ಪುಟ:ಸಮತಿ ಮದನಕುಮಾರರ ಚರಿತ್ರ.djvu/೩೧೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೩೦೪ ಸುಮತಿ ಮದನ ಕುಮಾರರ ಚರಿತ್ರೆ [ಅಧ್ಯಾಯ ಲೆಲ್ಲಾ ವಿಶೇಷ ಬಹುಮಾನವಾಯಿತು. ಹೀಗೆ ಹಬ್ಬ ಸಿಯವನು ತನ್ನ ಕಥೆಯನ್ನು ಹೇಳಿ ಮುಗಿಸಿದನು. ೨೭ನೆ ಅಧ್ಯಾಯ ಮದನನು ಇದೆಲ್ಲವನ್ನೂ ಕೇಳಿದನು. ಅವನ ಬುದ್ದಿಯು ಈಚೆಗೆ ವಿಶೇಷವಾಗಿ ಪ್ರಚುರವಾಯಿತು, ಅವನ ಹೃದಯವು ದೊಡ್ಡ ದಾಯಿತು. ಈ ಅರಸುಮಗನು ತನ್ನ ಮನಸ್ಸಿನಲ್ಲಿ ಈ ಲೋಕದಲ್ಲಿ ಒಬ್ಬೊಬ್ಬ ಒಂದೊಂದು ಕೆಲಸದಲ್ಲಿ ಸಮರ್ಥನಾಗಿರುತ್ತಾನೆ, ಯೋಗ್ಯತೆ ಯನ್ನು ತಿಳಿಯದೆ ಇವರು ಚಹೈ ಇವರು ಕಡಮೆ, ಎಂದು ನಾವು ಭೇದವನ್ನು ಕಲ್ಪಿಸಿಕೊಂಡು ಇತರರನ್ನು ತಿರಸ್ಕರಿಸುವುದು ಶುದ್ಧವಾಗಿ ಕೆಟ್ಟ ದು ಎಂದು ತಿಳಿದುಕೊಂಡನು. ಮಗನು ಈಚೆಗೆ ಬಹಳ ಬುದಿ ಶಾಲಿಯಾಗಿದ್ದಾನೆಂದು ಕೇಳಿ ದೊರೆಯು ಸಂತೋಷ ಪಟ್ಟು ಅವನನ್ನು ಬನವಾಸಿಗೆ ಕರೆದುಕೊಂಡು ಹೋಗಬೇಕೆಂದು ತಾನೇ ಅಶ್ವಾರೂಢನಾಗಿ ಸೂರ್ಯಭಟ್ಟನ ಮನೆಯ ಸಮೀಪಕ್ಕೆ ಬಂದನು. ಆಗ ಸೂರ್ಯಭಟ್ಟ ನು ದೂರದಿಂದಲೇ ಅರಸ ನನ್ನು ನೋಡಿ ಎದುರಿಗೆ ಹೋಗಿ ಫಲ ಮಂತ್ರಾಕ್ಷತೆಯನ್ನು ಕೊಟ್ಟು ಹರಸಿ ಕುಶಲಪ್ರಶ್ನೆ ಯನ್ನು ಮಾಡಿ ತನ್ನ ಮನೆಗೆ ದಯಮಾಡಿಸಬೇ ಕೆಂದು ವಿನಯವಾಗಿ ಕೇಳಿಕೊಂಡನು. ದೊರೆ ಅದೇ ಪ್ರಕಾರ ಹೋಗಿ. ಅಲ್ಲಿ ಕೂತುಕೊಂಡು, ಆ ಮನೇ ಜನರ ಕ್ಷೇಮಲಾಭವನ್ನೂ ಮುಖ್ಯ ವಾಗಿ ಸುಮತಿಯ ಕುಶಲವನ್ನೂ ವಿಚಾರಿಸಿ ತರುವಾಯ ತನ್ನ ಮಗನಿಗೆ. ವಿವೇಕ ಬಂದುದಕ್ಕಾಗಿ ಅವನನ್ನು ಸ್ವಲ್ಪ ಸ್ತೋತ್ರ ಮಾಡಿದನು. ಮತ್ತು ಸೂರ್ಯಭಟ್ಟ ನನ್ನು ಕುರಿತು, ದೊರೆ-ಸೂರ್ಯಭಟ್ಟರೆ, ತಾವು ಮಾಡಿದ ಉಪಕಾರವನ್ನು ನಾನು ಎಂದೆಂದಿಗೂ ಮರೆಯ ಕೂಡದು, ನಮ್ಮ ಮಗುವನ್ನು ತಮ್ಮ ಮನೆಯಲ್ಲಿ ಇರಿಸಿಕೊಂಡು ಪೋಷಿಸಿದಿರಿ, ಅನ್ವರ್ಥವಾದ ಹೆಸರನ್ನು ತಮ್ಮ ಮಗ ಸುಮತಿಯ ಸಹವಾಸದಿಂದ ನಮ್ಮ ಹುಡುಗನು