ಪುಟ:ಸಮತಿ ಮದನಕುಮಾರರ ಚರಿತ್ರ.djvu/೩೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦೬ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ ಯುವುದು ಹೇಗೆ ? ದೊರೆಯೆ, ಬೇಡ, ನಮ್ಮ ಸಂಸಾರದಲ್ಲಿ ವೈಮನಸ್ಯ ವನ್ನು ತಂದು ಹಾಕಬೇಡಿ. ವಿವಾಹಾದಿಗಳು ಆಗಬೇಕಾದ್ದು ನಿಜ. ಆದರೆ ಏನು ? ನಮ್ಮ ಕಷ್ಟಾರ್ಜನೆಯಲ್ಲಿ ಇಂಥಾ ಸದ್ವಯವನ್ನು ಮಾಡಬೇಕು, ಡಂಭದಿಂದ ನಮಗೆ ಪ್ರಯೋಜನವಿಲ್ಲ. ದೊರೆ-ದ್ರವ್ಯರೂಪವಾಗಿ ತಾವು ಸ್ವೀಕರಿಸದಿದ್ದರೆ ಚಿಂತೆಯಿಲ್ಲ. ನಮ್ಮ ಅರಮನೆಯಿಂದ ಒಂದು ಉತ್ತಮವಾದ ಭೂಮಿಯನ್ನು ನಿಮಗೆ ಮಾನ್ಯವಾಗಿ ನಡೆಸಿಕೊಡುತೇನೆ. ಅದನ್ನಾ ದರೂ ಅಂಗೀಕರಿಸಬೇಕು. - ಸೂಯ್ಯ ಭಟ್ಟ ರಾಜನೆ, ನನ್ನ ಕೈಲಾದ ಮಟ್ಟಿ ಗೂ ಅರಿಕೆ ಮಾಡಿ ಕೊಂಡೆ. ನಾನು ಹೇಳುವುದರ ಧರ್ಮ ಸೂಕ್ಷ್ಮ ತಮಗೆ ಗೋಚರ ವಾಗಲಿಲ್ಲ. ಈಗ ವಿನಯವಾಗಿ ಅರಿಕೆ ಮಾಡಿಕೊಳ್ಳುತ್ತೇನೆ. ನಾವು ಸಪೌರುಷದಿಂದಲೂ ರಾಜಸ್ವತ್ತನ್ನು ಅಪೇಕ್ಷಿಸಿದವರಲ್ಲ. ಅದರಿಂದ ಜೀವನಮಾಡಿದವರಲ್ಲ. ಈಗಲೂ ಅದು ನಮಗೆ ಬೇಡ. ಹೀಗೆ ಸೂರ್ಯಭಟ್ಟನು ಮೊದಲೆಲ್ಲಾ ಪ್ರಕಾರಾಂತರವಾಗಿ ಬೇಡ ವೆಂದು ದೊರೆಯ ಉಪಕಾರವನ್ನು ತಿರಸ್ಕರಿಸಿ, ಕೊನೆಗೆ ಅರಸನ ಬಲ ವಂತ ಹೆಚ್ಚಾಗಲು ತನ್ನ ಮನಸ್ಸಿನಲ್ಲಿದ್ದ ಮಾತನ್ನು ಸ್ಪಷ್ಟ ಪಡಿಸಿದನು. ಅರಸನು ಆತನ ನೀತಿಗೂ ನಿಸ್ಪೃಹತ್ವಕ್ಕೂ ಸಂತೋಷ ಪಟ್ಟು, ಅತ್ಯಂತ ಭಕ್ತಿಯಿಂದ ಆತನಿಗೂ ಆತನ ಹೆಂಡತಿಗೂ ನಮಸ್ಕಾರವನ್ನು ಮಾಡಿ -ಸ್ವಾಮಿ, ನೀವು ಮಹಾಪುರುಷರು ; ಆಶೆಯೆಂಬ ಮಹಾಪಾಶದಲ್ಲಿ ಸಿಕ್ಕಿ ನರಳುವ ಈ ಲೋಕದಲ್ಲಿ ತಮ್ಮಂಥವರನ್ನು ಇದುವರೆಗೂ ನಾನು ನೋಡಿರಲಿಲ್ಲ. ಇಂದಿಗೆ ನನ್ನ ಜನ್ಮ ಸಾರ್ಥಕವಾಯಿತು, ಎಂದು ಕರ್ಮನಿಷ್ಠನಾದ ಆ ಬ್ರಾಹ್ಮಣನನ್ನು ಮನಃಪೂರ್ತಿಯಾಗಿ ಹೊಗ ಳುತಾ ಅರಮನೆಗೆ ಪ್ರಯಾಣ ಸನ್ನದ್ಧನಾದನು. ಆಗ ಮದನನು ಎದ್ದು ಆ ದಂಪತಿಗಳಿಗೆ ನಮಸ್ಕಾರವನ್ನು ಮಾಡಿ, ಅವರ ಆಶೀರ್ವಚನವನ್ನು ಪಡೆದು, ಸುಮತಿಯ ಸವಿಾಪಕ್ಕೆ ಬಂದು ಅವನನ್ನು ತಬ್ಬಿಕೊಂಡು-ಸುಮತಿ, ನಿನ್ನಿ೦ದ ನನಗಾದ ಪ್ರಯೋಜನಕ್ಕೆ ನನ್ನ ದೇಹವನ್ನು ಕುಯಿದು ಒಪ್ಪಿಸಿದರೂ ಸ್ವಲ್ಪವೇ ಇದೆ. ಅಪ್ಪಾಜಿ ಕೊಡುವುದಕ್ಕೆ ಯತ್ನಿಸಿದ ಅಲ್ಪವನ್ನು ಸೂರ ಭಟ್ಟರು