ಪುಟ:ಸಮತಿ ಮದನಕುಮಾರರ ಚರಿತ್ರ.djvu/೩೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫] ಸುಮತಿ ಮದನಕುಮಾರರ ಚರಿತ್ರೆ ೨೯೬ ತನ್ನ ಕುದುರೆಯನ್ನು ಹಿಂದಕ್ಕೂ ಮುಂದಕ್ಕೂ ಸೊಟ್ಟ ಸೊಟ್ಟ ನಾ ಗಿಯೂ ಓಡಿಸುತ್ತಾ ಬಂದನು, ಗೂಳಿಯು ಇವನ ಹಿಂದೆಯೇ ಹರಿಸಿ ಯಾಡುತ್ತಾ ಹೋಯಿತು. ಇವನು ಅದಕ್ಕೆ ಸಿಕ್ಕಲಿಲ್ಲ. ಕೊನೆಗೆ ಆ ವೃಷಭಕ್ಕೆ ಆಯಾಸವಾಗಿ ವೇಗವನ್ನು ಕಡಮೆ ಮಾಡಿತು, ಆಗ ತನ್ನ ಕೈಲಿದ್ದ ಹಗ್ಗವನ್ನು ಎಸೆದು ಅದು ಮುಗ್ಗರಿಸಿ ಬೀಳುವಂತೆ ಮಾಡಿ ಹತ್ತಿರಕ್ಕೆ ಬಂದು ಅದನ್ನು ಕಟ್ಟಿ ಹಾಕಿದನು. ಹೀಗೆ ಹಬ್ಬ ಸಿಯವನು ಹೇಳಿದ ಕೂಡಲೆ, ಮದನ-ಅವನು ಎಂಥಾ ಸಮರ್ಥನಾಗಿರಬೇಕು ! ನಾವೇ ಐಶ್ವರ್ಯವಂತರು, ನಾವೇ ದೊರೆಮಕ್ಕಳು, ನಮಗೆ ಯಾರೂ ಸಮಾನ ರಿಲ್ಲ, ಎಂದು ಮೆರೆಯತಕ್ಕವರೆಲ್ಲಾ ಬಂದು, ಅ೦ಥಾ ಗೂಳಿಯೊಂದನ್ನು ಕಟ್ಟಿ ಹಾಕಲಿ, ನೋಡೋಣ ! ಈ ಹಬ್ಬ ಸಿ-ಬುದ್ಧಿ ಒಬ್ಬೊಬ್ಬ ಪುರುಷನಲ್ಲಿ ಒಂದೊಂದು ಗುಣ ವಿರುತ್ತೆ, ಜನರ ಕ್ಷೇಮಕ್ಕಾಗಿ ದೇವರು ಒಂದೊಂದು ದೇಶದಲ್ಲಿ ಒಂದೊಂದು ಸಾಮರ್ಥವನ್ನು ಮನುಷ್ಯನಿಗೆ ಕೊಟ್ಟ ದಾನೆ, ಆದರೆ ಯಾವ ಯೋಗ್ಯತೆಯೂ ಇಲ್ಲದೆ ಯಾವ ಕೆಲಸವನ್ನೂ ಮಾಡದೆ ಇತರರು ತಂದು ಹಾಕಿದ್ದನ್ನು ತಿಂದು ಹಾಕುತ್ತಾ ಕೂತ ಕಡೇ ಬಿಟ್ಟು ಏಳದೆ ಪ್ರತಿಷ್ಠೆ ಹತ್ತುವ ಜನರು ನಿಮ್ಮ ದೇಶದಲ್ಲಿ ಬೇಕಾದಷ್ಟಿ ದಾರೆ, ನಮ್ಮ ದೇಶದಲ್ಲಿ ಒಬ್ಬನೂ ಇಲ್ಲ. ಇವರು ಬಡವರನ್ನು ಬಹು ಅಲಕ್ಷ್ಯ ವಾಗಿ ಕಾಣುತಾರೆ, ಆ ಬಡವರು ಇಲ್ಲದಿದ್ದರೆ ಇವರು ಬದುಕುವುದು ಹೇಗೋ ಕಾಣೆ. ಮದನ-ಹವುದಯ್ಯ, ನೀನು ಹೇಳುವುದು ನಿಜವಾದ ಮಾತು. ನಾನು ಓದುವುದಕ್ಕೆ ಮೊದಲ್ಮಾಡಿದಾಗಿನಿಂದಲೂ ನನ್ನ ಅಭಿಪ್ರಾಯವೂ ಹಾಗೆಯೇ, ಆಮೇಲೆ ಆ ಸಾಹಸಗಾರ ಏನುಮಾಡಿದ ? ಹಬ್ಬಸಿ-ತರುವಾಯ ಇನ್ನೊಂದು ವೃಷಭವು ತೆವರಿಕೊಂಡು ಇವನ ಮೇಲೆ ಬೀಳುವುದಕ್ಕೆ ಬಂತು. ಆಗ ಆ ಸಾಹಸಗಾರನು ಕುದುರೆಯನ್ನು ಬಿಟ್ಟು ಇಳಿದು, ಕೊನೆಗೆ ಕಬ್ಬಿಣದ ಮೊಳೆಯನ್ನು ಪೆಟ್ಟಿದ್ದ ಒಂದು ಕೋಲನ್ನು ಕೈಯಲ್ಲಿ ಹಿಡಿದು, ಒಮ್ಮೆ ಗೂಳಿಯ 19