ಪುಟ:ಸಮತಿ ಮದನಕುಮಾರರ ಚರಿತ್ರ.djvu/೩೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

St೪ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ ಮದನ-ಅಯ್ಯಾ, ನೀನು ನಮ್ಮ ಸುಮತಿಯ ಪ್ರಾಣವನ್ನು ಕಾಪಾಡಿದ ಆ ಪದ್ಬಂಧುವಲ್ಲವೆ ? ಉಪಕಾರಕ್ಕೆ ಪ್ರತ್ಯುಪಕಾರವನ್ನು ಮಾಡದೆ, ನಾನು ಅಲಕ್ಷ್ಯವಾಗಿದ್ದ ಸಂಗತಿಗಳಲ್ಲಿ ಇದು ಒಂದು ದೊಡ್ಡದು. ಈ ಹಬ್ಬ ಸಿ-ಬುದ್ದಿ, ನಾನು ಸುಮತಿಯ ಸಂಗಡ ಇವರ ಮನೆಗೆ ಬಂದಾಗಿನಿಂದ ಇದುವರೆಗೆ ಸಜ್ಜನರಾದ ಈ ಮನೆಯವರಿಂದ ನಾನು ಹೊಂದಿದ ಉಪಕಾರ ಎಷ್ಟೋ ಭಾರವಾಗಿ ನನ್ನ ತಲೆಯ ಮೇಲೆ ಕೂತಿದೆ, ನನಗೆ ಇನ್ನು ಬೇಕಾದ್ದು ಏನೂ ಇಲ್ಲ. ಮದನ-ಆದರೆ ದೊರೆನುಗನಾದ ನಾನು ಮಾಡುವ ಉಪಕಾರದ ಸ್ವಭಾವವನ್ನು ಇನ್ನೂ ನೀನು ಅರಿಯೆ. ಹೀಗೆಂದ ತರುವಾಯ ಮದನನು ಆ ದೊರೆನಗ ಎನ್ನುವ ಸ್ವ ಪ್ರತಾಪದ ಮಾತು ಮತ್ತೆ ತನ್ನ ಬಾಯಲ್ಲಿ ಹೊರಟಿತಲ್ಲಾ ಎಂದು ಮನಸ್ಸಿನಲ್ಲಿಯೇ ಸಂಕೋಚಮಾಡಿಕೊಂಡು, ಪುನಃ ಹಬ್ಬ ಸಿಯವ ನನ್ನು ಕುರಿತು_“ ಅಯ್ಯಾ, ನಾನು ಉಪಕಾರ ಮಾಡುತ್ತೇನೆಂದು ಅಲ್ಲ, ನಮ್ಮ ಅಪ್ಪಾಜಿಗೆ ಹೇಳಿ ನಿನಗೆ ಬೇಕಾದ್ದನ್ನು ಕೊಡಿಸುತ್ತೇನೆ” ಎಂದನು. ತರುವಾಯ ಹಬ್ಬ ಸಿಯವನಿಗೂ ಊಟವಾಯಿತು, ಈ ಮಧ್ಯೆ ಮದನನು ಸುಮತಿಯ ಅಕ್ಕ ತಂಗಿ ಮೊದಲಾದವರಲ್ಲಿ ಯಾವ ಟೇಂಕಾರವೂ ಇಲ್ಲದೆ ಸಲಿಗೆಯಾಗಿ ಮಾತನಾಡುತ್ತಾ ಗರ್ವವನ್ನು ಲೇಶವೂ ತೋರಿಸದೆ ಇದ್ದನು, ರಾಜಪುತ್ರನ ನಡತೆಯನ್ನು ನೋಡಿ ಸೂರ್ಯಭಟ್ಟನ ಮನೆಯವರೆಲ್ಲರಿಗೂ ಬಹು ಸಂತೋಷವಾಯಿತು. ಹೀಗೆ ಐಶ್ವರ್ಯವಂತರು ನಿಗರ್ವಿಗಳಾಗಿದ್ದರೆ ಅವರಿಗೆ ಸುಲಭವಾಗಿ ಗೌರವವೂ ಸೌಜನ್ಯವೂ ದೊರೆಯುವವು. ಇದನ್ನು ಬಿಟ್ಟು, ಅಹಂಕಾರ ದಿಂದ ಬಡವರ ಕಡೆಗೆ ತಿರುಗಿಯೂ ನೋಡದೆ ಆಡುವ ಮಾತುಗಳ ನ್ನೆಲ್ಲಾ ಘರ್ಜನೆಮಾಡಿ ಆಡುತಾ ಹೆಜ್ಜೆ ಹೆಜ್ಜೆಗೂ ಕೋಪವನ್ನು ಮಾಡಿಕೊಂಡು ಎಲ್ಲರನ್ನೂ ತಿರಸ್ಕರಿಸಿ ಮಾತನಾಡಿ ಮೆರೆಯುವರು. ಆಗ ಮನೆಯವರೆಲ್ಲರಿಗೂ ಊಟವಾಗಿ ಎಲ್ಲರೂ ಸಾವಕಾಶದಿಂದ