ಪುಟ:ಸಮತಿ ಮದನಕುಮಾರರ ಚರಿತ್ರ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

40 ಸುಮತಿ ಮದನಕುಮಾರರ ಚರಿತ್ರೆ ಅಧೀನಕ್ಕೆ ನಮ್ಮ ಮಗುವನ್ನು ತೆಗೆದುಕೊಳ್ಳುವುದಾದರೆ, ಅವರ ಸವಿಾ ಪಕ್ಕೆ ಇವನನ್ನು ಕಳುಹಿಸಬೇಕೆಂಬುದು, ಸುಮತಿಯೂ ನಮ್ಮ ಮದನನ ವಾರಿಗೇಹುಡುಗರು, ಇಬ್ಬರ ಎತ್ತರವೂ ಒಂದೇ, ಇಬ್ಬರ ವಯನ್ನೂ ಒಂದೇ, ಅಕಸ್ಮಾತ್ತಾಗಿ ಉಂಟಾದ ಸುಮತಿಯ ಪರಿಚಯ ದಿಂದ ನಮ್ಮ ಮಗುವಿಗೆ ಕ್ಷೇಮವಾದರೆ ಸಾಕು, ಆದಕಾರಣ ಸುಮ ತಿಯ ತಿಂಡಿ ತೀರ್ಥ ಮೊದಲಾಗಿ ಅವನಿಗೋಸ್ಕರ ತಗಲುವ ವೆಚ್ಚ ನನ್ನೆ ಲ್ಲಾ ನಾನು ನೋಡಿಕೊಳ್ಳುತೇನೆ. ನಮ್ಮ ಮಗುವಿನ ಸಂಗಡಲೇ ಸುಮತಿಯು ಯಾವಾಗಲೂ ಸಹಪಾಠಿಯಾಗಿರುವಂತೆ ಮಾಡಿಸ ಬೇಕೆಂದು ಸೂಯ್ಯ ಭಟ್ಟ ರಿಗೆ ನಾನು ಹೇಳಬೇಕೆಂಬದಾಗಿದೇನೆ : ಹೀಗೆಂದು ಅರಸನು ತನ್ನ ಅಭಿಪ್ರಾಯವನ್ನು ವಿಶದವಾಗಿ ಹೆಂಡತಿಯ ಸಂಗಡ ಹೇಳಿದನು. ೩ನೆ ಅಧ್ಯಾಯ ಈ ರೀತಿಯಲ್ಲಿ ದೊರೆಯು ತನ್ನ ಮನಸ್ಸಿನಲ್ಲಿ ಮಾಡಿಕೊಂಡಿದ್ದ ಖಂಡಿತವಾದ ಸಂಕಲ್ಪವನ್ನು ಕೇಳಿದ ಕೂಡಲೆ, ಅರಸಿಯು ಗಂಡನ ಮನೋಗತವೆಲ್ಲಾ ಬಹಳ ಯುಕ್ತವಾದುದೆಂತಲೂ ಹಾಗೆ ನಡೆಸುವುದು ಅಗತ್ಯವೆಂತಲೂ ತಿಳಿದುಕೊಂಡು ಆತನ ಮಾತಿಗೆ ಪ್ರತಿಯಾಗಿ ಹೇಳದೆ ಸುಮ್ಮನಿದ್ದಳು. ಆದರೆ ಮಗನನ್ನು ಬಿಟ್ಟು ಕಳುಹಿಸುವುದಕ್ಕೆ ಮನಸ್ಸಿಲ್ಲದೇ ಕೊನೆಗೆ ಕಳುಹಿಸಿಕೊಟ್ಟಳು. ಕೂಡಲೆ ಒಂದಾನೊಂದು ಸೋಮವಾರ ಶಿವಪೂಜೇ ಕಾಲಕ್ಕೆ ಸರಿಯಾಗಿ ಅನಂಗರಾಜರ ಅರಮನೆಗೆ ದಯಮಾಡಿಸಬೇಕೆಂದು ಅಪ್ಪಣೆಯಾಗಿರುವುದಾಗಿ ಊಳಿಗದವರು ಹೋಗಿ ವೇದಮೂರ್ತಿ ರಾಮಜೋಯಿಸರನ್ನು ಕರೆದರು. ಅದೇ ಪ್ರಕಾರ ರಾಮಜೋಯಿಸನು ಅರಮನೆಗೆ ಬಂದು ಯೋಗ್ಯತಾನುಸಾರ