ಪುಟ:ಸಮತಿ ಮದನಕುಮಾರರ ಚರಿತ್ರ.djvu/೩೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ ಮುಂದೆ ಒಮ್ಮೆ ಅದರ ಹಿಂದೆ ಒಮ್ಮೆ ಅದರ ಮಗ್ಗುಲಲ್ಲಿ ಹೀಗೆ ಹಾರಿ ನಿಲ್ಲುತಾ ಓಡುತ್ತಾ ನಿಂತ ಕಡೆಯಲ್ಲಿ ನಿಲ್ಲದೆ ಅದನ್ನು ಸುತ್ತಾಡಿಸುತಾ ಇದ್ದನು. ಒಂದು ಸಾರಿ ಗೂಳಿಯು ತನ್ನ ಕೊಂಬನ್ನು ತನ್ನ ಶತ್ರು ವಿನ ಸ್ಪಷ್ಟ ಭಾಗಕ್ಕೆ ಹಾಕಿ ಹಾದು ಕೊಲ್ಲುವ ಸಮಯ ಬಂತು, ಅವನು ಅಲ್ಲಿಗೆ ಸಮಾಪ್ತಿಯಾದನೆಂದು ಸಭೆಯೆಲ್ಲಾ ಗೊಳ್ಳನೆ ಕೂಗಿಕೊಂಡಿತು. ಆಗ ಆ ಸಾಹಸಿಯು ಹಿಂಗಣ್ಣ ಎಸೆದು ಅದರ ಬೆನ್ನಿನ ಮೇಲೆ ಕೂತು ಕೊಂಡನು. ಅದು ರೋಷದಿಂದ ಓಡುವುದಕ್ಕೂ ನೆಗೆಯುವುದಕ್ಕೂ ಮೊದಲುಮಾಡಿತು, ಇವನು ಹೆದರದೆ ಒಂದು ಕೈಲಿ ಅದರ ಕೊಂಬನ್ನು ಹಿಡಿದು ಇನ್ನೊಂದು ಕೈಯಿಂದ ಕೋಲಿನ ಕೊನೇ ಮೊಳೆಯನ್ನು ಅದರ ಆಯಕ್ಕೆ ಚುಚ್ಚು ತಾ ಬಂದನು, ಕಡೆಗೆ ಆ ಮಹಾ ವೃಷಭವು ಆಲಿ ಅಬ್ಬರಿಸಿ ಶಕ್ತಿ ಕುಂದಿ ಕೆಳಕ್ಕೆ ಬಿದ್ದು ಬಿಟ್ಟಿ ತು, ಈ ಸಾಹಸಿಯು ಅದರ ಮೇಲಿನಿಂದ ಇಳಿದುಬ೦ದು ದೊರೆಗೆ ನಮಸ್ಕಾರ ಮಾಡಿದನು. ಇವನ ಸಾಮರ್ಥಕ್ಕೆ ಆಶ್ಚರ್ಯ ಪಟ್ಟು ಸಭೆಯವರೆಲ್ಲಾ ಮರದ ಮನುಷ್ಯರಂತೆ ತೋರಿದರು. ಇವನ ಸೆರೆ ಬಿಡುಗಡೆಯಾಯಿತು. ಹಬ್ಬ ಸಿಯವನು ಈ ಪ್ರಕಾರ ಹೇಳಿದ ಮಾತನ್ನು ಕೇಳಿ ಮದ ನನೂ ಅತ್ಯಂತವಾಗಿ ಬೆರಗಾದನು. ಆಗ ರಾಮಜೋಯಿಸನು-ಅರ ಮನೆಗೆ ಹೊರಡೋಣ ಏಳೆಂದು ಹೇಳಲು, ಮದನನು-ಗುರುಗಳೆ, ನಾನು ಇಲ್ಲಿ ಕೆಲವು ದಿವಸ ಇದ್ದು ಬರುತೇನೆ. ನನ್ನ ಅವಿವೇಕವನ್ನೂ ಕೃತಘ್ನತೆಯನ್ನೂ ಯಾವಯಾವ ವಿಧದಲ್ಲಿ ಹೋಗಲಾಡಿಸಿಕೊಳ್ಳೋಣ ವೆಂದಾಗ್ಗೂ ಆಗದೆ ಇದೆ ; ಅದರ ಪಾಪವನ್ನು ಇವರ ಸತ್ಸಹವಾಸದಲ್ಲಿ ಕಳೆಯಬೇಕೆಂದಿದ್ದೇನೆ. ಈ ಅರ್ಥವನ್ನು ಸುಮತಿಯಲ್ಲಿ ಹೇಳಿಕೊಂಡೂ ಇದೇನೆ, ಎಂದನು. ಆಗ ಸುಮತಿಯು ರಾಜ ಪುತ್ರನನ್ನು ತಬ್ಬಿ ಕೊಂಡು -ಮದನ, ಕಳೆದುಹೋದ ಸಂಗತಿಯನ್ನೆ ಲ್ಲಾ ಬಿಟ್ಟು ಬಿಡು, ನಾವಿ ಬೃ ರೂ ಪೂರ್ವದಂತೆಯೇ ಸಂಗಾತಿಗಳೆಂದು ತಿಳಿ ಎಂದನು. ಸುಮ ತಿಯ ಮನೆಯವರೆಲ್ಲರೂ ರಾಜಕುಮಾರನ ಸದ್ಗುಣಗಳನ್ನು ಕಂಡು ಬೆಕ್ಕಸಬೆರಗಾಗಿ ಇವನನ್ನು ಕೊಂಡಾಡುತಿದ್ದರು. ರಾಮಜೋಯಿಸನು ದೊರೆಗೆ ತಾನು ಸಮಾಧಾನ ಹೇಳಿ ಮದನನು ಕೆಲವು ದಿವಸ ಇಲ್ಲಿ