ಪುಟ:ಸಮತಿ ಮದನಕುಮಾರರ ಚರಿತ್ರ.djvu/೩೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Sto ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ ಕೊಡುತ್ತಿದ್ದರು. ಚಾರುದತ್ತನ ಕಥೆ ಹೀಗೆ ಮುಗಿಯಿತು. ಹೀಗೆ ಕಥೆಯನ್ನು ಲಲಿತೆಯು ಓದಿ ಪೂರೈಸಿದ ತರುವಾಯ ಮದನ- ಬಂಡೆಗಳೆಲ್ಲಾ ಒಡೆದು ಭೂಮಿ ಎಲ್ಲಾ ಬಿರಿದು ದೊಡ್ಡ ಸೇನೆ ಮಡಿದು ಹೋಗಬೇಕಾದರೆ, ಆ ಶಕ್ತಿ ಎಂಥಾದ್ದು ? ಆ ತ್ರಾಣ ಯಾವುದು ? ಜೋಯಿಸ- ಗಂಧಕ ಕಡ್ಡಿ ಯುಪು ಮೊದಲಾದ ಪದಾರ್ಥ ಗಳನ್ನು ಸೇರಿಸಿ ಮಾಡಿರುವ ಪುಡಿಯ ತ್ರಾಣ. ಮದನ-ಇದು ಮದ್ದು, ಇದನ್ನು ಸಾಧಾರಣವಾಗಿ ಕೋವಿ ಗಳಿಗೆ ಹಾಕಿ ಹಾರಿಸುತ್ತಾರಷ್ಟೆ ? ಇಂಥಾ ವಿಪರೀತ ಅದರಿಂದ ಹೇಗೆ ಉಂಟಾದೀತು ? ಜೋಯಿಸ-ಅದು ಸಾಧಾರಣವಾದ ಶಕ್ತಿ, ಅದರಲ್ಲಿ ಇನ್ನೂ ಕೆಲವು ಕ್ರಮಗಳನ್ನು ನಡಸಿದರೆ ಒಂದಕ್ಕೆ ನೂರರಷ್ಟು ತ್ರಾಣ ಹುಟ್ಟುವುದು. ಮದನ- ಚಾರುದತ್ತನು ಅಲ್ಪನಾಗಿ ಕಂಡರೂ ಅವನು ಎಂಥಾ ರಹಸ್ಯಗಳನ್ನು ಬಲ್ಲವನು ? ಇವನು ಇಲ್ಲದಿದ್ದರೆ ಮಲ್ಲನ ಕಡೆಯವರಿಗೆ ಜಯವಾಗುತಿರಲಿಲ್ಲ. ನಾವು ದೊಡ್ಡವರು, ನಾವು ಐಶ್ವರ್ಯವಂತರು, ನಾವು ದೊರೆಮಕ್ಕಳು, ನಾವು ಅರಸಿಯರು, ಹೀಗೆ ಹಾಗೆ ಎಂದು ಪ್ರತಿಷ್ಠೆ ಯನ್ನು ಕೊಚ್ಚಿ ಕೊಂಡು ಮೆರೆಯುವ ಮನುಷ್ಯರು ಈಗಲಾ ದರೂ ತಿಳಿದುಕೊಳ್ಳಲಿ. ಈ ಚಾರುದತ್ತನ ಕಥೆಯನ್ನು ಜೋಯಿಸರು ಆ ಜನರಿಗೆ ಓದಿ ಹೇಳಿದ್ದರೆ, ತಮಗಿಂತಲೂ ಎಷ್ಟೋ ಭಾಗದಲ್ಲಿ ಬುದ್ದಿ ಶಾಲಿಯಾಗಿರುವ ಸುಮತಿಯನ್ನು ಅವರು ಅಷ್ಟೊಂದು ತಿರಸ್ಕಾರ ಮಾಡಿ ಅವನಿಗೆ ಅಷ್ಟು ಅವಮಾನ ಮಾಡುತಿರಲಿಲ್ಲ. - ದೊರೆ-ಇಷ್ಟು ದಿವಸವೂ ಜೋಯಿಸರು ನಿನಗೆ ಹೇಳಿಕೊಟ್ಟ ಬುದ್ದಿ ವಾದವೂ, ಯೋಗ್ಯನಾದ ಸುಮತಿಯೊಡನೆ ನಿನಗೆ ಇದ್ದ ಇಷ್ಟು ದಿವಸದ ಸ್ನೇಹವೂ ಯಾವ ಉಪಯೋಗಕ್ಕೂ ಬಾರದೆ, ನಾಚಿಗೆ ಕೆಟ್ಟು ಸುಮತಿಯನ್ನು ನೀನು ಹೊಡೆಯುವ ಮಟ್ಟಿಗೆ ನಿನ್ನಲ್ಲಿ ದುಡುಕು ಇರುವಾಗ, ಜೋಯಿಸರು ಅರೆಗಳಿಗೆ ಓದಿ ಹೇಳಿದ ಕಥೆಯಿಂದ ಅವರೆ