ಪುಟ:ಸಮತಿ ಮದನಕುಮಾರರ ಚರಿತ್ರ.djvu/೩೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬] ಸುಮತಿ ಮದನಕುಮಾರರ ಚರಿತ್ರೆ ೩೦೧ ಇಲ್ಲ. ಈ ಹೆಚ್ಚು ಬ್ಬುಗಳನ್ನು ನಾವು ಅರಿಯಲೇ ಅರಿಯೆವು, ಯಾರಾ ದರೂ ಹೊಸಬರು ನಮ್ಮ ಗುಡಿಸಿಲಿಗೆ ಬಂದರೆ ಅವರನ್ನು ಬಹಳವಾಗಿ ಉಪಚರಿಸುತ್ತೇವೆ. ನಿಮ್ಮ ಸೀಮೆಯಲ್ಲಿ ಐಶ್ವರ್ಯವಂತರೆಂತಲೂ ಬಡವರೆಂತಲೂ ಭೇದವನ್ನು ಮಾಡಿಕೊಂಡಿದೀರಿ, ನಿಮ್ಮ ಐಶ್ವರ್ಯ ವಂತರು ಯಾವ ಬದುಕನ್ನೂ ಮಾಡದೆ ಕಾಲವನ್ನು ಕಳೆಯುತ್ತಾ, ತಾವು ದೊಡ್ಡವರೆಂದು ಮೆಡಮೆಟ್ಟೆ ಹತ್ತು ತಾ, ಬಡವರನ್ನು ಬಹು ತಿರಸ್ಕಾರ ವಾಗಿ ಕಾಣುತಾ ಇದಾರೆ, ನಮ್ಮ ದೇಶದಲ್ಲಿ ಮನುಷ್ಯರೆಲ್ಲಾ ಒಂದೇ ಸಮ, ಹೆಚ್ಚು ಕಡಮೆಯೇ ಇಲ್ಲ. ದೇವರು ಎಲ್ಲ ಜಂತುಗಳನ್ನು ನಿರ್ಮಿ ಸಿದ ಹಾಗೆಯೇ ಮನುಷ್ಯರನ್ನು ನಿರ್ಮಿಸಿದನಲ್ಲವೆ ? ಐಶ್ವರ್ಯದ ಕಪಿ ಬಡ ಕಸಿ, ಐಶ್ವರ್ಯದ ನಾಯಿ ಬಡನಾಯಿ, ಐಶ್ವರ್ಯದ ಕಾಗೆ ಬಡ ಕಾಗೆ-ಹೀಗೆ ಭೇದಗಳು ಉಂಟೆ? ಇಲ್ಲದ ಪಕ್ಷದಲ್ಲಿ ಮನುಷ್ಯ ವರ್ಗಕ್ಕೆ ಮಾತ್ರ ಈ ವ್ಯತ್ಯಾಸ ಹೇಗೆ ಬಂತು ? ನಿಜವಾದ ಯೋಗ್ಯತೆಯೂ ಸದ್ಗುಣವೂ ಇರತಕ್ಕವರೇ ದೊಡ್ಡವರು; ಇಲ್ಲದವರು ಬಡವರು. ಹೀಗಿರು ವಲ್ಲಿ ನಿಮ್ಮ ದೇಶದವರ ಚರವು ನನ್ನ ಕಣ್ಣಿಗೆ ವಿಚಿತ್ರವಾಗಿ ಕಾಣು ವುದು. ಮದನ-- ನೀನು ಹೇಳುವುದು ನಿಜವಾದ ಮಾತು, ನಿಮ್ಮ ಸೀಮೆಯ ಕಾಡುಮೃಗಗಳ ವಿಷಯವೇನು ? ಹಬ್ಬ ಸಿ ಅಲ್ಲಿನ ಮೃಗಗಳಲ್ಲಿ ಸಿ೦ಹವೇ ಬಹು ಉಗ್ರವಾದದ್ದು. ಒಂದೊಂದು ಕಾಲದಲ್ಲಿ ನಮ್ಮ ಸೀಮೆಯ ಪ್ರಾಯದ ಆಳುಗಳೆಲ್ಲಾ ಒಟ್ಟಿಗೆ ಸೇರಿ ಕೈಯಲ್ಲಿ ಭರ್ಜಿಯನ್ನು ಈಟಿಯನ್ನು ಹಿಡಿದು ಸಿಂಹ ಇರುವ ಸ್ಥಳವನ್ನು ಅರಸಿಕೊಂಡು ಹೋಗುವರು. ಅದು ಸಿಕ್ಕಿದ ಕೂಡಲೆ ಅದರ ಸುತ್ತಲೂ ಸುತ್ತಿಕೊಂಡು ಅದನ್ನು ಅಬ್ಬರಿಸುತಾ ಅಟ್ಟು ತಾ ಭರ್ಜಿಯಿಂದ ಹಿಂದುಗಡೆಯಲ್ಲಿ ತಿವಿಯುತ್ತಾ ಹೋಗುವರು. ಮೃಗರಾಜನು ತನಗೆ ಈ ಶತ್ರುಗಳು ಯಾವ ಲಕ್ಷ್ಯ ವೆಂದು ಉಪೇಕ್ಷೆ ಯಿಂದ ಮೆಲ್ಲಗೆ ನಡೆದುಕೊಂಡು ಹೋಗುವುದು, ಬಲವಾದ ಏಟನ್ನು ಅದಕ್ಕೆ ಯಾರು ಹೊಡೆಯುತ್ತಾರೆಯೋ ಅಂಥವನು ಅದರ ಕೈಗೆ ಸಿಕ್ಕಿ ಪ್ರಾಣವನ್ನು ಒಪ್ಪಿಸದೆ ಇರುವುದು ಅಪೂರ್ವ, ಆದಾಗ್ಯೂ ಅದರ 20