ಪುಟ:ಸಮತಿ ಮದನಕುಮಾರರ ಚರಿತ್ರ.djvu/೩೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬] ಸುಮತಿ ಮದನಕುಮಾರರ ಚರಿತ್ರೆ ೩೦೩ ಬೆದರಿಸಿ ಓಡಿಸಿ ಪೈರನ್ನು ಕಾಯಲು ಹತ್ತಿಪ್ಪತ್ತು ಜನ ಪಡ್ಡೆ ಯಾದ ಹುಡುಗರೆಲ್ಲಾ ಸೇರಿ ಹೊರಟೆವು, ಒಂದು ದೊಡ್ಡ ನೀರ ಕುದುರೆಯು ಗದ್ದೆಗಳನ್ನು ತುಳಿದು ಪೈರನ್ನು ನಾಶಮಾಡುತಿತ್ತು, ಹಗಲೆಲ್ಲಾ ನೀರಿನಲ್ಲಿ ಇದ್ದು ರಾತ್ರೆ ಹಾವಳಿಗಾಗಿ ಈಚೆಗೆ ಬರುವುದು, ಅವರ ಸಂಗಡ ೮-೧೦ ರಾತ್ರೆ ಕಾದೆ. ಅದರ ಹಾವಳಿಯನ್ನು ತಪ್ಪಿಸುವುದಕ್ಕೆ ಆಗಲಿಲ್ಲ. ನಾವೆಲ್ಲರೂ ಒಂದು ಉಪಾಯ ಮಾಡಿದೆವು, ಅದು ನೀರಿನ ತಡಿ ಬಿಟ್ಟು ಪೈರಿನೊಳಕ್ಕೆ ಚೆನ್ನಾಗಿ ನುಗ್ಗಿ ಬರಲೆಂದು ನಾವೆ ಲ್ಲರೂ ಅವಿತುಕೊಂಡಿದ್ದ ವು, ಅದು ಗದ್ದೆ ಯೊಳಕ್ಕೆ ಬಹು ದೂರ ಬಂತು. ನಾವೆಲ್ಲರೂ ಎದ್ದು ಒಟ್ಟಿಗೆ ಕೂಗುವುದಕ್ಕೆ ಮೊದಲು ಮಾಡಿದೆವು. ಇದಕ್ಕೆ ಆ ಜಂತುವು ಹೆದರದೆ, ನಮ್ಮ ಗುಂಪಿನ ಮೇಲೆ ನುಗ್ಗಿತು. ನಾವು ಯಾತರಿಂದ ಹೊಡೆದರೂ, ಅದಕ್ಕೆ ಸ್ವಲ್ಪವೂ ಪೆಟ್ಟಾಗಲಿಲ್ಲ. ಅದರ ಚರ್ಮ ಅಷ್ಟು ಗಟ್ಟಿ ಯಾದ್ದು, ನಮ್ಮಲ್ಲಿ ಒಬ್ಬ ಧೈರ್ಯಶಾಲಿಯು ಅದರ ಸಮೀಪದಲ್ಲಿ ನಿಂತು ಅಪಾಯ ಸ್ಥಳಕ್ಕೆ ಹೊಡೆದು ನೋಡೋಣ ವೆಂದು ಹತ್ತಿರಕ್ಕೆ ಹೋದನು. ಆ ದುಷ್ಟ ಮೃಗವು ಬಾಯಲ್ಲಿ ಇವನ ದೇಹವನ್ನು ಎಳೆದುಕೊಂಡು ಕಾಲನ್ನು ತೊಡೆಯಿಂದ ಅಗಿದು ಶರೀರ ವನ್ನು ನುಂಗುವುದಕ್ಕಾಗಿ ಮೇಲಕ್ಕೆ ಎತ್ತಿತು. ಆಗ ನಾನು ರೋಷ ದಿಂದ ನನ್ನ ಅಂಬಿನ ಹೆದೆಗೆ ಒಳ್ಳೆ ಹರಿತವಾದ ಒಂದು ಬಾಣವನ್ನು ಸೇರಿಸಿ, ನಿಗನಿಗನೆ ಬೆಂಕಿಯ ಹಾಗೆ ಉರಿಯುತಿದ್ದ ಅದರ ಕಣ್ಣಿಗೆ ಸರಿ ಯಾಗಿ ಗುರಿಹಿಡಿದು ಚೆನ್ನಾಗಿ ತುಯಿದು ಬಾಣವನ್ನು ಹೊಡೆದೆನು. ಆ ಕ್ಷಣದಲ್ಲಿಯೇ ಆ ಜಲಚರನು ತಾನು ಹಿಡಿದಿದ್ದ ಮನುಷ್ಯನನ್ನು ಬಿಟ್ಟು ನೆಲದ ಮೇಲೆ ಬಿದ್ದು ಮಡಿಯಿತು, ನಮ್ಮ ಜೊತೆಗಾರರೆಲ್ಲರೂ ನನ್ನ ನ್ನು ಬಾಚಿ ತಬ್ಬಿ ಕೊಂಡರು. ಮೆರವಣಿಗೆ ಮಾಡಿಕೊಂಡು ಊರಿಗೆ ಕರೆದುಕೊಂಡು ಬಂದರು, ಆಗ ವೃದ್ಧನಾದ ನಮ್ಮ ತಂದೆಯು ಬಂದು ನನ್ನ ಕೈ ಹಿಡಿದು, “ ಭಲ ! ನನ್ನ ಹುಡುಗ ಇಷ್ಟರಮಟ್ಟಿನ ಬಹುಮಾನ ವನ್ನು ಪಡೆಯುವ ತನಕ ದೇವರು ನನ್ನನ್ನು ಕಾಪಾಡಿದನಲ್ಲಾ !” ಎಂದು ಹೇಳಿ, “ ಇನ್ನು ಮೇಲೆ ನೀನು ಅಂಬು ಬಿಲ್ಲು ಹಿಡಿಯುವುದಕ್ಕೆ ಯೋಗ್ಯ ” ಎಂದು ನನಗೆ ಹೇಳಿ ಬೆನ್ನನ್ನು ತಟ್ಟಿದನು, ನಮ್ಮ ಜನರ