ಪುಟ:ಸಮತಿ ಮದನಕುಮಾರರ ಚರಿತ್ರ.djvu/೩೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈ ಗ್ರಂಥದ ವಿಷಯವಾಗಿ ೧೮ ನೆಯ ಶತಮಾನದಲ್ಲಿ ಥಾಮಸ್ ಡೇ ಎಂಬಾತನು ಇಂಗ್ಲಿಷಿನಲ್ಲಿ ಬರೆದ - Sandford and Merton 'ಎಂಬ ಕೃತಿಯ ಮಾದರಿಯಲ್ಲಿ ಬರೆದದ್ದು ಈ ಕಾದಂಬರಿ - ಸುಮತಿ ಮದನ ಕುಮಾರರೆ ಚರಿತ್ರೆ, ಡೇ ರೂಸ್‌ ಎಂಬ ಫ್ರೆಂಚ್ ತತ್ತ್ವಜ್ಞಾನಿಯ ಶಿಷ್ಯ, ಶಾಲೆಗಳಲ್ಲಿ ಮಕ್ಕಳಿಗೆ ಕಥೆಗಳ ಮೂಲಕವೂ ಸ್ವಾರಸ್ಯವಾದ ಮಾತುಗಳ ಮೂಲಕವೂ ಸದ್ಗುಣಗ ಇನ್ನೂ ಸೈನ್ಸ್‌ ಮೊದಲಾದ ವಿಷಯಗಳನ್ನೂ ಸುಲಭವಾಗಿಯೂ ಸ್ವಾರಸ್ಯ ವಾಗಿಯೂ ಬೋಧಿಸಬಹುದೆಂಬುದನ್ನು ಸಮರ್ಥಿಸುವುದಕ್ಕಾಗಿಯೇ * Sandford and Merton ' ಎಂಬ ಬೋಧಪ್ರದ ಕಾದಂಬರಿ ಯನ್ನು ರಚಿಸಿದ, ಅದು ಬಹುಕಾಲ ಜನಪ್ರಿಯವಾಗಿತ್ತು, ಪುಟ್ಟಣ್ಣ ನವರು ಆ ಕಥೆಯನ್ನು ಕನ್ನಡದಲ್ಲಿ ಎಷ್ಟು ರಸವತ್ತಾಗಿ ಕಟ್ಟಿದಾರೆ ಎಂಬುದು ಈ ಪುಸ್ತಕವನ್ನು ಓದಿದವರಿಗೆ ಮನವರಿಕೆಯಾಗದಿರದು. ಪುಟ್ಟಣ್ಣನವರು (೧೮೪- ೧೯೩೦) ಶ್ರೀ ಚಾಮರಾಜ ಒಡೆಯರವರ ಕೆ:ಲದಲ್ಲಿ ಕನ್ನಡ ಪುನರುಜ್ಜಿವನಕ್ಕಾಗಿ ಶ್ರಮಿಸಿದ ಉತ್ಸಾಹಿಗಳು. ಬಾಲಕರಿಗಾಗಿ ಅವರು ರಿತರುಗಳನ್ನೂ ಹಿಂದೂ ದೇಶದ ಚರಿತ್ರೆಯನ್ನೂ ಬರೆದರು ; - ನೀತಿ ಚಿಂತಾಮಣಿ ?, ಸುಮತಿ ಮದನಕುಮಾರರ ಚರಿತ್ರೆ' ಮೊಲಾದ ನೀತಿಬೋಧಕ ಕಥೆಗಳನ್ನು ರಚಿಸಿದರು. ಷೇಕ್ಸ್‌ಪಿಯರ್ ಕವಿ ಕೆಲವು ನಾಟಕಗಳನ್ನು ನಾಟಕಕಥಾರೂಪಗಳಲ್ಲಿ ಕನ್ನಡಕ್ಕೆ ತಂದರು. ನಾಳೆಯಗಾರರ ಚರಿತ್ರೆಗಳನ್ನು ಸಂಗ್ರಹಿಸಿದರು. ' ಕುಣಿಗಳು ರಾಮಾಶಾಸ್ತ್ರಿಗಳ ಚ :ಿ ' ಮೊದಲಾದ ಜೀವನ ಚರಿತೆಗಳನ್ನೂ ಮಾಡಿ ದುಷ್ಟ ಮಹಾತಾಯ ', ' ಮುಸುಗ ತೆಗೆಯೇ ಮಾಯಾಂಗನೆ ? ಮೊದಲಾದ ಸ್ವತಂತ್ರ ಕಾದಂಬರಿಗಳನ್ನೂ ರಚಿಸಿದರು, ಕನ್ನಡಕ್ಕೆ ಪುಟ್ಟಣ್ಣನವರು ಮಾಡಿರುವ ಸೇವೆ ನೆನಸಿಕೊಳ್ಳಬೇಕಾದದ್ದು, ಸುಟ್ಟಣ್ಣ ನವರದು ಮನೆ ಮಾತಿನ ಶೈಲಿ, ಅವರ ಭಾಷೆ ಸುಲಭವಾದದು , ಸರಳವಾದದ್ದು ;ಆದರೂ ಸತ್ರ್ಯದಿಂದ ಕೂಡಿದ್ದು, ಕನ್ನಡ ಪುಸ್ತಕಗಳ ಭಾಷೆ ಕೃತಕವಾಗುತ್ತಿರುವ ಈಗಿನ ಕಾಲದಲ್ಲಿ ಪುಟ್ಟಣ್ಣನವರ ಪುಸ್ತಕಗ ಇನ್ನು ನಮ್ಮ ಹುಡುಗ ಹುಡುಗಿಯ ರೂ ದೊಡ್ಡವರೂ ಪದೇ ಪದೇ ಓದು ವುದರಿಂದ ವಿಶೇಷ ಪ್ರಯೋಜನವುಂಟು : ಬರಹಗಾರರ ಭಾಷೆ ಸರಳವಾಗಿ, ಸುಲಭವಾಗಿ, ನಿಜವಾದ ಕನ್ನಡವಾಗಿ, ಅವರ ಕೃತಿಗಳು ಕನ್ನಡದ ಸಾಮಾನ್ಯ ಜನರನ್ನು ಒಲಿಸಿಕೊಳ್ಳುವ ಸಂಭವವ೦ಟು.