ಪುಟ:ಸಮತಿ ಮದನಕುಮಾರರ ಚರಿತ್ರ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮ ಸುಮತಿ ಮದನಕುಮಾರ [ಅಧ್ಯಾಯ ಕೈಯಿಂದ ಅದನ್ನು ಇಸುಕೊಳ್ಳುವುದಕ್ಕೆ ಸಿದ್ಧವಾಗಿ ಕಾದಿರು ವುದು ; ಮಗದೊಬ್ಬ ನನ್ನ ಕೈಗೆ ನೀರಹಾಕಲು ಬೆಳ್ಳಿ ಚಂಬಿನಲ್ಲಿ ಬಿಸಿ ನೀರನ್ನು ಹಿಡಿದುಕೊಂಡು ಕಾದಿರುವುದು; ಮಗದೊಬ್ಬ ನಾನು ಕೈ ತೊಳೆದುಕೊಳ್ಳುವುದಕ್ಕೆ ತಟ್ಟೆಯನ್ನು ಸಿದ್ದವಾಗಿ ಹಿಡಿದುಕೊಂಡಿರು ವುದು; ಮಗದೊಬ್ಬ ನನ್ನ ಕೈ ಒರಸುವುದಕ್ಕೆ ಚೌಕವನ್ನು ಹಿಡಿದು ಕೊಂಡು ನಿಂತಿರುವುದು: ಹೀಗೆಲ್ಲಾ ಮಾಡುತಿದ್ದರು, ನನಗೇನೋ ಕಂಣು ಕೈಕಾಲುಗಳೇನೂ ಇಲ್ಲದೇ ಇರುವಹಾಗೂ ಇವರೆಲ್ಲಾ ನನಗೆ ಸಹಾಯ ಮಾಡುವ ಹಾಗೂ ಇದಲ್ಲದೆ ಒಬ್ಬ ಈ ಕಡೇ ಬರುವನಲ್ಲ, ಒಬ್ಬ ಆ ಕಡೇ ಹೋಗುವನಲ್ಲ, ಇನ್ನೊಬ್ಬ ಓಡಿಹೋಗುವನಲ್ಲ ಹೀಗೆ ಹಾರಾಡುತಿದ್ದ ಈ ಓಲೆಕಾರರ ಸಂಭ್ರಮ ಸಾಕೋಸಾಕು, ಈ ಗದ್ದಲ ಎಂದಿಗಾದರೂ ಮುಗಿಯುವುದೇ ಇಲ್ಲವೊ ಏನೋ ಎಂದು ನನಗೆ ತೋರಿ ಹೋಯಿತು. ಅವರು ಕೊಟ್ಟ ತಿಂಡಿಯನ್ನೇನೋ ತಿಂದೆ ; ತಿ೦ದ ಕೂಡಲೆ ಅತ್ತಿತ್ತ ಅಡ್ಡಾಡದಹಾಗೆ ಒಂದು ಜಾವದ ಹೊತ್ತು ಸುಮ್ಮನೇ ಮಾತನಾಡಿಸುತ್ತಾ ಕೂರಿಸಿಕೊಂಡರು, ಅರಸಿಯು ನನ್ನ ಸಂಗಡ ಮಾತನಾಡುವುದಕ್ಕೆ ಮೊದಲು ಮಾಡಿದಳು ; ಆಕೆ ಮಾತು ರಾಮಜೋಯಿಸರ ಮಾತಿನ ಹಾಗಿರಲಿಲ್ಲ ; ಪ್ರಧಾನಿಗಳ ಮನೆಯ ವರನ್ನು ಕಂಡಹಾಗೆ ಎಲ್ಲರೂ ನನ್ನನ್ನು ಬೈಯುವುದಕ್ಕೆ, ಒಳ್ಳೆ ಬಟ್ಟೆ ಯನ್ನು ಹಾಕಿಕೊಳ್ಳು ತ್ತೀಯ ? ನೀನು ದೊರೆಯಾಗಬೇಕೆ ? ನಿನಗೆ ಐಶ್ವರ ಬರಬೇಕೆ ? ಎಂದು ಏನೇನೋ ಕೇಳುತ ಬಂದಳು, ಎಂದು ತಂದೆಯ ಸಂಗಡ ಹೇಳಿದನು. ಅತ್ತ ಅರಮನೆಯಲ್ಲಿ ಈ ಮಧ್ಯೆ ನಡೆಯುತಿದ್ದ ಮಾತೆಲ್ಲಾ ಸುಮತಿಯ ಗುಣ ಕಥನವೇ ಆಗಿತ್ತು, ಮಿಾನಾಂಬ ಕೀದೇವಿಯು ಆ ಹುಡುಗ ಧೈತ್ಯಶಾಲಿಯೆಂದೂ ನಿಷ್ಕಪಟ ಎಂದೂ ಒಪ್ಪಿಕೊಂಡಳು ; ಅವನ ಒಳ್ಳೆ ಸ್ವಭಾವವನ್ನೂ ಧಾರಾಳವಾದ ಬುದ್ಧಿಯನ್ನೂ ಕಂಡು ಬೆರಗಾದಳು. ಆದರೆ ಅವನ ಮಾತಿನಲ್ಲಿ ಸ್ವಲ್ಪ ಒರಟುತನವಿದೆ ಎಂತಲೂ, ನಯವಿಲ್ಲವೆಂತಲೂ, ಇಂಥಾ ವಿನಯವೂ ವಾಗ್ಯೂ ಷಣವೂ ಅಟ್ಟಹಾಸದಿಂದ ಬಾಳುವ ಐಶ್ವಠ್ಯವಂತರ ಮಕ್ಕಳಿಗೆ ಹೊರತು ಬಡ