ಪುಟ:ಸಮತಿ ಮದನಕುಮಾರರ ಚರಿತ್ರ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಮತಿ ಮದನಕುಮಾರರ ಚರಿತ್ರೆ ೨4 ನನ್ನು ಕಾಣಬೇಕೆಂಬ ಅರಸನ ಉದಾರವಾದ ಮನಸ್ಸಿಗೆ ಜೋಯಿ ಸನು ಹೇಳಿದ ಮಾತು ಎಷ್ಟೇ ಅಸಮಾಧಾನಕರವಾಗಿದ್ದಾಗ್ಯೂ, ದೊರೆಯು ಅದಕ್ಕೆ ಒಪ್ಪದೇ ಹೋದರೆ ತೀರದಾಗಿತ್ತು, ಅದೇ ಪ್ರಕಾರ ಆವೂರಿಗೆ ಕೊಂಬಿನ ಕೂಗಿನ ದೂರದಲ್ಲಿದ್ದ ಅಗ್ರಹಾರದಲ್ಲಿ ರಾಮಜೋ ಯಿಸನು ವಾಸಮಾಡುತಿರುವ ಮನೆಗೆ ಆ ಮಾರನೇದಿವಸ ಮದನ ಕುಮಾರನನ್ನು ಕಳುಹಿಸಿದರು. ರಾಜಕುಮಾರನು ತನ್ನ ಮನೆಗೆ ಬಂದು ಸೇರಿದ ಮಾರನೇದಿವಸ ಬೆಳಗ್ಗೆ ಅಷ್ಟು ಹೊತ್ತಿಗೇ ರಾಮಜೋಯಿಸನು ತನ್ನ ಆಸ್ಥಿ ಕಗಳನ್ನು ತೀರಿಸಿಕೊಂಡು ಧನುಶ್ಯಾಸದ ಹಾಗೆ ಹೊತ್ತಿಗೆ ಮುಂಚೆಯೇ ಊಟ ವನ್ನು ಮಾಡಿಕೊಂಡು, ಸುಮತಿಮದನಕುಮಾರ ಈ ಉಭಯ ರೊಡನೆ ಕೂಡಿ ಸಮಿಾಪದಲ್ಲಿದ್ದ ತನ್ನ ತೋಟಕ್ಕೆ ಹೋದನು, ಅಲ್ಲಿ ಜೋಯಿಸನು ಸುಮತಿಯ ಕೈಗೆ ಒಂದು ಕಳೆಕೊಕ್ಕೆಯನ್ನು ಕೊಟ್ಟು ತಾನು ಒಂದು ಗುದ್ದಲಿಯನ್ನು ತೆಗೆದುಕೊಂಡನು : ತರುವಾಯ ಬಹು ಶ್ರದ್ಧೆಯಿಂದ ಅವರಿಬ್ಬರೂ ಅಗೆಯುವದಕ್ಕೆ ಮೊದಲು ಮಾಡಿದರು. ಹಾಗೆ ಅಗೆಯುತಾ ಜೋಯಿಸನು ಆ ಹುಡುಗರನ್ನು ನೋಡಿ ಹಣ್ಣು ತಿನ್ನ ಬೇಕೆಂದು ಆಶೆಯಿರತಕ್ಕವರು ಆ ಹಣ್ಣು ಬೆಳೆಯುವುದಕ್ಕೆ ತಕ್ಕ ಕೆಲಸವನ್ನು ಮಾಡಬೇಕು : ಆದ್ದರಿಂದ ನಾನೂ ನಮ್ಮ ಸುಮ ತಿಯೂ ನಮ್ಮ ದಿನಗಟ್ಟಲೇ ಕೆಲಸಕ್ಕೆ ಮೊದಲು ಮಾಡುತೇವೆ : ಇಗೋ ಇದೇ ನನ್ನ ಪಾತ್ರೆ, ಅದು ಸುಮತೀದು, ನಾವು ನಿತ್ಯವೂ ಕೆಲಸ ಮಾಡುತೇವೆ, ಯಾರು ಹೆಚ್ಚಾಗಿ ಬೆಳೆಯುತಾರೆಯೋ ಅವರಿಗೆ ಹೆಚ್ಚು ತಿಂಡಿ ಸಿಕ್ಕುವುದು. ಅಯ್ಯಾ ಮದನು, ನೀನೂ ನಮ್ಮ ಜೊತೆಗೆ ಬರುವು ದಾದರೆ ನಿನಗೂ ಒಂದು ತುಂಡನ್ನು ಗುರುತುಮಾಡಿಕೊಡುತೇನೆ ; ಅದು ನಿನ್ನ ದೇ ಆಗಿರುತ್ತೆ ; ಅದರಲ್ಲಿ ಆದ ಹಣ್ಣೆಲ್ಲಾ ನಿನ್ನ ದೇ, ಮದನಕುಮಾರ-ಒಂದು ಕಾಲಕ್ಕೂ ಇಲ್ಲ, ನಾನು ರಾಜ ಕುಮಾರ ; ಕೆಲಸಕ್ಕೆ ಬಾರದ ಕೂಲಿಯವರಹಾಗೆ ನಾನು ಇಂಥಾ ಚಾಕರಿಗೆಲ್ಲಾ ಹೋಗಲಾರೆ, ನನಗೆ ಇಷ್ಟವಿಲ್ಲ, ಜೋಯಿಸ-ಹಾಗಾದರೆ, ಸ್ವಾಮಿ ಮಹಾರಾಜಶ್ರೀ ರಾಜ