್ನೂ ಬುದ್ದಿ ಯನ್ನೂ ಸಪ್ಪೆಮಾಡತಕ್ಕ ಕಾರ್ಯಗಳನ್ನೂ, ನಮ್ಮ ಅಧಿಕವಾದ ಅಪೇಕ್ಷೆ ಗಳನ್ನೂ, ಇಲ್ಲದ ಸಾಜೋಕನ್ನೂ, ಕಂಡರೆ ಆತನಿಗೆ ಅತ್ಯಂತವಾಗಿ ತಿರಸ್ಕಾರ ಹುಟ್ಟಿ ತು. ಇಂಥಾ ದುರ್ಗುಣಗಳು ಶತ್ರುಗಳ ಆಯುಧಕ್ಕಿಂತಲೂ ತೀಕ್ಷ್ಯ ವಾಗಿ ಮನುಷ್ಯನ ಪೌರುಷವನ್ನು ನಾಶಮಾಡುವವು ಎಂದು ಹೇಳು ತಿದ್ದನು. ಒಂದು ದಿನ ಆ ಶಕಾಧಿಪತಿಯ ಸಭೆಯಲ್ಲಿ ಸುಂದರಿಯಾದ ಒಬ್ಬ ಸೂಳೆಯು ಮೇಳವನ್ನು ಕಟ್ಟಿ ಮನೋಹರವಾಗಿ ಕುಣಿಯುತ್ತಿ ದಳು, ನೋಡಿದವರೆಲ್ಲರೂ ಆನಂದ ಪಡುತ್ತಿದ್ದರು. ಈ ದೊರೆಯು ಅದನ್ನು ನೋಡಿ ಇವಳು ಕಪಿಯಾಗಿ ಹುಟ್ಟಿದ್ದರೆ ಚೆನ್ನಾಗಿತ್ತು ಎಂದನು. ಮತ್ತೊಬ್ಬನು ಸಂಗೀತವನ್ನು ಬಹು ಚೆನ್ನಾಗಿ ಹಾಡುತ್ತಿ ರಲು, ದೊರೆಯು ಅವನನ್ನು ಕುರಿತು ಎಲೈ ಗಾಯಕನೆ, ನೀನು ಈ ಸಿಂಧುದೇಶೀಯರ ಸಭೆಯಲ್ಲಿ ಬೇಕಾದರೆ ಗಾನಮಾಡಿಕೊ, ನಮ್ಮ ಶಕರಪಾಳಯದಲ್ಲಿ ಗಾನಮಾಡೀಯೆ, ನಿನಗೆ ತಲೇ ಹುಯಿಸಿಯೇನು ಎಂದನು. ತರುವಾಯ ಆ ಶಕಾಧಿಪನು ಊಟಕ್ಕೆ ಎದ್ದನು, ಒಣಗಿದ ಮಾಂಸದ ತುಂಡು ಸ್ವಲ್ಪ, ಗಟ್ಟಿಯಾಗಿ ಹೆತ್ತು ಇದ್ದ ಹುಳಿ ಮೊಸರು, ಬೇಯಿಸಿದ ಬೆರೆಕೆ ಸೊಪ್ಪು, ಯಾವುದೋ ಒಂದು ಬಗೆ ಒಣಕಲ ಹಿಟ್ಟು, ಇಷ್ಟನ್ನು ತಂದು ಬಡಿಸಿದರು. ದೊರೆಯು ಚಾರುದತ್ತನನ್ನು ಕುರಿತು