ಪುಟ:ಸಮತಿ ಮದನಕುಮಾರರ ಚರಿತ್ರ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

دو ಸುಮತಿ ಮದನ ಕುಮಾರರ ಚರಿತ್ರೆ - [ಆಧ್ಯಾಯ ವಾದ ಮತ್ಯಾದೆಯನ್ನು ಹೊಂದಿ ಸಭೆಯಲ್ಲಿ ಕೂತುಕೊಂಡನು. ಅರ ಸನು ಅದನ್ನು ಕಂಡು ಆತನನ್ನು ತನ್ನ ಸಮಿಾಪಕ್ಕೆ ಕರೆದು ಕುಳ್ಳಿರಿಸಿ. ಕೊಂಡು ಆಮಾತು ಈ ಮಾತು ಆಡುತ್ತಾ, ತನ್ನ ಮಗನ ವಿದ್ಯಾಭ್ಯಾಸ ವಿಷಯವನ್ನು ಮೆಲ್ಲಗೆ ತೆಗೆದನು ; ಮತ್ತು ತನ್ನ ಯೋಗ್ಯತೆ ನಿವಾರಿ ಮತ್ಯಾದೆಯನ್ನು ಮಾಡುವುದೂ ಅಲ್ಲದೆ, ತನ್ನ ಮಗ ಅಕ್ಷರಸ್ಥನಾಗಿ ಅಭಿವೃದ್ಧಿ ಯಾಗುವುದೇ ತನ್ನ ಮುಖ್ಯೋದ್ದೇಶವಾದ ಕಾರಣ, ಪ್ರತ್ಯುಪ ಕಾರಕ್ಕೆ ಮಾರಿದಂಥಾ ಉಪಕೃತಿಯನ್ನು ತಾನು ಜೋಯಿಸನಿಂದ ಹೊಂದಿದವನೆಂದು ಭಾವಿಸುತ್ತೇನೆಂಬದಾಗಿ ಆತನ ಸಂಗಡ ಹೇಳಿದನು. ಈ ಮಾತನ್ನು ಕೇಳಿ ಜೋಯಿಸನು ನಿಧಾನವಾಗಿ ಸ್ವಲ್ಪ ಹೊತ್ತು ಪಾಲೋಚನೆ ಮಾಡಿ, ತರುವಾಯ ದೊರೆಯನ್ನು ಕುರಿತು,-ಸ್ವಾಮಿ, ಒಂದು ಸಂಗತಿಯನ್ನು ಅರಿಕೆ ಮಾಡಬೇಕಾಗಿದೆ, ಕ್ಷಮಿಸಬೇಕು ; ಕೆಲವು ತಿಂಗಳ ಮಟ್ಟಿಗೆ ತಮ್ಮ ಮಗನನ್ನು ನನ್ನ ವಶಕ್ಕೆ ತೆಗೆದು ಕೊಂಡು ಆತನ ಅಭಿವೃದ್ಧಿಗೊಸ್ಕರ ನನ್ನ ಕೈಲಾದ ಸಾಹಸವನ್ನೆಲ್ಲಾ ಮಾಡುವುದಕ್ಕೆ ಸಿದ್ಧನಾಗಿದ್ದೇನೆ, ಆದರೆ ಒಂದು ಮಾತನ್ನು ನಾವು ನಡಸಿಕೊಡದಿದ್ದರೆ ತೀರುವುದಿಲ್ಲ, ಆತನಿಗೆ ನಾನು ಒಬ್ಬ ಸ್ನೇಹಿತನಾಗಿ ಇರುವನಂತೆಯೇ ತೋರ್ಪಡಿಸಿಕೊಂಡು ತಮ್ಮ ಕಾವ್ಯವನ್ನು ನೆರವೇರಿಸ ಬೇಕು, ಇಷ್ಟರಮಟ್ಟಿಗೆ ಮಾಡಲು ನನಗೆ ಅಭಯವಾಗಿ, ನನ್ನ ನಡೆ ನುಡಿಗಳು ತಮಗೆ ಸಮ್ಮತವಾದರೆ, ಎಷ್ಟು ದಿವಸ ಬೇಕಾದರೂ ಆತ ನನ್ನು ಬಳಿಯಲ್ಲಿ ಇಟ್ಟು ಕೊಂಡಿರುತೇನೆ. . ಈ ಮಧ್ಯೆ ಅತಿ ಪ್ರೀತಿ ಯಿಂದಲೂ ಮುದ್ದಿನಿಂದಲೂ ಹುಡುಗನ ಗುಣವು ಸ್ವಲ್ಪ ಹದಗೆಟ್ಟಿದೆ ಎಂದು ನನಗೆ ಭಯವುಂಟಾಗಿದೆ. ಅದು ವ್ಯತ್ಯಾಸವಾಗಬೇಕು, ಆದ್ದ ರಿಂದ ನಾನು ಉಪಾಧ್ಯಾಯನೆಂದು ತೋರ್ಪಡಿಸಿಕೊಳ್ಳುವುದಕ್ಕಿಂತಲೂ ತಮಗೂ ತಮ್ಮ ಮನೆಯವರೆಲ್ಲರಿಗೂ ಮಿತ್ರನಂತೆ ಸದ್ಯಕ್ಕೆ ತೋರ್ಪಡಿಸಿ ಕೊಂಡಲ್ಲಿ, ನನ್ನ ಕಾವ್ಯಕ್ಕೆ ಅಗತ್ಯವಾಗಿ ಬೇಕಾದ ಹತೋಟಿಯು ನನಗೆ ಕೊಂಚ ಹೆಚ್ಚಾಗಿಯೇ ಇದ್ದೀತೆಂದು ತೋರುತಿದೆ ; ಇದರ ಮೇಲೆ ಸರ್ವಜ್ಞ ಚಿತ್ರ, ಹೀಗೆಂದು ಹೇಳಿದನು. ಉಪಾಧ್ಯಾಯರಿಗೆ ಸಲ್ಲತಕ್ಕ ಮತ್ಯಾದೆಯಿಂದಲೇ ಆ ವಿದ್ವಾಂಸ