ಪುಟ:ಸಮತಿ ಮದನಕುಮಾರರ ಚರಿತ್ರ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩] ಸುಮತಿ ಮದನಕುವರರ ಚರಿತ್ರೆ ಆಟ ಮಾಡಿ ಮಾಡಿ ಮಾರುತ್ತಿದ್ದನು ; ಸ್ವಲ್ಪ ಒಣಗಿ ನಿಂತಿದ್ದ ಆ ನೊದೇ ಹುಲ್ಲಿಗೂ ಬೆಂಕಿ ಹಾಕುವಂತೆ ಅರಸಿನವರ ಅ ಪ್ಪಣೆಯಾಯಿತು, ಯಜ ಮಾನನ ಆ ಪ್ರಣೆಯನ್ನು ಮೀರಲಾರದೆ ಆಳುಗಳು ಬೆಂಕಿಯನ್ನು ಹತ್ತಿಸಿದರು, ಮೇದರವನ ಸೀಬಿನ ಸಿಂಡಿಗಳೂ, ಕೆಲವು ಕುಕ್ಕೆಗಳೂ, ಈ ಚಲ ಕುಕ್ಕೆಗಳೂ, ಅದರ ಕಡ್ಡಿಗಳೂ, ಸವಿಾಪದಲ್ಲಿದ್ದ ನೊದೇ ಹುಲ್ಲಿನ ಅಡುವೂ, ಇನ್ನೂ ಇತರ ತಯಾರಾದ ಸಾಮಾನುಗಳೂ ಸುಟ್ಟು ಬೂದಿಯಾದ್ದಲ್ಲದೆ, ಮೇದರವನ ಹುಲ್ಲುಮನೆಗೂ ಯಳ್ಳೇಶ್ವರ ಚೆನ್ನಾಗಿ ಪ್ರವೇಶಮಾಡಿದನು. ಆಗ ಮೇದರನನ ಬಟ್ಟೆ ಬರೆ ಎಲ್ಲಾ. ಸುಟ್ಟು ಹೋಯಿತು. ಅವನ ಹೆಂಡತಿಯ ಮೈ ಅರ್ಧ ಬೆಂದುಹೋಯಿತು; ಎಳೇ ಮಗುವಿನ ಜೋಳನೇ ಬಟ್ಟೆಗೂ ಬೆಂಕಿ ಹತ್ತಿ ಮಗುವಿನ ದೇಹ ವೆಲ್ಲಾ ಬೆಂದು ಹೋಯಿತು ; ಅದರ ಪ್ರಾಣ ಉಳಿದದ್ದು ಮನುಷ್ಯ ಪ್ರಯತ್ನದಿಂದ ಅಲ್ಲ ಎನ್ನುವ ಮಟ್ಟಿಗೆ ಅಪಾಯವುಂಟಾಯಿತು. ಆ ಬಡವನಿಗೆ ಆಧಾರವಾಗಿದ್ದ ಬಿದಿರ ಕಡ್ಡಿ, ಈ ಚಲಕಡ್ಡಿ, ಹುಲ್ಲು ಕಡ್ಡಿ ಇವೆಲ್ಲಾ ಉರಿದು ಬೂದಿಯಾದ್ದಕ್ಕೆ ಆನ ಪಟ್ಟ ಸಂಕಟವನ್ನು ಹೇಳಬೇಕೆ ! ಅವನು ಐಶ್ವರ್ಯವಂತನ ಕಣ್ಣಿಗೆ ಬಿದ್ದು ದೇ ಅವನ ತಪ್ಪಾಯಿತು, ಅದಕ್ಕಾಗಿ ಅವನಿಗೆ ತಕ್ಕ ಶಿಕ್ಷೆಯೂ ಆಯಿತು. ಐಶ್ವರ್ಯದ ಅಹಂಕಾರದ ಮುಂದೆ ಬಡತನದ ದೈನ್ಯ ಎಷ್ಟು ತಾನೇ ಸಾಗೀತು ? ಆದರೂ ಒಂದು ಕೈ ನೋಡೋಣವೆಂದು, ಮೇದರವನು ಆ ವೂರ ಮಂತ್ರಿಯ ಬಳಿಗೆ ಹೋಗಿ ಕಣ್ಣಿನಲ್ಲಿ ನೀರನ್ನು ಸುರಿಸುತ್ತಾ, ತನಗೆ ದೊರೇ ಅಳಿಯನ ದೆಸೆಯಿಂದ ಸಂಭವಿಸಿದ ವಿಪತ್ತನ್ನು ಅರಿಕೆ ಮಾಡಿದನು. ಕೂಡಲೆ ಒಳ್ಳೆಯವನಾಗಿಯೂ ನ್ಯಾಯ ಸರನಾಗಿಯೂ ಇದ್ದ ಆ ಮಂತ್ರಿಯು ದೊರೆಯ ಅಳಿಯನೆಂದೂ ಮಹದೈ ಶ್ವರ್ಯ ವಂತನೆಂದೂ ದಾಕ್ಷಿಣ್ಯವನ್ನು ನೋಡದೆ, ಅವನನ್ನು ಚಾವಡಿಗೆ ಹಿಡ ತರಿಸಿದನು, ಆ ಹಿಂಸಕನಾದ ಅರಸು ತಾನು ಮಾಡಿದ ಅಪರಾಧವನ್ನು ಒಪ್ಪಿ ಕೊಂಡನು. ಆಗ ನ್ಯಾಯಾಧಿಪತಿಯು ಮೇದರವನನ್ನು ನೋಡಿ, -ಅಯ್ಯಾ, ಈ ಅರಸು ತನ್ನನ್ನು ಬಿಟ್ಟರೆ ಇನ್ನು ಸರಿಯೇ ಇಲ್ಲವೆಂದು ಅಹಂಕಾರದಲ್ಲಿ ಉಬ್ಬಿ ಹೋಗಿದಾನೆ. ಆದ್ದರಿಂದ ಬಡವರನ್ನು ಕಂಡರೆ