ಪುಟ:ಸಮತಿ ಮದನಕುಮಾರರ ಚರಿತ್ರ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಮತಿ ಮದನಕುಮಾರರ ಚರಿತ್ರೆ ೨೭. ಜೋಯಿಸನು-ಸಾಕೈಯ್ಯ, ಸುಮತಿ ಬಾ, ನಾವು ಹಾಗೆಯೇ ಹೊರಕ್ಕೆ. ಹೋಗಿ ಸುತ್ತಾಡಿಕೊಂಡು ಬರೋಣ, ಎಂದು ಆ ಹುಡುಗನನ್ನು ಜೊತೆಯಲ್ಲಿ ಕರೆದುಕೊಂಡು ಹೊಲಗಳಲ್ಲಿ ಸುತ್ತಿಯಾಡುತಾ ಇದ್ದನು; ತಮ್ಮ ದಾರಿಯಲ್ಲಿ ಕಣ್ಣಿಗೆ ಬಿದ್ದ ಬಗೆ ಬಗೆ ಗಿಡಮೂಲಿಕೆಗಳನ್ನು ಜೋಯಿಸನು ಸುಮತಿಗೆ ತೋರಿಸುತ್ತಾ ಅವುಗಳ ಹೆಸರುಗಳನ್ನೂ ಗುಣಗಳನ್ನೂ ಅವನಿಗೆ ಹೇಳಿಕೊಡುತ್ತಾ ಹೋದನು. ಹಾಗೆಯೇ ಹೋಗುತಾ ದಾರಿಯಲ್ಲಿ ಒಂದು ಬೇಲಿಯ ಹತ್ತಿರ ಬೆಳೆದಿದ್ದ ಒಂದು ಸಣ್ಣ ಗಿಡವನ್ನು ಸುಮತಿಯು ಕಿತ್ತು ತಂದು - ಜೋಯಿಸರೆ, ಈ ಗಿಡ ಸಣ್ಣ ಗಿದೆ, ಮೂಸಿನೋಡಿದರೆ ಸುವಾಸನೆಯಾಗಿದೆ, ಇದನ್ನು ಬಾಯಿಗೆ ಹಾಕಿಕೊಂಡು ತಿನ್ನ ಬಹುದೇ ? ಎಂದು ಕೇಳಿದನು. ಅದಕ್ಕೆ ಉಪಾ ಧ್ಯಾಯನು-ಮಗು, ನಿನ್ನ ಪುಣ್ಯ ಚೆನ್ನಾಗಿತ್ತು ; ನೀನು ಬಾಯಿಗೆ ಹಾಕಿಕೊಳ್ಳುವುದಕ್ಕೆ ಮುಂಚೆ ನನ್ನ ನ್ನು ಕೇಳಿದ್ದು ಒಳ್ಳೇದಾಯಿತು. ಹಾಗಿಲ್ಲದೆ ನೀನು ಬಾಯಿಗೆ ಹಾಕಿಕೊಂಡಿದ್ದರೆ ವಿಶೇಷವಾಗಿ ಹೊಟ್ಟೆ ತೊಳಸಿ ನಿನಗೆ ನಮನವಾಗುತಿತ್ತು, ತಲೆ ಸುತ್ತುತಿತ್ತು, ಇದು ಕಾಡ ಸಬಸಿಗೆಗಿಡ, ಅತ್ಯಂತ ಪಿತ್ತ ಕಾರಿ; ಕಳ್ಳಿ ಗಿಡದ ಬುಡದಲ್ಲಿ ಹುಟ್ಟಿದ್ದ ಕಾರಣ ಅದರ ವಿಷವೂ ಈ ಸೊಪ್ಪಿಗೆ ವ್ಯಾಪನೆಯಾಗಿರುವುದು, ಎಂದು ಹೇಳಿದನು. ಅದಕ್ಕೆ ಸುಮತಿಯು- ಸಂತರೆ, ಪದಾರ್ಥದ ಗುಣ ಇಂಥಾದ್ದೆಂದು ತಿಳಿಯದೆ ನಾನು ಯಾವುದನ್ನೂ ತಿನ್ನು ವುದಿಲ್ಲ; ನನಗೆ ಆ ಅಭ್ಯಾಸವೇ ಇಲ್ಲ. ತಾವು ದಯಮಾಡಿ ನನಗೆ ಹೇಳಿ ಕೊಟ್ಟರೆ ಹಸುರುಗಳ ಹೆಸರನ್ನೂ ಗುಣವನ್ನೂ ಚೆನ್ನಾಗಿ ಜಾಗ್ರತೆ ಯಿಂದ ತಿಳಿದುಕೊಳ್ಳು ತೇನೆ, ಎಂದು ವಿನಯವಾಗಿ ಹೇಳಿದನು, ತರುವಾಯ ಅವರಿಬ್ಬರೂ ಮನೇಕಡೆಗೆ ತಿರುಗಿದರು. ದಾರಿಯಲ್ಲಿ ಸುಮತಿಯು ಬರುತ್ತಾ ಇರುವಾಗ ನೆಲದಮೇಲೆ ಒಂದು ದೊಡ್ಡ ಹದ್ದು ಕೂತಿತ್ತು, ಅದು ತನ್ನ ಕಾಲಿನಲ್ಲಿ ಏನನ್ನೋ ಮೆಟ್ಟಿ ಕೊಂಡಿತ್ತು. ಆ ಬೀಳನ್ನು ಹದ್ದು ತನ್ನ ಕೊಕ್ಕಿನಿಂದ ಕುಕ್ಕುವ ಸಮಯವಾಗಿತ್ತು. ಇದನ್ನು ಕಂಡು ಸುಮತಿಯು ಅಬ್ಬರಿಸುತಾ ಆಕಡೆ ಓಡಿಹೋದನು. ಆ ಹದ್ದು ತನ್ನ ಕಾಲಿನಲ್ಲಿ ಮೆಟ್ಟಿಕೊಂಡಿದ್ದದನ್ನು ಅಲ್ಲಿಯೇ ಬಿಟ್ಟು