ಪುಟ:ಸಮತಿ ಮದನಕುಮಾರರ ಚರಿತ್ರ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪ ಸುಮತಿ ಮದನಕುಮಾರರ ಚರಿತ್ರೆ _[ಅಧ್ಯಾಯ ಕುಮಾರರೆ, ತಮ್ಮ ಚಿತ್ತ ಬಂದಂತೆ ಮಾಡಿ ; ನಾನೂ ಸುಮತಿಯೂ ಕೆಲಸ ಮಾಡುತ್ತೇವೆ, ನಮ್ಮ ದರ್ಜೆಗೆ ಏನೂ ಕಮ್ಮಿಯಿಲ್ಲ. ನಮ್ಮ ಕೆಲಸದಲ್ಲಿ ನಾವು ಇರುತೇವೆ. ಹೀಗೆ ಇವರಿಬ್ಬರೂ ಎರಡು ಗಂಟೆ ಹೊತ್ತು ಕೆಲಸಮಾಡುತಿದ್ದರು. ಆಗ ರಾಮಜೋಯಿಸನು-ಇನ್ನು ಸಾಕು, ಈಗ್ಗೆ ಕೆಲಸವನ್ನು ನಿಲ್ಲಿ ಸೋಣ, ಎಂದು ಗುದ್ದಲಿಯನ್ನು ಬಿಟ್ಟು ಸುಮತಿಯ ಕೈಯನ್ನು ಹಿಡಿದುಕೊಂಡು, ಆ ತೋಟದಲ್ಲಿ ಒಂದು ಕೊನೆಯಲ್ಲಿದ್ದ ಗುಡಿಲಿಗೆ ಹೋದನು, ಅಲ್ಲಿ ಅವರಿಬ್ಬರೂ ಕೂತುಕೊಂಡರು. ಅಲ್ಲಿ ಒಂದು ಬಿದಿರ ತಟ್ಟೆ ಯಲ್ಲಿ ಇರಿಸಿದ್ದ ಒಳ್ಳೇ ಕಳಿತ ಬಾಳೇಹಣ್ಣು ಗಳನ್ನೂ ಮಾವಿನ ಹಣ್ಣುಗಳನ್ನೂ ಅವರಿಬ್ಬರೂ ಹಂಚಿಕೊಂಡರು. ಇವರಿಬ್ಬರೂ ಕೆಲಸವನ್ನು ನಿಲ್ಲಿಸಿ ಗುಡಿಲಿನ ಸಮಿಾಪಕ್ಕೆ ಬರು ವಾಗ ಇವರ ಹಿಂದೆಯೇ ಬಂದು ಸಮಿಾಪದಲ್ಲಿ ನಿಂತಿದ್ದ ಮದನಕುಮಾ ರನು ತನಗೂ ತಿನ್ನುವುದಕ್ಕೆ ಹಣ್ಣನ್ನು ಕೊಟ್ಟಾರೆಂದು ಕಾದುಕೊಂಡಿ ದ್ದನು, ಆದರೆ ಅವರಿಬ್ಬರೂ ಇವನ ಕಡೆಯೇ ತಿರುಗಿನೋಡದೆ ಇವ ನನ್ನು ಲಕ್ಷಮಾಡದೆ, ತಾವು ತಿನ್ನು ವುದಕ್ಕೆ ಮೊದಲು ಮಾಡಿದರು. ಮದನಕುಮಾರನಿಗೆ ಇದನ್ನು ಕಂಡು ಸಹಿಸದೇ ಹೋಯಿತು. ಗುಳ ಗುಳನೆ ಕಣ್ಣಿನಲ್ಲಿ ನೀರ ಸುರಿಸುತಾ ಗೊಳ್ಳೆಂದು ಗಟ್ಟಿ ಯಾಗಿ ಅಳುವು ದಕ್ಕೆ ಮೊದಲು ಮಾಡಿದನು. ಜೋಯಿಸನು ಅವನನ್ನು ನೋಡಿ ಲೇಶವೂ ಗಾಬರಿ ಪಡದೆ~ ಯಾಕೆ ಏನಾಯಿತು ? ಎಂದು ಕೇಳಿದನು. ಮದನಕುಮಾರನು ಅತಿ ಕೋಪದಿಂದ ಜೋಯಿಸನ ಮುಖವನ್ನು ದುರುಗುಟ್ಟಿಕೊಂಡು ನೋಡುತಾ ಅವನ ಮಾತಿಗೆ ಉತ್ತರವನ್ನೇ ಹೇಳದೆ ಸುಮ್ಮನೇ ನಿಂತಿ ದ್ದನು. ಅದನ್ನು ಕಂಡು ಆ ಪಂಡಿತನು-ಓ! ಹಾಗೆಯೇ ಸ್ವಾಮಿ ? ತಾವು ಮಾತನಾಡದಿದ್ದರೆ ಸುಮ್ಮನೇ ಇರಬಹುದು, ಮಾತನಾಡಲೇ ಬೇಕೆಂಬ ನಿರ್ಬಂಧವೇನೂ ಇಲ್ಲಿಲ್ಲ ಎಂದು ಹೇಳಿದನು. ಮದನನಿಗೆ ಇನ್ನೂ ಅಸಮಾಧಾನ ಹೆಚ್ಚಾಯಿತು, ತನ್ನ ಕೋಪ ವನ್ನು ಮರೆಮಾಚಿಕೊಳ್ಳುವುದಕ್ಕೆ ಸಾಮರ್ಥವಿಲ್ಲದಕಾರಣ, ಗುಡಿ