ವಿಷಯಕ್ಕೆ ಹೋಗು

ಪುಟ:ಸಮತಿ ಮದನಕುಮಾರರ ಚರಿತ್ರ.djvu/೩೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪] ಸುಮತಿ ಮದನಕುಮಾರರ ಚರಿತ್ರೆ ೨೮ ತೇನೆ. ಊರ ಜನರನ್ನು ಬೇರೇ ನಿನ್ನ ವಶಕ್ಕೆ ಬಿಟ್ಟು ಕೊಡುವುದಿಲ್ಲ, ಎಂದನು. ಆಗ ಹೊಲ್ಲನು ಆಗ್ರಹದಿಂದ ಹೊರಟು ಹೋದನು. ಅವನ ಸೇನೆಗೂ ಮಲ್ಲನ ಜನರಿಗೂ, ಜಗಳ ಆರಂಭವಾಯಿತು. ಯುದ್ಧ ಮಾಡುವುದರಲ್ಲಿ ಚೆನ್ನಾಗಿ ನುರುಗಿದ್ದ ಹೊಲ್ಲನ ಭಟರು ಆ ಊರ ಮಂದಿಯನ್ನೆಲ್ಲಾ ಸಾಯಗೊಲೆಹಾಕಿ ಹುಡಿಬಡಿದರು, ಮಲ್ಲನ ಊರಿನ ರೈತರು ಎಂದಿಗೂ ಇಂಥಾ ಕದನಗಳಲ್ಲಿ ಕಾದಿದವರಲ್ಲವಾದ್ದ ರಿಂದ ಅವರು ಶತ್ರುಗಳ ಎದುರಿಗೆ ನಿಲ್ಲಲಾರದೆ ಓಡಿಹೋಗುವ ಹೊತ್ತು ಬಂತು. ಹೊಲ್ಲನಿಗೆ ಇನ್ನೇನು ಜಯವಾಯಿತು ಎಂದು ಶತ್ರುಗಳು ಸಂತೋಷವಾಗಿ ಕೂಗಿಕೊಂಡು ಎದುರಾಳುಗಳನ್ನು ಹಿಂದಟ್ಟಿ ಹೋಗುತಿರುವಾಗ ನೂರು ಸಿಡಿಲು ಏಕಕಾಲದಲ್ಲಿ ಹೊಡೆದ ಹಾಗೆ ಸದ್ದಾಯಿತು, ಸುತ್ತಲೂ ಇದ್ದ ಬೆಟ್ಟದ ಬಂಡೆಗಳೆಲ್ಲಾ ಹಾರಿ ಹೊಲ್ಲನ ಸೇನೆಯ ಮೇಲೆ ಬಿತ್ತು, ಭೂಮಿ ಬಿರಿದು ಹೋಗಿ ಹೊಲ್ಲನ ಸೇನೆ ಅದರಲ್ಲಿ ದೊಸಕೊಂಡುಹೋಯಿತು. ಅನೇಕರು ಸತ್ತು ಹೋದರು ; ಕೆಲವರು ಕೈ ಕಾಲು ಮುರಿದು, ಸಾಯುತಾ ಬಿದ್ದಿದ್ದರು. ಅಕಸ್ಮಾತ್ತಾಗಿ ದೇವರ ಕೃಪೆಯಿಂದ ಮಲ್ಲನ ಕಡೆಯವರಿಗೆ ಜಯ ವಾಯಿತು. ಆಗ ಆ ಊರ ಜನರೆಲ್ಲಾ ಮಲ್ಲನ ಎದುರಿಗೆ ಬಂದು ವಿಶೇಷವಾಗಿ ಮರ್ಯಾದೆ ಮಾಡಿ ಅವನಿಂದ ತಮ್ಮ ಊರೂ ತಮ್ಮ ಜನರೂ ಉಳಿದರೆಂದು ಅವನನ್ನು ಹೊಗಳಿದರು. ಆಗ ಮಲ್ಲನು ಹೊಲ್ಲನ ಗತಿ ಏನಾಯಿತೋ ನೋಡೋಣವೆಂದು ಹುಡುಕಿಸುವಾಗ ಅವನ ಅಂಗಗಳೆಲ್ಲಾ ಮುರಿದು ಮುಖವೆಲ್ಲಾ ಜಜ್ಜಿ ಹೋಗಿ ಸತ್ತು ಹೋಗಿದ್ದನು. ಅವನ ಮೇಲೆ ಅನೇಕ ಹೆಣಗಳು ಬಿದ್ದಿದ್ದವು. ಗುರುತು ಸಿಕ್ಕುವುದೇ ಕಷ್ಟವಾಯಿತು, ಮಲ್ಲನು ಅವನ ಹೆಣವನ್ನು ತೆಗೆಯಿಸಿ ಹೂಳಿಸಿದನು. ತರುವಾಯ ತಾನು ಗೌರವಶಾಲಿಯಾಗಿ ಊರಲ್ಲಿ ಜನರಿಗೆ ಬೇಕಾದ ಉಪಕಾರವನ್ನು ಮಾಡಿಕೊಂಡಿದ್ದ ನು. ಚಾರುದತ್ತನು ಮಾಡಿದ ಉಪಕಾರಕ್ಕಾಗಿ ಗ್ರಾಮದವರೆಲ್ಲಾ ಸೇರಿ ಅವನಿಗೆ ಒಂದು ಭೂಮಿಯನ್ನು ಮಾಡಿಕೊಟ್ಟರು. ಅದನ್ನು ಗ್ರಾಮದ ರೈತರೇ ಉತ್ತು ಬಿತ್ತಿ ಬಂದ ಬೆಳೆಯನ್ನು ಚಾರುದತ್ತನ ಜೀವನಕ್ಕೆ