ಪುಟ:ಸಮತಿ ಮದನಕುಮಾರರ ಚರಿತ್ರ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಮತಿ ಮದನಕುಮಾರರ ಚರಿತ್ರೆ ೨೯. ಗೊಳೋ ಎಂದು ಅತ್ತನು. ಈ ಅಳುವು ತನ್ನ ನ್ನು ಇಲ್ಲಿ ಒಬ್ಬರೂ ಲಕ್ಷಮಾಡುವುದಿಲ್ಲವಲ್ಲಾ ಎಂಬ ವ್ಯಸನದಿಂದಲೇ ಹೊರತು, ಕೋಪ ದಿಂದ ಹುಟ್ಟಿದ್ದಲ್ಲ. ತನ್ನ ಸ್ನೇಹಿತನಾದ ಆ ಚಿಕ್ಕ ಹುಡುಗ ಅಷ್ಟೊಂದು ಅಳುತಿರುವು ದನ್ನು ಕಂಡು ಸುಮತಿಯ ಮನಸ್ಸು ತಡೆಯಲಾರದೆ ಹೋಯಿತು ; ಅವನಿಗೂ ದುಃಖಬರುವ ಹಾಗಾಯಿತು. ಕಣ್ಣಿನಲ್ಲಿ ಸ್ವಲ್ಪ ನೀರನ್ನು ತಂದುಕೊಂಡು, ಕತ್ತೆತ್ತಿ ಜೋಯಿಸರ ಮುಖವನ್ನು ನೋಡುತಾನನ್ನ ಎಡೆಗೆ ಇಕ್ಕಿದ ಅನ್ನ ವನ್ನು ನಾನು ಬೇಕಾದ ಹಾಗೆ ವಿನಯೋಗಿಸ ಬಹುದೆ ? ಅಪ್ಪಣೆಯಾಗಬೇಕು ಎಂದನು. ಅದಕ್ಕೆ ಜೋಯಿಸನುಮಗು, ನೀನು ಬೇಕಾದ ಹಾಗೆ ವಿನಿಯೋಗಿಸಿಕೊಳ್ಳ ಬಹುದಪ್ಪ ಎಂದನು. ಹಾಗಾದರೆ ಎಂದು ಸುಮತಿಯು ಮೇಲಕ್ಕೆ ಎದ್ದು -ಬಡಿಸಿರುವ ನನ್ನ ಎಲೆಯನ್ನು ತಂದು ಮದನನಿಗೆ ಇರಿಸುತೇನೆ; ಪಾಪ, ಬೆಳಗ್ಗೆ ಹೊತ್ತಿಗೆ ಮುಂಚೆ ನಮ್ಮ ಸಂಗಡ ಎರಡು ತುತ್ತು ಅನ್ನ ಬಾಯಿಗೆ ಹಾಕಿಕೊಂಡು. ಜಾಗ್ರತೆಯಾಗಿ ಎದ್ದ; ಆಗಿನಿಂದ ಇದುವರೆಗೆ ಅವ ಏನನ್ನೂ ತಿನ್ನಲಿಲ್ಲ. ಅವನಿಗೆ ಇಷ್ಟು ಹೊತ್ತು ಹಸಿದುಕೊಂಡು ಇದ್ದ ಅಭ್ಯಾಸವಿಲ್ಲ. ನನ ಗಿಂತಲೂ ಅವನಿಗೆ ಕುತ್ತು ಹೆಚ್ಚಾಗಿರಬೇಕು ಎಂದನು ; ಕೂಡಲೆ ಬಡಿ ಸಿದ್ದ ತನ್ನ ಎಡೆಯನ್ನು ಮದನ ಕೂತಿದ್ದ ಮೂಲೆಗೆ ತೆಗೆದುಕೊಂಡು ಹೋಗಿ ಅವನ ಮುಂದೆ ಇರಿಸಿದನು. ಕೂಡಲೆ ಮದನನು ಆ ಎಲೆ ಯಲ್ಲಿ ಕ್ಕಿದ್ದ ಅನ್ನವನ್ನು ಕತ್ತೆತ್ತಿ ಅತ್ತಿತ್ತ ನೋಡದೆ ಸುಮ್ಮನೆ ಉ೦ಡನು. ಅದನ್ನು ನೋಡಿ ಜೋಯಿಸನು ಹೀಗೋ ! ಸರಿ, ತಿಳಿಯಿತು. ದೊರೆ ಮಕ್ಕಳು ತಮಗೂ ಪ್ರಯೋಜನವಿಲ್ಲದೇಲೂ ಇತರರಿಗೂ ಪ್ರಯೋಜನ ವಿಲ್ಲದೇಲೂ ಇರುವಂಥಾ ಹದವಿಯುಳ್ಳವರು, ಮೇಲೂ, ಇತರರು ಕಷ್ಟ ಪಟ್ಟು ಸಂಪಾದಿಸಿದ ಅನ್ನ ವನ್ನು ತಿನ್ನು ವ ಪದವಿಯೇ ಇವರ ದೊಡ್ಡ ಪದವಿ, ಎಂದನು. ಮಾರನೇದಿನ ರಾಮಜೋಯಿಸನೂ ಸುಮತಿಯೂ ಎಂದಿನಂತೆ ಸ್ನಾ ನಾದಿಗಳನ್ನು ತೀರಿಸಿಕೊಂಡು ತೋಟದಲ್ಲಿ ಕೆಲಸ ಮಾಡುವುದಕ್ಕೆ ಹೋದರು, ಅವರು ಕೆಲಸಕ್ಕೆ ಇನ್ನೆನು ಮೊದಲು ಮಾಡಿದರು.