ಪುಟ:ಸಮತಿ ಮದನಕುಮಾರರ ಚರಿತ್ರ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧! ಸುಮತಿ ಮದನಕುಮಾರರ ಚರಿತ್ರೆ ವರ ಮಕ್ಕಳಿಗೆ ಬರುವುದಿಲ್ಲವೆಂತಲೂ ಪಟ್ಟು ಹಿಡಿದು ಮಾತನಾಡಿದಳು. ಅದಕ್ಕೆ ಅನಂಗರಾಜನು ಒಪ್ಪದೆ-ಎಂಥಾ ಪದವಿಯಲ್ಲಿರತಕ್ಕವ ರಿಗೇ ಆಗಲಿ, ಸುಮತಿಯಹಾಗೆ ಒಳ್ಳೆ ಸ್ವಭಾವವೂ ಬುದ್ದಿ ಕೌಶಲ್ಯವೂ ಇರತಕ್ಕೆ ಮಕ್ಕಳನ್ನು ಪಡೆಯುವುದು ಪೂರ್ವಜನ್ಮದ ಪುಣ್ಯವೇ ಹೊರತು ಮತ್ತೆ ಬೇರೆ ಇಲ್ಲ. ಈ ಮೇಲುಮೇಲಿನ ವಾಗ್ವಿನಯವನ್ನೂ ಮತ್ಯಾದೆಯುಕ್ತವಾದ ಮೇಲ್ಯಾತನ್ನೂ ಬೇಗ ಕಲಿಯಬಹುದು ; ಇಂಥಾ ತಳಕು ಸಳಕುಗಳು ತಮ್ಮಲ್ಲಿರುವ ಉತ್ತಮೋತ್ತಮವಾದ ಗುಣವೆಂದೂ, ಅದೇ ದೊಡ್ಡ ಗುಣವೆಂದೂ ದೊಡ್ಡವರು ಕೊಚ್ಚಿ ಕೊಳ್ಳ ಬಹುದು. ಇಂಥಾ ನಡತೆ ಬಹು ಸುಲಭವಾಗಿ ಬರುವುದು ; ಮತ್ತು ನಾವು ನಮ್ಮ ಮೈಮೇಲಿನಿಂದ ತೆಗೆದು ಹಾಕಿದ ಜೀರ್ಣವಸ್ತ್ರಗಳು ಹೇಗೆ ನಮ್ಮ ಕಂಚುಕಿಗಳ ಮೈಮೇಲಕ್ಕೂ ದಾದಿಯರ ಮೈಮೇಲಕ್ಕೂ ಸುಲಭವಾಗಿ ಏರುವವೋ, ಹಾಗೆಯೇ ಈ ಅಲ್ಪ ಗುಣಗಳೂ ನಮ್ಮಿಂದ ಅವರಿಗೆ ಹತ್ತುವವು. ಆದರೆ ಈ ಭತ್ಯರು ಕೊಳಕುಬಟ್ಟೆಯನ್ನು ಹಾಕಿ ಕೊಂಡು ತಿವಿದು ಗಟ್ಟಿ ಸಿದ ಹಾಗೆ ಆರೋಗ್ಯವಾಗಿರುವುದೇ ಅವರಿಗೂ ಅವರ ಸ್ವಾಮಿಗೂ ಇರುವ ಭೇದ, ಮತ್ತೆ ಯಾವ ಭೇದವೂ ಇಲ್ಲ. ಎಷ್ಟೇ ಮರ್ಯಾದಸ್ಥಿತಿ ಇರಲಿ, ಇನ್ನು ಎಂಥಾ ಉನ್ನತವಾದ ಗುಣವಿರಲಿ, ಇದೆಲ್ಲಕ್ಕೂ ಮನಸ್ಸೇ ಮುಖ್ಯವಾದ ಸ್ಥಾನ, ಗಂಭೀರವಾದ ಅಭಿಮತ, ಉತ್ತಮವಾದ ಧೈರ್ಯ, ಅಶೇಷರಲ್ಲಿಯೂ ಏಕರೀತಿಯಾಗಿರುವ ನಿಜ ವಾದ ದಯಾರಸ, ಈ ಗುಣಗಳು ನಿಜವಾದ ದೊಡ್ಡತನಕ್ಕೆ ಅ೦ಗಗಳು. ಈ ಗುಣಗಳು ಲೋಪವಾದರೆ ಅವುಗಳಿಗೆ ಬದಲಾಗಿ ಬೇರೇ ಕೃತಕವಾದ ಧ್ವನಿಯಲ್ಲಿ ಮಾತಾಡುವುದು, ಮುಖದಲ್ಲಿಯೂ ಕೈಯಲ್ಲಿಯೂ ವಿಶೇಷ ವಾದ ಅಭಿನಯವನ್ನು ತೋರಿಸುವುದು, ಮನಸ್ಸು ಬಂದಂತೆ ಡಂಭವಾದ ಉಡುಪನ್ನು ಹಾಕಿಕೊಳ್ಳುವುದು, ಇಂಥಾ ಹೊರಗಿನ ನಡತೆಗಳು ಇರ ಬಲ್ಲವೆಂದು ತಿಳಿಯುವರು ಮಂದಮತಿಗಳಾಗಿರಬೇಕು, ಇಂಥಾ ಚಯ್ಯ ಗಳಿಗೂ ನಿಜವಾದ ದೊಡ್ಡ ತನಕ್ಕೂ ಬಹುದೂರ. ಅಷ್ಟೇ ಅಲ್ಲದೆ ಇಂಥಾ ಹೊರಗಿನ ಶೃಂಗಾರಗಳು ಕೆಲಸಿಗರಲ್ಲಿಯೂ, ಚಿಪ್ಪಿಗರಲ್ಲಿ ಯೂ, ಆಟ ಗಾರರಲ್ಲಿಯೂ, ನಟುವರಲ್ಲಿಯೂ, ಸೂಳೆಯರಲ್ಲಿ ಯೂ, ಮತ್ತೂ ಇತರ