ಪುಟ:ಸಮತಿ ಮದನಕುಮಾರರ ಚರಿತ್ರ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ ನೆಗೆಯುವುದು, ಹೀಗೆಲ್ಲಾ ಆಡುತಿದ್ದವು, ಆ ತೋಟದವನ ಮಗನಾದ ಒಬ್ಬ ಸಣ್ಣ ಹುಡುಗನು ಇರುವೆ ನೊಣಗಳು ಮಾಡುತಿರುವ ಕೆಲಸ ವನ್ನು ಆಗಾಗ್ಗೆ ನೋಡುತಲೇ ಇದ್ದನು. ಈ ಹುಡುಗನು ಚಿಕ್ಕವನಾಗಿ ಏನೂ ಅರಿಯದವನಾಗಿದ್ದ ಕಾರಣ ಒಂದುದಿನ ತನ್ನ ಷ್ಟಕ್ಕೆ ತಾನೇಇರುವೆಯ ಹಾಗೆ ಏನೇನೂ ಅರಿಯದ ಪ್ರಾಣಿಗಳು ಇನ್ನು ಉಂಟೆ ? ನೊಣಗಳ ಹಾಗೆ ಹಾರಾಡುತ ಸಂತೋಷವಾಗಿರದೆ ಹಗಲೆಲ್ಲಾ ಗೇದು ಕೆಲಸ ಮಾಡುತ್ತಲೇ ಇರುತಿವೆ. ಈ ನೊಣಗಳು ಸರಿ, ಲೋಕದಲ್ಲಿ ಇಂಥಾ ಸದಾ ಸಂತೋಷಿಯಾದ್ದು ಇನ್ನು ಯಾವುದೂ ಇಲ್ಲ ಎಂದು ಕೊಂಡನು. ಈ ಹುಡುಗನು ಹೀಗೆ ಎಂದುಕೊಂಡು ಸ್ವಲ್ಪ ದಿವಸದ ಮೇಲೆ ಮಳೆಗಾಲಬಂತು, ಸೂರ ರಶ್ಮಿಯೇ ಕಾಣಿಸುವುದು ಕಷ್ಟ ವಾಗಿತ್ತು. ಮೂರು ಹೊತ್ತೂ ಜೊಿಂದು ಮಳೆ ಹುಯ್ಯುತ್ತಲೇ ಇತ್ತು. ಮೇಲೆ ಕಂಡ ಸಣ್ಣ ಹುಡುಗನು ಆ ಮಳೆಯಲ್ಲಿಯೇ ಒಂದು ದಿನ ತೋಟಕ್ಕೆ ಹೋಗಿ ನೋಡುವಾಗ್ಗೆ, ಅಲ್ಲಿ ಒಂದು ಇರುವೆಯೂ ಇರ ಲಿಲ್ಲ. ಅಲ್ಲಿದ್ದ ನೊಣಗಳು ಮಾತ್ರ ಚದರಿಹೋಗಿ ಕೆಲವು ಅಲ್ಲಲ್ಲಿ ಹಾರಾಡುತಿದ್ದವು; ಮತ್ತೆ ಕೆಲವು ಸತ್ತು ಬಿದ್ದಿದ್ದವು. ಅವನು ಒಳ್ಳೆ ಗುಣಾಢನಾದ ಹುಡುಗನಾಗಿದ್ದರಿಂದ ಆ ಸಣ್ಣ ಜೀವರಾಶಿಗಳನ್ನು ನೋಡಿ ಮರುಕದಿಂದ, ತನ್ನ ತಂದೆಯನ್ನು ಕುರಿತು-ಅಪ್ಪ, ಇಲ್ಲಿದ್ದ ಇರುವೆಗಳಿಗೆ ಏನು ಬಂತು ? ಅವು ಏನಾದವು ? ಎಂದು ಕೇಳಿದನು, ತಂದೆ-ಮಗು, ನೊಣಗಳೆಲ್ಲಾ ಸತ್ತು ಹೋದವು; ಯಾಕೆ ಎಂದು ಕೇಳಿದರೆ ಈ ಜಂತುಗಳಿಗೆ ಚಚ್ಚರ ಕಡಮೆ; ಶ್ರಮ ಪಟ್ಟು ತಿಂಡಿಯನ್ನು ಸೇರಿಸಿ ತುಂಬಿಕೊಳ್ಳಲಿಲ್ಲ ; ಕೆಲಸಮಾಡುವುದಕ್ಕೆ ಅತಿಯಾಗಿ ಪಾಲು ಮಾರಿಕೆ ಪಡುತಿದ್ದವು; ಅದರಿಂದ ನೊಣಗಳಿಗೆ ಇಂಥಾ ದುರ್ಗತಿ ಬಂತು, ಇರುವೆಗಳಾದರೋ ಬೇಸಗೆಯಲ್ಲಿ ಶ್ರಮ ಬಿದ್ದು ಕೆಲಸಮಾಡಿ ಚಳಿ ಗಾಲಕ್ಕೆ ಅನುಕೂಲಿಸುವ ಹಾಗೆ ತಿಂಡಿಯನ್ನು ತುಂಬಿಕೊಂಡವು. ಆದರಿಂದ ಅವುಗಳೆಲ್ಲಾ ಕ್ಷೇಮವಾಗಿವೆ. ಬಿಸಿಲುಕಾಲ ಬಂದರೆ ಮತ್ತೆ ಅವುಗಳೆಲ್ಲಾ ಬರುವವು, ಹೀಗೆಂದು ಹೇಳಿದನು. ಈ ರೀತಿಯಲ್ಲಿ ಸುಮತಿಯು ಓದಿದ ಕಥೆಯನ್ನು ಕೇಳಿ ರಾಮ.