ಪುಟ:ಸಮತಿ ಮದನಕುಮಾರರ ಚರಿತ್ರ.djvu/೩೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ ನನೂ ಸೂರ್ಯಭಟ್ಟರ ಮನೆಗೆ ಹೊರಟರು. ಮದನನು ಸುಮತಿಯ ಮೇಕೇಮರಿಯನ್ನು ಸಂಗಡ ಕರೆದುಕೊಂಡು ಹೋರಟನು. ಸಂಗಾತಿ ಯನ್ನು ನೋಡಲು ಕೇವಲ ಕುತೂಹಲನಾಗಿದ್ದ ಮದನನ ಕಣ್ಣಿಗೆ ಮೊದಲು ಸುಮತಿ ಕಾಣಿಸಿದನು. ಕೂಡಲೆ ದೊರೆ ಮಗನು ಅತಿ ವೇಗದಿಂದ ಮದನನ ಕಡೆಗೆ ನಗುತಾ ಓಡಿ ಬಂದನು. ಆಗ ಸುಮು ತಿಯು ಇವನ ಅಭಿಪ್ರಾಯವನ್ನು ತಿಳಿದುಕೊಂಡು ಮದನನನ್ನು ಬಾಚಿ ತಬ್ಬಿಕೊಂಡನು. ಈ ಪ್ರಕಾರ ಇಬ್ಬರೂ ಒಂದು ಗಳಿಗೆಯಲ್ಲಿ ಪೂರ್ವದಂತೆಯೇ ಸ್ನೇಹಿತರಾದರು. ಅಷ್ಟರಲ್ಲಿಯೇ ರಾಮಜೋಯಿಸನೂ ಅಲ್ಲಿಗೆ ಬಂದು ಒದಗಿ, ಸುಮತಿಯನ್ನು ಕುರಿತು, ಜೋಯಿಸ-ಸುಮತಿ, ನಿನ್ನ ಸ್ನೇಹಿತನನ್ನು ಕರೆದುಕೊಂಡು ಬಂದಿದೇನೆ, ತಾನು ಪರಿತಾಪ ಪಟ್ಟು ಅಪರಾಧ ಮಾಡಿದೆನೆಂದು ನಿನ್ನ ಮುಂದೆಯೇ ಒಪ್ಪಿಕೊಂಡು ಕ್ಷಮೆಯನ್ನು ಕೇಳಿಕೊಳ್ಳುವುದಕ್ಕೆ ಬಂದಿದಾನೆ. ಮದನ-ಗುರುಗಳೇ, ಸರಿತಾಪವೇನೋ ನನಗೆ ಚೆನ್ನಾಗಿಯೇ ಉಂಟು, ಆದರೆ ನನ್ನ ದುರ್ನಡತೆಯನ್ನು ಸುಮತಿ ಕ್ಷಮಿಸಿಯಾನೆ ? ಸುಮತಿ-ಹಾಗೆ ಹೇಳಬೇಡ, ಮದನ, ನನ್ನಲ್ಲಿ ನಿನಗೆ ಇದ್ದ ಪ್ರೀತಿಯೊಂದು ಹೊರತು ನಿಂತದ್ದೆಲ್ಲವನ್ನೂ ಮರೆತುಬಿಟ್ಟೆ. ಹೀಗೆ ಹೇಳಿದ ಕೂಡಲೆ ಮದನನು ಪೂರ್ವದಲ್ಲಿ ತಾನು ನಾಯಿ ಯಿಂದ ಕೊಲ್ಲಲ್ಪಡುತ್ತಿದ್ದ ಸುಮತಿಯ ಮೇಕೆಮರಿಯೊಂದನ್ನು ಬಿಡಿಸಿಕೊಂಡು ಇಷ್ಟು ದಿನವೂ ಬಹು ಜಾಗರೂಕತೆಯಿಂದ ಪೋಷಣೆ ಮಾಡಿ ತನ್ನ ಸಂಗಡಲೇ ಕರೆದುಕೊಂಡು ಬಂದದ್ದನ್ನು ಸುಮತಿಗೆ ಕೊಟ್ಟು, ಅದರ ಪೂರ್ವ ವೃತ್ತಾಂತವನ್ನೆಲ್ಲಾ ವಿಸ್ತಾರವಾಗಿ ಹೇಳಿ ದನು. ಆಗ ಸುಮತಿಗೆ ತನ್ನ ಮೇಕೆಮರಿ ಉಳಿಯಿತಲ್ಲಾ ಎಂದು ಸಂತೋಷ ಮತ್ತೂ ಹೆಚ್ಚಾಯಿತು. ಸುಮತಿಯು ಜೋಯಿಸನನ್ನೂ ದೊರೆ ಮಗನನ್ನೂ ತಮ್ಮ ಮನೆಗೆ ಕರೆದುಕೊಂಡು ಹೋದನು. ಆ ಮನೆ ಅಷ್ಟು ದೊಡ್ಡದಲ್ಲದಿದ್ದಾಗ್ಯೂ ಅನುಕೂಲವಾಗಿಯೂ ನೋಡುವು