ಪುಟ:ಸಮತಿ ಮದನಕುಮಾರರ ಚರಿತ್ರ.djvu/೩೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦೭ ೨೭] ಸುಮತಿ ಮದನಕುಮಾರರ ತಿರಸ್ಕರಿಸಿದರು, ನಮ್ಮ ಕೃತಜ್ಞತೆಯನ್ನು ನಾವು ತೋರಿಸುವುದಕ್ಕೆ ಅವರು ಆಸ್ಪದವನ್ನೇ ಕೊಡಲಿಲ್ಲವಲ್ಲಾ ! ಎಂದು ಮನಸ್ಸಿಗೆ ಖೇದ ವಾಗಿದೆ. ಆದರೆ ನಮ್ಮ ಉಪಕಾರಸ್ಮರಣೆಯನ್ನು ನಾವು (ದೊರೆಯ ನಾನೂ) ಸಮಯವರಿತು ತೋರಿಸಲೇ ತೋರಿಸುತ್ತೇವೆ, ನಿನ್ನ ಸಂಗ ವನ್ನು ಬಿಟ್ಟು ನಾನು ವಿಶೇಷ ದಿವಸ ಇರಲಾರೆ. ನಾವಿಬ್ಬರೂ ಒಟ್ಟಿಗೇ ಇರುವುದಕ್ಕೆ ಏರ್ಪಾಡನ್ನು ಮಾಡುತ್ತೇನೆ, ನನ್ನ ನಡತೆಯು ವ್ಯತ್ಯಾಸ ವಾಗಿ ದುರ್ಮಾರ್ಗಕ್ಕೆ ಬೀಳುವ ಹಾಗಾದರೆ, ನಾನು ಇಲ್ಲಿಗೆ ಬಂದು ಸ್ವಲ್ಪ ದಿವಸ ಇದ್ದು ವಿವೇಕವನ್ನು ಕಲಿತುಕೊಂಡು ಹೋಗುತೇನೆ. ಹೀಗೆ ಹೇಳಿ ಕಣ್ಣಿನಲ್ಲಿ ನೀರತಂದುಕೊಳ್ಳು ತಾ ಹಬ್ಬ ಸಿಯವನ ಕಡೆಗೆ ತಿರುಗಿ ಅಯ್ಯಾ, ನೀನು ನನಗೆ ಪರಮಾ ಹೈ, ಯಾವಾಗಲೂ ನನ್ನ ಸವಿಾಪದಲ್ಲಿಯೇ ಇರು. ನಮ್ಮ ಸಂಗಡಲೇ ಬಾ, ಎಂದು ಹೊರಟನು. ಆಗ ಸುಮತಿಯೂ ಸೂರ್ಯಭಟ್ಟ ನೂ ರಾಜ ಪುತ್ರನನ್ನೂ ರಾಜನನ್ನೂ ಸಾ ರ ಕ ಳು ಹಿ ಸು ವು ದ ಕೈ ಹೊ ದ ರು. ದೊರೆ ಯು ಅ ನ ರಿ ಗೆ ಉಪಚಾರೋಕ್ತಿಗಳನ್ನು ಹೇಳಿ, ದೂರವಾಗಿ ಬಂದಿರಿ, ಹಿಂದಕ್ಕೆ ದಯಮಾಡಿಸಿ ಎಂದು ನುಡಿದನು, ಪರಸ್ಪರ ಅಗಲಿ ಹೊರಟು ಹೋಗುವ ಸಮಯವೂ ಬಂತು. ಎಲ್ಲರ ಕಣ್ಣಿನಲ್ಲಿ ಯೂ ನೀರೂ ಬಂತು. ಕೊನೆಯಲ್ಲಿ ದೊರೆಯು ಸುಮತಿಯನ್ನು ಕರೆದು ಅಯ್ಯಾ, ಬುದ್ಧಿಶಾಲಿಯೆ, ಎಷ್ಟು ಬಗೆಯಲ್ಲಿ ಹೇಳಿಕೊಂಡಾಗೂ ನಮ್ಮ ಕೃತ ಜ್ಞತಾ ಸೂಚಕವಾದ ಉಪಚಾರವನ್ನು ಅಲ್ಪ ಸ್ವಲ್ಪವಾಗಿಯಾದರೂ ಸ್ವೀಕರಿಸಲು ನಿಮ್ಮ ಯಜಮಾನರಿಗೆ ಮನಸ್ಸು ಬರದೇ ಹೋಯಿತು. ನಿನ್ನಿಂದ ನಮಗೆ ಆದ ಉಪಕಾರಕ್ಕಾಗಿ ನಮ್ಮ ಪ್ರತ್ಯುಪಕಾರವನ್ನು ಸೂಚಿಸುವುದಕ್ಕೆ ಏನಾದರೂ ಒಂದು ಗುರುತನ್ನು ನೀನಾದರೂ ಹಿಡಿ, ಎಂದನು ಅದಕ್ಕೆ ಸುಮತಿಯು ಬುದ್ದಿ, ಹಾಗೆ ಪ್ರತ್ಯುಪಕಾರ ಮಾಡ ಬೇಕೆಂದು ತಮ್ಮ ಮನಸ್ಸಿನಲ್ಲಿದ್ದರೆ ಈ ಸತ್ಪುರುಷನಾದ ಹಬ್ಬ ಸಿಯ ವನಿಗೆ ಸಹಾಯಮಾಡಬೇಕು, ಅವನನ್ನು ತಾವು ಸಂರಕ್ಷಿಸಿದರೆ ಅದೇ ನಮಗೆ ಪ್ರತ್ಯುಪಕಾರ, ಮತ್ತೆ ಯಾವುದೂ ಅಗತ್ಯವಿಲ್ಲ, ದೊರೆಯೂ ರಾಜಪುತ್ರನೂ ಅವರನ್ನು ಕೊಂಡಾಡುತಾ ಅರಮನೆಗೆ