ಪುಟ:ಸಮತಿ ಮದನಕುಮಾರರ ಚರಿತ್ರ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

4] ಸುಮತಿ ಮದನಕುಮಾರರ ಚರಿತ್ರ ೩೧ ಅರಸು, ಮದರವನು ಮಧುಪುರಿ ಎಂಬ ಪಟ್ಟಣದಲ್ಲಿ ಮಧುವರ್ಮನೆಂಬ ಒಬ್ಬ ದೊರೆ ಮಗನಿದ್ದನು. ಇವನಿಗೆ ಆ ಊರ ದೊರೆಮಗಳನ್ನು ಕೊಟ್ಟು ಮದುವೆ ಯಾಗಿತ್ತು, ಇವನು ನಿತ್ಯವೂ ಕುದುರೆ ಸವಾರಿ ಮಾಡುವುದು, ತಿಂಡಿ ತಿನ್ನು ವುದು, ನಿದ್ರೆ ಮಾಡುವುದು, ಯಾವಾಗಲೂ ಆನಂದ ಪಡುವ ಕೆಲಸದಲ್ಲಿ ಕಾಲವನ್ನು ಕಳೆಯುವುದು ಹೀಗೆ ಮಾಡುತಿದ್ದನು. ಇವನ ಸಮಿಾಪದಲ್ಲಿ ಅನೇಕಜನ ಓಲೆಕಾರರು ಸೊಂಟ ಸುತ್ತಿಕೊಂಡು ಕಾದಿರು ತಿದ್ದರು. ಈ ಆಳುಗಳು ದೊರೆನಗನಿಗೆ ವಿಶೇಷವಾದ ಮತ್ಯಾದೆಯನ್ನು ತೋರಿಸುತಾ ಉಪಚಾರವನ್ನು ಮಾಡುತ್ತಾ ಇದ್ದರು ; ಅವನು ಯಾವ ಮಾತನ್ನು ಹೇಳಿದರೂ ಕೂಡಲೇ ಅದನ್ನು ಜರುಗಿಸುತಿದ್ದರು. ಇದು ಒಳ್ಳೇದು, ಇದು ಕೆಟ್ಟದು, ಎಂದು ಅವ ಅರಿಯಲೇ ಅರಿಯ, ಅದನ್ನು ಯಾರಿಂದಲೂ ಕೇಳಿದ್ರೂ ಇಲ್ಲ. ಇವನು ಅತಿ ಅಹಂಕಾರಿಯಾಗಿ ತನ್ನ ಬುದ್ದಿಗೆ ತೋರಿದಹಾಗೆಲ್ಲಾ ಇಲಾಟವನ್ನು ಆಡುತಾ, ಲೋಕ ಕ್ಕೆಲ್ಲಾ ತಾನೇ ಅಧಿಪತಿ ಎಂತಲೂ, ಬಡವರೆಲ್ಲಾ ಹುಟ್ಟಿರುವುದು ತನ್ನ ಸೇವೆಗೆಂತಲೂ, ಊಹಿಸಿಕೊಂಡಿದ್ದನು. ಹೀಗಿರುವಲ್ಲಿ ಈ ದೊರೆಮಗನ ಅರಮನೆಗೆ ಸವಿಾಪವಾಗಿ ಒಬ್ಬ ಮೇದರನನು ಸಾಧಾರಣವಾದ ಒಂದು ಗುಡಿಸಲನ್ನು ಕಟ್ಟಿ ಕೊಂಡು ವಾಸವಾಗಿರುತಿದ್ದನು. ಈ ಮೇ ದರವನು ಬಡವನಾದರೂ ಪ್ರಾಮಾ ಣಿಕನಾಗಿ, ಒಬ್ಬರ ತಂಟೆಗೂ ಹೋಗದೆ, ತನ್ನ ಪಾಡಿಗೆ ತಾನು ಬಿದಿರ ಕುಕ್ಕೆ, ಚಾಪೆ, ಮರ ಮೊದಲಾದ್ದನ್ನೂ, ಈಚಲು ಕುಕ್ಕೆಗಳನ್ನೂ, ಹೆಣೆದು ಮಾರಿಕೊಂಡು ಜೀವನ ಮಾಡು ತಿದ್ದನು. ಇವನು ಬೆಳಗಿ ನಿಂದ ಸಾಯಂಕಾಲ ಕಣ್ಣಿಗೆ ನಿದ್ರೆ ಬರುವ ತನಕ ಕುಕ್ಕೇ ಹೆಣೆದು ಕೆಲಸ ಮಾಡಿದರೂ ಇವನಿಗೂ ಇವನ ಹೆಂಡತಿ ಮಕ್ಕಳಿಗೂ ಹೊಟ್ಟೆ ತುಂಬಾ ಅನ್ನ ಸಿಕ್ಕುತಿರಲಿಲ್ಲ ; ಬೆರೆಕೆ ಸೊಪ್ಪಿನ ಉದಕ, ರಾಗಿಹಿಟ್ಟು ಇಷ್ಟು ಹೊರತು ಮತ್ತೆ ಯಾವ ಭಕ್ಷ್ಯಭೋಜ್ಯಗಳನ್ನೂ ಕಂಡವನಲ್ಲ ; ಇವನು ಕುಕ್ಕೇ ಹೆಣೆಯುವುದಕ್ಕಾಗಿ ಹಾಕಿದ್ದ ಸೀಬು ಇವನಿಗೆ ಹಾಸುಗೆ ಯಾಗಿತ್ತು. ಇಂಥಾ ಬಡತನವನ್ನು ಅನುಭವಿಸುತಿದ್ದಾಗ್ಯೂ, ದೇವರು