ಪುಟ:ಸಮತಿ ಮದನಕುಮಾರರ ಚರಿತ್ರ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ ಬೇಕಾದ ಹಾಡನ್ನು ರಾಗವಾಗಿ ಹೇಳುತ್ತಾ ತನ್ನ ಹೆಣಿಗೇ ಕೆಲಸವನ್ನು ತಾನು ಮಾಡಿಕೊಳ್ಳು ತಾ ಲಕ್ಷವಿಲ್ಲದೆ ಕೂತಿರುತ್ತಿದ್ದನು. ಇವನನ್ನು ಕಂಡಾಗೆಲ್ಲಾ ದೊರೆ ಅಳಿಯನಿಗೆ ಕೋಪ ಬರುತಿತ್ತು. ಈ ಅರಸುಇದೇನು ಆಶ್ಚರ, ಈ ಕೆಲಸಕ್ಕೆ ಬಾರದ ಕೀಳು ಜಾತಿಯವನು, ಹಗ ಲೆಲ್ಲಾ ದುಡಿದು ಹಾಗದ ಕಾಸನ್ನು ಸಂಪಾದಿಸಲಾರದ ಮೇದರವನು, ಈ ಕಳ್ಳ ಗೊರಮ ಒಣ ಕಲ ಹಿಟ್ಟ ಕಡಿದುಕೊಂಡು ತಿಪ್ಪೇಮೇಲೆ ಬಿದ್ದಿರ ತಕ್ಕ ಈ ಅ ಪ್ರಯೋಜಕ, ಯಾವಾಗಲೂ ಸೌಖ್ಯವಾಗಿ ಸಂತೋಷಚಿತ್ರ ನಾಗಿರುವುದಕ್ಕೆ ಕಾರಣವೇನು ? ನಾನು ದೊರೆ ಅಳಿಯ, ಬೇಕಾದ ಐಶ್ವರ ವಿದೆ, ಇಂಥಾ ಅಣುಗಳು ಎಷ್ಟು ಕೋಟಿ ಆದರೆ ತಾನೆ ನನಗೆ ಸಮಾನವಾದಾವು ? ಆದರೂ ನನ್ನ ೦ಥಾವನಿಗೆ ಏನೋ ಮನೋವ್ಯಥೆ ತಗಲಿಕೊಂಡು, ಯಾವಾಗಲೂ ಏನಾದರೂ ಒಂದು ಬಗೇ ಜಾಡ್ಯದಲ್ಲಿ ನರಳುತ್ಯಾ, ತಟಕ್ಕನೆ ಕಣ್ಣು ಮುಚ್ಚಿ ಒಂದು ದಿನವಾದರೂ ನಿದ್ರೆ ಮಾಡದೆ ನಾನು ಪೇಚಾಡುವುದಕ್ಕೆ ಕಾರಣವೇನು ?- ಹೀಗೆ ತನ್ನ ಮನಸ್ಸಿನಲ್ಲಿ ಎಂದುಕೊಳ್ಳು ತಿದ್ದನು, ಮೇದರವನನ್ನು ಕಂಡಾಗೆಲ್ಲಾ ಇಂಥಾ ಯೋಚನೆ ತೋರಿ ಅರಸನಿಗೆ ಆ ಬಡವನ ಮೇಲೆ ವಿಶೇಷವಾಗಿ ದ್ವೇಷ ಹುಟ್ಟಿ ತು, ತನಗೆ ಬಂದ ಕೋಪತಾಪಗಳು, ಕ್ರಮವಾಗಿಯೇ ಇರಲಿ ಅಕ್ರಮವಾಗಿಯೇ ಇರಲಿ, ಆ ತಾರತಮ್ಯವನ್ನೇ ಇವ ಅರಿತವ ನಲ್ಲ ; ಅ೦ಥಾ ಅರಿಷಡ್ವರ್ಗಗಳನ್ನು ನಿಗ್ರಹಿಸಿಕೊಂಡ ಅಭ್ಯಾಸವೇ ಇವನಿಗಿಲ್ಲ. ಹೀಗಿರಲು, ಗುಬ್ಬಿ ಮೇಲೆ ಬ್ರಹ್ಮಾಸ್ತ್ರವನ್ನು ಹಾಕಿದರೆ೦ಬ ಗಾದೆಗೆ ಸರಿಯಾಗಿ, ಆ ಬಡವನಿಗೆ ತಕ್ಕ ಶಿಕ್ಷೆಯನ್ನು ಮಾಡಬೇಕೆಂದು ಅರಸುಮಗನು ನಿಶ್ಚಯಿಸಿಕೊಂಡನು, ಮೇದರವನು ಯಾವಾಗಲೂ ಸಂತೋಷಿಯಾಗಿದ್ದು ದೇ ಅವನ ಅಪರಾಧ. ಹೀಗಿರುವಲ್ಲಿ ಇಂಥಾ ದುರಭಿಪ್ರಾಯದಿಂದ ಒಂದು ದಿನ ಅರಸು ತನ್ನ ಆಳುಗಳನ್ನು ಕರೆದು, ಆ ಮೇದರವನು ಅವನ ಗುಡಿಸಿಲಿನ ಹತ್ತಿರ ಕಟ್ಟಿ ಹಾಕಿಕೊಂಡಿದ್ದ ಸೀಬಿನ ಸಿಂಡಿಗೆಲ್ಲಾ ಬೆಂಕಿ ಹತ್ತಿಸು ವಂತೆ ಹೇಳಿದನು. ಸವಿಾಪದಲ್ಲಿದ್ದ ಒಂದು ಕಟ್ಟೆ ಯಲ್ಲಿ ಬೆಳೆದಿದ ನೊದೇ ಹುಲ್ಲನ್ನು ಕಿತ್ತು ಈ ಮೇದರವನು ಮಂದಲಿಗೆ ಮುಂತಾದ್ದನ್ನು