ಪುಟ:ಸಮತಿ ಮದನಕುಮಾರರ ಚರಿತ್ರ.djvu/೩೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫] ಸುಮತಿ ಮದನಕುಮಾರರ ಚರಿತ್ರೆ ೨ct ಇರುವುದಕ್ಕೆ ಆತನನ್ನು ಒಪ್ಪಿಸುತ್ತೇನೆಂದು ಹೇಳಿ ಅರಮನೆಗೆ ಹೊರಟು ಹೋದನು. ಮದನನು ಆ ಬ್ರಾಹ್ಮಣರ ಮನೆಯಲ್ಲಿರುತಾ ಸುಮತಿಯ ಸಂಗಡ ಹೊಲ ಗದ್ದೆ ತೋಟಗಳಲ್ಲಿ ಓಡಿಯಾಡುತ್ತಾ, ಮನೆಗೆ ಬಂದು ಹೊಟ್ಟೆ ತುಂಬಾ ಊಟಮಾಡುತ್ತಾ, ಸಾಯಂಕಾಲವಾದಮೇಲೆ ಜಾಗ್ರತೆಯಾ ಗಿಯೇ ಮಲಗಿಕೊಂಡು ಚೆನ್ನಾಗಿ ಕಣ್ಣು ತುಂಬಾ ನಿದ್ರೆ ಮಾಡುತಾ ಬಂದನು. ಮೊದಲು ದಿನ ಸುಮತಿಯು ಬೆಳಗಿನ ಜಾವದಲ್ಲಿಯೇ ಇವನನ್ನು ಎಬ್ಬಿಸಲು ಈ ಅರಸುಮಗನಿಗೆ ಪಾಲುಮಾರಿಕೆ ಹೆಚ್ಚಾ ಗಿತ್ತು, ಏಳದೇ ಹೋದರೆ ತಮ್ಮ ತಂದೆಯೂ, ರಾಮಜೋಯಿಸರೂ, ಸುಮತಿಯೂ, ಅವರ ಮನೇ ಜನಗಳೂ ತನ್ನ ನ್ನು ಶುದ್ದ ಜಡನೆಂದು ತಿಳಿದುಕೊಂಡಾರೆಂಬ ಭೀತಿಯು ಸುಮತಿಯು ಕೂಗಿದ ಕೂಡಲೆ ಎಚ್ಚೆತ್ತು ಮೇಲಕ್ಕೆ ಏಳುವಂತೆ ಮಾಡಿತು. ದೇವರ ನಾಮಸ್ಮರಣೆಯನ್ನು ಮಾಡುತಾ ಮದನನು ಝಗ್ಗನೆ ಮೇಲಕ್ಕೆ ಎದ್ದನು. ಮಾರನೇ ದಿವಸ ಈ ಪಾಲುಮಾರಿಕೆಯೇ ಇರಲಿಲ್ಲ. ಈ ರೀತಿಯಲ್ಲಿ ಮದನನ ಚಟುವಟಿಕೆ ಹೆಚ್ಚಿತು. ಮೊದಲಿದ್ದ ಸಿಡುಕಲು ಹೋಯಿತು, ತೋಟದಲ್ಲಿಯಾಗಲಿ ಮನೆಯಲ್ಲಿಯಾಗಲಿ ಸುಮತಿ ಮಾಡುತಿದ್ದ ಕೆಲಸಕ್ಕೆಲ್ಲಾ ತಾನು ಹೊಕ್ಕು ಅವನ ಸರಿಗೂ ಕೆಲಸ ಮಾಡುತಾ ಬಂದನು. ಹೀಗೆ ಚಿಕ್ಕ ಹಳ್ಳಿಯಲ್ಲಿ ವಾಸವಾಗಿರುವಾಗ ಅನೇಕ ಬಡಜನರು ಮಾಡುವ ಕೆಲಸಗಳನ್ನು ನೋಡಿ, ಲೋಕದಲ್ಲಿ ಬಡವರೇ ಕೆಲಸ ಮಾಡತಕ್ಕವ ರೆಂತಲೂ ಅವರು ಇಲ್ಲದಿದ್ದರೆ ಭಾಗ್ಯವಂತರು ಒಂದು ನಿಮಿಷವೂ ಜೀವಿ ಸಲಾರರೆಂತಲೂ ರಾಜಪುತ್ರನಿಗೆ ಚೆನ್ನಾಗಿ ತೋರಿತು. ಈ ಮಧ್ಯ ಕಾಲದಲ್ಲಿ ರಾಮಜೋಯಿಸನು ಆಗಾಗ್ಗೆ ಬಂದು ದೊರೆಮಗನನ್ನು ವಿಚಾರಿಸಿಕೊಂಡು ಹೋಗುತ್ತಲೇ ಇದ್ದನು. ಆಗ ಒಂದು ದಿನ ಜೋಯಿ ಸನು ರಾಜಪುತ್ರನ ಒಳ್ಳೆ ಗುಣಗಳನ್ನು ಆಗಾಗ್ಗೆ ಕೊಂಡಾಡುತಾ ಒಂದು ಸಾರಿ ಅವನನ್ನು ಕುರಿತು ಮದನ, ಕೇಳು.” ಲೋಕದಲ್ಲಿ ದೊಡ್ಡವರು ಎಂದು ಹೆಸರನ್ನು ಪಡೆದವರೆಲ್ಲಾ ಅರೆಗಳಿಗೆಯೂ ನಿರುದ್ಯೋಗಿಗಳಾಗಿದ್ದವರಲ್ಲ. ಯಾವ