ಪುಟ:ಸಮತಿ ಮದನಕುಮಾರರ ಚರಿತ್ರ.djvu/೩೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪? ಸುಮತಿ ಮದನಕುಮಾರರ ಚರಿತ್ರೆ ೨೧ ಲ್ಲರೂ ಬುದ್ಧಿಶಾಲಿಗಳಾಗುತ್ತಾರೆಂದು ನೀನು ಹೇಗೆ ಹೇಳಬಲ್ಲೆ ? ಮದನ-(ನಾಚಿಕೆಯಿಂದ) ಅಪ್ಪಾಜಿ, ನನ್ನಿಂದ ಅಪರಾಧ ವಾಯಿತು. ಇಲ್ಲಿಗೆ ಕ್ಷಮಿಸಬೇಕು. ನಾನು ಇನ್ನು ಮೇಲೆ ಹೀಗೆ ಮಾಡಿದರೆ ನನ್ನ ಮುಖವನ್ನು ತಾವು ನೋಡಬೇಡಿ. ಹೀಗೆ ಹೇಳಿ ಕೇವಲ ಲಜ್ಜೆಯಿಂದ ಮಾತನಾಡದೆ ಆ ಕೊಟ್ಟಡಿ ಯಿಂದ ಹೊರಟು ಹೋದನು. ದೊರೆ- ಪ್ರಯೋಜನವೇನು ? ಗಾಳಿ ತಿರುಗಿದ ಹಾಗೆ ಈ ಹುಡುಗನ ಸ್ವಭಾವವೂ ತಿರುಗುವುದು. ಜೋಯಿಸ-ಈಗ ಅವನ ಮನಸ್ಸಿಗೆ ಅ೦ಟದ ಸಂಗತಿಗಳಿಗಾಗಿ ಸಂತೋಷ ಪಡಬೇಕು, ಈ ಲೋಕದಲ್ಲಿ ಅನೇಕ ಜನರಿಗೆ ಒಂದೊಂದು ತಪ್ಪನ್ನೂ ಮಾಡಿ ಮಾಡಿ ಮನಸ್ಸು ಜಿತವಾಗಬೇಕು. ಕೂಡಲೆ ಮದನನು ಮನೆಯೊಳಕ್ಕೆ ಹೋಗಿ ತನ್ನ ಡಂಭವಾದ ಬಟ್ಟೆ ಗಳನ್ನೂ ಒಡವೆಗಳನ್ನೂ ತೆಗೆದುಹಾಕಿ, ಬಡವರ ಹಾಗೆ ಬಟ್ಟೆ ಯನ್ನು ಹೊದ್ದು ಹೊರಕ್ಕೆ ಹೊರಟನು. - ರಾಣಿ-ಮಗು ಇದೇನು ಬಟ್ಟೆ ? ಇಂಥಾ ವೇಷ ದೊರೆ ಮಕ್ಕ ಳಿಗೆ ಯೋಗ್ಯವಾದದ್ದೆ ? ಮದನ-ಅಮ್ಮಯ್ಯ, ನಿಮ್ಮ ಡಂಭದ ಬಟ್ಟೆ ಗಳು ಸಾಕು, ನಿಮ್ಮ ಆಭರಣಗಳೂ ಸಾಕು, ನನಗೆ ಇಷ್ಟರಮಟ್ಟಿನ ಬುದ್ದಿ ಬಂದಿದ್ದರೆ ನಮ್ಮ ಮನೆಯಲ್ಲಿ ಪ್ರಸ್ತಕ್ಕಾಗಿ ಸೇರಿದ್ದ ಆ ಕೂಟದ ನಡತೆ ನನಗೆ ಬರುತಿರಲಿಲ್ಲ ; ಯೋಗ್ಯನಾದ ಸುಮತಿಯ ವಿಷಯದಲ್ಲಿ ನಾನು ಅಷ್ಟು ದುಡುಕನ್ನು ತೋರಿಸುತಲೂ ಇರಲಿಲ್ಲ. ಹೀಗೆಂದು ಹೇಳಿದ ರಾಜಪುತ್ರನ ಮಾತನ್ನು ಕೇಳಿ ಕೆಲವರಿಗೆ ಆಶ್ಚರ್ಯವೂ ಕೆಲವರಿಗೆ ಸಂತೋಷವೂ ಉಂಟಾಯಿತು. ಮಾರನೇ ದಿವಸ ಬೆಳಗ್ಗೆ ಮದನನು ಜೋಯಿಸರ ಬಳಿಗೆ ಹೋಗಿ ಅವರಿಗೆ ಎಂದಿನಂತೆ ಪ್ರಾತಃಕಾಲದ ನಮಸ್ಕಾರವನ್ನು ಮಾಡಿ, * ಜೋಯಿಸರೆ, ಸುಮತಿ ಯನ್ನು ನಾನು ನೋಡಬೇಕು, ಅವರ ಮನೆಗೆ ಹೋಗೋಣ” ಎಂದನು, ಅದರಂತೆ ಜೋಯಿಸನೂ ಮದ